»   » 'ತಾರಕ್' ಹಾಡಿಗೆ ಡ್ಯಾನ್ಸ್ ಮಾಡಿ, 25 ಸಾವಿರ ಗೆಲ್ಲಿ.!

'ತಾರಕ್' ಹಾಡಿಗೆ ಡ್ಯಾನ್ಸ್ ಮಾಡಿ, 25 ಸಾವಿರ ಗೆಲ್ಲಿ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದ್ದು, ಅಭಿಮಾನಿಗಳನ್ನ ಚಿತ್ರಮಂದಿರಕ್ಕೆ ಸೆಳೆಯಲು ಚಿತ್ರತಂಡ ಹೊಸ ಬಗೆಯ ಪ್ರೊಮೋಷನ್ ಗಳನ್ನ ಮಾಡುತ್ತಿದೆ.

'ತಾರಕ್' ಸಿನಿಮಾಗೆ ಡಿ-ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಅಭಿಮಾನಿಗಳ ಈ ಜೋಶ್ ನ್ನ ಮತ್ತಷ್ಟು ಹೆಚ್ಚಿಸಲು ಚಿತ್ರತಂಡ ಹೊಸ ಮಾಸ್ಟರ್ ಪ್ಲಾನ್ ಮಾಡಿದೆ. ಹೌದು, ತಾರಕ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ರೆ 25 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದೆ.

'ತಾರಕ್' ದರ್ಶನ್ ಹಾಗೂ ಕೂಲ್ ಕ್ಯಾಪ್ಟನ್ ಧೋನಿ: ಇಬ್ಬರ ನಡುವೆ ಒಂದು ಲಿಂಕ್ ಇದೆ!

Tarak Dance Competition Starts

ಹೌದು, 'ತಾರಕ್' ಚಿತ್ರದ ಹಾಡಿಗೆ ನೀವು ಡ್ಯಾನ್ಸ್ ಮಾಡಿ ಈ ವಿಡಿಯೋ ಚಿತ್ರತಂಡಕ್ಕೆ ಕಳುಹಿಸಿ ಬಹುಮಾನ ಗೆಲ್ಲಬಹುದು. ಅತ್ಯುತ್ತಮ ಎರಡು ವಿಡಿಯೋಗೆ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 25 ಸಾವಿರ ಮತ್ತು ದ್ವಿತೀಯ ಬಹುಮಾನ 10 ಸಾವಿರ ರೂಪಾಯಿ ನೀಡಲಾಗುತ್ತಿದೆ.

ಗೆಳೆಯ ವಿನೋದ್ ಪ್ರಭಾಕರ್ ಬೆಂಬಲಕ್ಕೆ ನಿಂತ 'ದಾಸ' ದರ್ಶನ್

Tarak Dance Competition Starts

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೆ. 'ತಾರಕ್' ಚಿತ್ರದ ಯಾವುದಾದರೂ ಒಂದು ಹಾಡನ್ನು ಆಯ್ಕೆ ಮಾಡಿಕೊಂಡು, ಆ ಹಾಡಿಗೆ ನಿಮ್ಮದೇ ಸ್ಟೈಲ್ ನಲ್ಲಿ ಡ್ಯಾನ್ಸ್ ಮಾಡಿ, ಆ ವಿಡಿಯೋ chowdeshwaricine@gmail.com ಗೆ ಕಳುಹಿಸಿ. ನಿಮ್ಮ ಡ್ಯಾನ್ಸ್ ವಿಡಿಯೋ ಕಳುಹಿಸಿಕೊಡಲು ಕೊನೆಯ ದಿನ ಸೆಪ್ಟೆಂಬರ್ 27.

ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಬರ್ತಿದ್ದಾನೆ 'ತಾರಕ್'

Tarak Dance Competition Starts

ಮಿಲನ ಪ್ರಕಾಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಡೈನಾಮಿಕ್ ಹೀರೋ ದೇವರಾಜ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ ಹಾಡುಗಳು ಸೂಪರ್ ಹಿಟ್ ಎನಿಸಿಕೊಂಡಿದೆ. ದಸರಾ ಹಬ್ಬದ ಪ್ರಯುಕ್ತ ಸೆಪ್ಟಂಬರ್ 29 ರಂದು ತಾರಕ್ ಸಿನಿಮಾ ತೆರೆಕಾಣುತ್ತಿದೆ.

English summary
Challenging Star Darshan's Tarak Team Conduct A 'Dance Competition'. Winning Prize 25,000 Rs. ದರ್ಶನ್ ಅಭಿನಯದ ತಾರಕ್ ಚಿತ್ರತಂಡ 'ನೃತ್ಯ ಸ್ಪರ್ಧೆ'ಯನ್ನ ಅಯೋಜಿಸಿದೆ. ಮೊದಲ ಬಹುಮಾನ 25 ಸಾವಿರ. ಹೆಚ್ಚಿನ ಮಾಹಿತಿಗೆ ಈ ಸ್ಟೋರಿ ಓದಿ....

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X