'ತಾರಕಾಸುರ'ನಿಗೆ ಕಂಟಕ : ಬಿಡುಗಡೆಗೆ ವಿರೋಧ
ಈ ಶುಕ್ರವಾರ ರಿಲೀಸ್ ಆಗುವ ಸಿನಿಮಾಗಳ ಪೈಕಿ 'ತರಕಾಸುರ' ಕೂಡ ಒಂದಾಗಿತ್ತು. ಆದರೆ, ಈ ಸಿನಿಮಾಗೆ ಈಗ ಸಮಸ್ಯೆ ಶುರುವಾಗಿದೆ.
ಈ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತ ಪಡಿಸಲಾಗುತ್ತಿದೆ. ಬುಡುಬುಡುಕೆ ಗೋಂದಳಿ ಸಮಾಜ ಚಿತ್ರದ ರಿಲೀಸ್ ಅಡ್ಡಿ ಪಡಿಸಿದೆ. ಈ ಚಿತ್ರ ಬುಡುಬುಡುಕೆ ಜನಾಂಗದ ಬಗ್ಗೆ ಇದ್ದು, ಸಿನಿಮಾ ಮೊದಲಿಗೆ ನಮಗೆ ತೋರಿಸಿ ಎಂದು ಸಂಘದ ಅಧ್ಯಕ್ಷ ಕರಿಯಪ್ಪ ಹೇಳಿದ್ದಾರೆ.
'ತಾರಕಾಸುರ' ಬುಡುಬುಡುಕೆ ಶಾಸ್ತ್ರ ಹೇಳುವ ವ್ಯಕ್ತಿಗೆ ಸಂಬಂಧಪಟ್ಟ ಸಿನಿಮಾವಾಗಿದ್ದು, ಬಿಡುಗಡೆಗೆ ತೊಂದರೆ ಎದುರಾಗಿದೆ. ಸಿನಿಮಾ ತೋರಿಸದೇ ಹೋದಲ್ಲಿ ಕೋರ್ಟ್ ಮೆಟ್ಟಿಲೇರಲು ಬುಡುಬುಡುಕೆ ಗೊಂದಳಿ ಸಮಾಜ ನಿರ್ಧಾರ ಮಾಡಿದೆ. ಚಿತ್ರತಂಡ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರೆ, ಈ ವಾರ ಚಿತ್ರ ತೆರೆಗೆ ಬರುತ್ತದೆ.

ಅಂದಹಾಗೆ, 'ರಥಾವರ' ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಚಿತ್ರದ ನಿರ್ದೇಶನ ಮಾಡಿದ್ದಾರೆ. ಮಾನ್ವಿತಾ ಹರೀಶ್, ವೈಭವ್ ಹಾಗೂ ಹಾಲಿವುಡ್ ನಟ ಡ್ಯಾನಿ ಸಫಾನಿ ಚಿತ್ರದಲ್ಲಿ ನಟಿಸಿದ್ದಾರೆ.
More from Filmibeat
English summary
'Tarakasura' kannada movie controversy.


Click it and Unblock the Notifications











