'ಟಾಕ್ಸಿಕ್' ಚಿತ್ರದ ಮತ್ತೊಬ್ಬ ರೆಬಲ್ ಲೇಡಿ ಪರಿಚಯಿಸಿದ ಟೀಂ; ಯಾರೀ ಗನ್ ಹಿಡಿದ ಬೆಡಗಿ

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಚಿತ್ರದಲ್ಲಿ ಸ್ತ್ರೀ ಪಾತ್ರಗಳಿಗೆ ಹೆಚ್ಚಿನ ಮಹತ್ವ ಇದೆ. ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ಕಿಯಾರಾ ಅದ್ವಾನಿ ಹೀಗೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಚಿತ್ರದ ಮತ್ತೊಂದು ಪಾತ್ರವನ್ನು ಪರಿಚಯಿಸಲಾಗಿದೆ.

ಮುಂಬೈ ಬೆಡಗಿ ತಾರ ಸುತಾರಿಯಾ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದು 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಆಕೆ ಸುಳಿವು ಕೊಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಇದೀಗ ಆಕೆ ಚಿತ್ರದಲ್ಲಿ ನಟಿಸಿರುವುದು ಖಚಿತವಾಗಿದೆ. ರೆಬೆಕಾ ಎಂಬ ಪವರ್‌ಫುಲ್ ಪಾತ್ರದಲ್ಲಿ ಮಿಂಚಿದ್ದಾರೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಗನ್ ಹಿಡಿದು ಖಡಕ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಗೀತು ಮೋಹನ್‌ದಾಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರ ನಿರ್ಮಾಣಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಕೈಜೋಡಿಸಿದ್ದಾರೆ.

Tara Sutaria Joins Yash s Toxic as Rebecca Makes Powerful South Debut

2019ರಲ್ಲಿ 'ಸ್ಟೂಡೆಂಟ್ ಆಫ್‌ ದ ಇಯರ್-2' ಚಿತ್ರದ ಮೂಲಕ ತಾರಾ ಸುತಾರಿಯಾ ಬಾಲಿವುಡ್ ಪ್ರವೇಶಿಸಿದ್ದರು. ಬಳಿಕ ಮಾರ್ಜಾವಾನ್, ತಡಪ್, ಹೀರೊಪಂತಿ-2, ಏಕ್ ವಿಲನ್ ರಿಟರ್ನ್ಸ್, ಅಪೂರ್ವ ಹೀಗೆ ಒಂದು ಸಿನಿಮಾಗಳಲ್ಲಿ ನಟಿಸಿದ್ದರು. ಕಿರುತೆರೆ ಕಾರ್ಯಕ್ರಮಗಳು, ಮ್ಯೂಸಿಕ್ ಆಲ್ಬಮ್‌ಗಳಲ್ಲಿ ಕೂಡ ತಾರಾ ಮಿಂಚಿದ್ದರು. ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಿದ್ದಾರೆ.

ಗಂಗಾ ಆಗಿ ನಯನತಾರಾ, ನಡಿಯಾ ಆಗಿ ಕಿಯಾರಾ ಅದ್ವಾನಿ, ಎಲಿಜಬೆತ್ ಆಗಿ ಹುಮಾ ಖುರೇಷಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಜನವರಿ 8ರಂದು ನಟ ಯಶ್ ಹುಟ್ಟುಹಬ್ಬ. ಆ ದಿನ ಸ್ಪೆಷಕ್ ಟೀಸರ್ ರಿಲೀಸ್ ಮಾಡುವ ಪ್ರಯತ್ನ ಶುರುವಾಗಿದೆ. ಈ ಬಾರಿ ಕೂಡ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುವುದು ಅನುಮಾನ. ಹಾಗಾಗಿ 'ಟಾಕ್ಸಿಕ್' ಟೀಸರ್ ಗಿಫ್ಟ್ ಕೊಡಲು ತಯಾರಿ ನಡೆಸಿದ್ದಾರೆ.

ಈದ್ ಸಂಭ್ರಮದಲ್ಲಿ ಮಾರ್ಚ 19ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಲಿದೆ. ಅದೇ ದಿನ 'ಧುರಂಧರ್- 2' ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ನಿರೀಕ್ಷಿಸಲಾಗುತ್ತಿದೆ. 'ಧುರಂಧರ್' ಸಿನಿಮಾ 1000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಹಾಗಾಗಿ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 'ಕೆಜಿಎಫ್-2' ಬಳಿಯ ಯಶ್ ನಟಿಸುತ್ತಿರುವ ಸಿನಿಮಾ 'ಟಾಕ್ಸಿಕ್'. ಹಾಗಾಗಿ ದೊಡ್ಡದಾಗಿಯೇ ಪ್ಲ್ಯಾನ್ ಮಾಡಿದ್ದಾರೆ.

ಈ ಬಾಕ್ಸಾಫೀಸ್ ಫೈಟ್‌ನಲ್ಲಿ 'ಧುರಂಧರ್'-2 ಕೈ ಮೇಲಾಗಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅಂತವರ ಮಾತು ಸುಳ್ಳಾಗಿಸಲು 'ಟಾಕ್ಸಿಕ್' ಚಿತ್ರತಂಡ ಮುಂದಾಗಿದೆ. ರಿಲೀಸ್ ದಿನಾಂಕ ಬದಲಿಸದೇ ಹೇಳಿದ ಸಮಯಕ್ಕೆ ಸರಿಯಾಗಿ ಸಿನಿಮಾ ತೆರೆಗೆ ತಂದು ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಲೆಕ್ಕಾಚಾರ ಶುರುವಾಗಿದೆ.

ಹಾಲಿವುಡ್ ಕಲಾವಿದರು, ತಂತ್ರಜ್ಞರು 'ಟಾಕ್ಸಿಕ್' ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ದೊಡ್ಡ ದೊಡ್ಡ ಸಂಸ್ಥೆಗಳು ಚಿತ್ರದ ಗ್ರಾಫಿಕ್ಸ್ ವರ್ಕ್ ಜವಾಬ್ದಾರಿ ವಹಿಸಿಕೊಂಡಿದೆ. ವಿದೇಶ ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ.

ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ಕಿಯಾರಾ ಹಾಗೂ ತಾರಾ ಸುತಾರಿಯಾ ಪಾತ್ರಗಳು ಹೇಗಿರುತ್ತದೆ ಎಂದು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ರೆಟ್ರೋ ಸ್ಟೈಲ್‌ನಲ್ಲಿ 60, 70ರ ದಶಕದ ಕತೆಯನ್ನು 'ಟಾಕ್ಸಿಕ್' ಚಿತ್ರದಲ್ಲಿ ಹೇಳಲಾಗ್ತಿದೆ. ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಕಾದು ನೋಡಬೇಕು.

More from Filmibeat

Read more about: yash bollywood toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X