For Quick Alerts
  ALLOW NOTIFICATIONS  
  For Daily Alerts

  ‘ನಿಮ್ಮ ತಾರಾಗೆ ’ ಅನ್ವಯವಾಗದ ಗಾದೆ

  By Super
  |

  18ಕ್ಕೆ ನಾಯಕಿ, 28ಕ್ಕೆ ಪೋಷಕಿ, 35ಕ್ಕೆ ತಾಯಿ. ಇದು ನಟಿಯಾಬ್ಬಳ ಭವಿಷ್ಯದ ಜಾತಕ. ಆದರೆ 'ನಿಮ್ಮ" ತಾರಾ ಈ ಅಲಿಖಿತ ನಿಯಮವನ್ನು ಮುರಿದಿದ್ದಾರೆ. ಆರಂಭದಲ್ಲಿ ತಂಗಿ, ಅನಂತರ ನಾಯಕಿ, ಪೋಷಕಿ, ಈಗ ಮತ್ತೆ ನಾಯಕಿ. ಒಂದು ಕಾಲದಲ್ಲಿ ಅಂಬರೀಶ್‌ಗೆ ತಂಗಿ, ನಾಯಕಿಯಾಗಿ ನಟಿಸಿದವಳೇ ಈಗ ಅದೆ ನಟನ ಮಗಳಾಗಿ ನಟಿಸುತ್ತಿದ್ದಾಳೆ ಎಂದರೆ ತಮಾಷೆಯಲ್ಲ. 30 ಪ್ಲಸ್‌ ತಾರಾಗೆ ಈಗ ವಿಪರೀತ ಬೇಡಿಕೆ. ಒಂದೆಡೆ 'ಮುನ್ನುಡಿ" ಯಂಥ ಆರ್ಟ್‌ ಶಾರ್ಟ್‌ ಫಿಲಂ, ಇನ್ನೊಂದೆಡೆ ರಾಕ್‌ ಲೈನ್‌ ಪ್ರೊಡಕ್ಷನ್ಸ್‌ನ ಅದ್ದೂರಿ ಕಮರ್ಷಿಯಲ್‌ ಚಿತ್ರ. ಇವೆಲ್ಲದರ ಮಧ್ಯೆ ವಾರಕ್ಕೆರಡು ಸಾರ್ವಜನಿಕ ಸಮಾರಂಭಗಳಲ್ಲಿ ಮುಖ್ಯ ಅತಿಥಿ.

  ದೀಪ ಬೆಳಗುವುದರಲ್ಲಿ ಅಥವಾ ಟೇಪ್‌ ಕಟ್‌ ಮಾಡುವುದರಲ್ಲಿ ತಾರಾ ಒಂದು ದಾಖಲೆಯನ್ನೇ ಸೃಷ್ಠಿಸಿರಬಹುದು. ರಾಜಕೀಯ ಸಭೆಯಿರಲಿ, ಸಾಸಂಸ್ಕೃತಿಕ ವೇದಿಕೆಯಿರಲಿ, ಅಲ್ಲಿ ತಾರಾ ಇರುತ್ತಾರೆ. ಪೊಂಪುಹಾರ್‌ ಪ್ರದರ್ಶನದಿಂದ, ಚಿನ್ನಾಭರಣಗಳ ಅಂಗಡಿ ಉದ್ಘಾಟನೆ ತನಕ ಈಕೆಯ ರೇಂಜ್‌ ವಿಸ್ತರಿಸಿದೆ. ಪ್ರತಿಯಾಬ್ಬರಿಗೂ ತಾರಾನೇ ಯಾಕೆ ಬೇಕು ? ಆಕೆಯೇನೂ ಶ್ರೀದೇವಿಯಲ್ಲ , ಜನಪ್ರಿಯತೆಯ ಲೆಕ್ಕದಲ್ಲೂ ಅವರೇಜ್‌. ಆದರೆ ಆಕೆಯ ಕೈಗುಣ ಚೆನ್ನಾಗಿದೆಯಂತೆ. ಆಕೆ ಉದ್ಘಾಟಿಸಿದ ಎಲ್ಲಾ ಸಮಾರಂಭಗಳೂ ಯಶಸ್ವಿಯಾಗಿವೆಯಂತೆ , ಅಂಗಡಿಗಳು ಲಾಭದಾಯಕವಾಗಿ ನಡೀತಾ ಇವೆಯಂತೆ. ಇಂಥಾದ್ದೊಂದು ನಂಬಿಕೆ ಬೆಂಗಳೂರಿನಾಚೆಗೂ ಹರಡಿದೆ. ಅದು ತಾರಾಗೂ ಗೊತ್ತಿಲ್ಲದೇ ಇಲ್ಲ. ಆ ಕಾರಣಕ್ಕೆ ಆಕೆ ಈ ನಂಬಿಕೆಯನ್ನು ಕ್ಯಾಷ್‌ ಮಾಡಿಕೊಳ್ಳುತ್ತಿದ್ದಾರೆ. ಸಮಾರಂಭವೊಂದಕ್ಕೆ 25 ಸಾವಿರ ರೂಪಾಯಿ ಶುಲ್ಕ ವಿಧಿಸುತ್ತಾರೆ. ಕೇರಳದಲ್ಲಿ ವಿನಯಾ ಪ್ರಸಾದ್‌ ಕೂಡಾ ಇದೇ ತಂತ್ರ ಅನುಸರಿಸುತ್ತಿದ್ದಾರೆ. ಇದು 'ಸ್ತ್ರೀ" ಸೀರಿಯಲ್‌ ಪ್ರಭಾವ. ಈಗ ವಿನಾಯಗೆ ದುಬೈ, ಅಮೆರಿಕಾದಿಂದಲೂ ಆಹ್ವಾನ ಬರುತ್ತಿದೆ. ಖಾಸಗಿ ಬದುಕಲ್ಲೂ ತಾರಾ ಇತರ ತಾರೆಯರಿಗಿಂತ ಭಿನ್ನ. ಮಿಕ್ಕವರೆಲ್ಲರೂ ವಯಸ್ಸಾಗುತ್ತಿದ್ದಂತೆ, ಚರಿಷ್ಮಾ ಜಾರುತ್ತಿದ್ದಂತೆ ಮದುವೆಯಾಗಿ ಸೆಟ್ಲ್‌ ಆಗೋದಕ್ಕೆ ಹಾತೊರೆಯುತ್ತಿದ್ದರೆ, ತಾರಾ ಆ ಬಗ್ಗೆ ಇನ್ನೂ ತಲೆ ಕೆಡಿಸಿಕೊಂಡಿಲ್ಲ. 'ತಾರಾ ಮದುವೆಯಾಗುತ್ತಾರೆ" ಅನ್ನುವ ಸುದ್ದಿ ಕಳೆದ ಹತ್ತು ವರ್ಷಗಳಲ್ಲಿ ಹತ್ತು ಸಾರಿಯಾದರೂ ಕೇಳಿ ಬಂದಿತ್ತು. ಶಶಿ ಕುಮಾರ್‌ರಿಂದ ಹಿಡಿದು ಛಾಯಾಗ್ರಾಹಕರು, ನೀರ್ದೇಶಕರು, ಪತ್ರಕರ್ತರು ಹೀಗೆ ತಾರಾಪತಿಯಾಗಲು ಸಾಹಸ ಮಾಡಿದ್ದರು. ಇವರೆಲ್ಲರ ಪ್ರೇಮ ಸಂದೇಶಗಳನ್ನು ಆನಂದದಿಂದ ಅನುಭವಿಸಿದ ತಾರಾ ಕೊನೆಯ ಕ್ಷಣದಲ್ಲಿ ತನಗೇನೂ ಗೊತ್ತಿಲ್ಲ ಎಂಬಂತೆ ನಟಿಸಿದ್ದರು. ಈಗ ಗಾಸಿಪ್‌ಗಳು ನಿಂತುಹೋಗಿವೆ, ತಾರಾಗೆ ವಯಸ್ಸಾಗಿದೆ, ಅದನ್ನು ಮರೆಮಾಚುವುದಕ್ಕೆ ಡಯಟಿಂಗ್‌ ನಡೀತಾ ಇದೆ. ಇತ್ತೀಚೆಗೆ ತಾರಾ ಸೊಗಸಾದ ಮನೆಯಾಂದನ್ನು ಕಟ್ಟಿದ್ದಾರೆ.

  'ಮನೆ ಕಟ್ಟಿನೋಡು , ಮದುವೆ ಮಾಡಿ ನೋಡು" ಗಾದೆ ತಾರಾಗೆ ಅನ್ವಯವಾಗುವುದಿಲ್ಲ.

  English summary
  Tara: lonely but not alone

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X