25 ದಿನಗಳನ್ನ ಪೂರೈಸಿದ 'ತಾರಕಾಸುರ'
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ತಾರಕಾಸುರ' ಸಿನಿಮಾ ಈಗ 25 ದಿನಗಳನ್ನ ಪೂರೈಸಿದ್ದು, 50ನೇ ದಿನದತ್ತ ಮುನ್ನುತ್ತಿದೆ. ಈ ಗೆಲುವು ಇದು ಇಡೀ ಚಿತ್ರತಂಡದ ಮುಖದಲ್ಲಿ ನಗು ಮೂಡಿಸಿದೆ.
ನವೆಂಬರ್ 23ರಂದು ಬಿಡುಗಡೆಯಾಗಿದ್ದ 'ತಾರಕಾಸುರ' ಸಿನಿಮಾ ಈಗ 25 ದಿನಗಳ ಪೂರೈಸುವ ತವಕದಲ್ಲಿದೆ. ಮೊದಲ ದಿನದಿಂದ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಹೆಚ್ಚು ಜನರು ಸಿನಿಮಾ ನೋಡುವ ಹಾಗೆ ಮಾಡಿತ್ತು. ಒಂದು ಕಡೆ ಪ್ರೇಕ್ಷಕ ಮತ್ತೊಂದು ಕಡೆ ವಿಮರ್ಶಕ ಇಬ್ಬರಿಗೂ ಸಿನಿಮಾ ತೃಪ್ತಿ ನೀಡಿತ್ತು.
'ರಥಾವರ' ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿದ್ದ ಚಂದ್ರಶೇಖರ ಬಂಡಿಯಪ್ಪ ಮೇಲೆ ದೊಡ್ಡ ನಿರೀಕ್ಷೆ ಇತ್ತು. ಅದೇ ರೀತಿ ಸಿನಿಮಾವನ್ನ ತಮ್ಮ ಸ್ಟೈಲ್ ನಲ್ಲಿ ಮಾಡಿದ್ದ ಅವರು ಪ್ರೇಕ್ಷಕರಿಂದ ಚಪ್ಪಾಳೆ ಪಡೆದರು.

ನಟ ವೈಭವ್ ಹಾಗೂ ಹಾಲಿವುಡ್ ನಟ ಡ್ಯಾನಿ ಸಫಾನಿ ನಟನೆ ಮೈ ಜುಮ್ ಎನ್ನುವಂತೆ ಇತ್ತು. ಮಾನ್ವಿತಾ ಕೂಡ ಗಮನ ಸೆಳೆದಿದ್ದರು. ನಿರ್ಮಾಪಕ ನರಸಿಂಹಲು ತಮ್ಮ ಮಗನಿಗಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಅವರೂ ಸಂತಸದಲ್ಲಿ ಇದ್ದಾರೆ.
English summary
'Tarakasura' kannada movie completed 25 days.


Click it and Unblock the Notifications