»   » ಕಾನೂರು ಹೆಗ್ಗಡಿತಿಗೆ ಕಂಕಣ ಭಾಗ್ಯ

ಕಾನೂರು ಹೆಗ್ಗಡಿತಿಗೆ ಕಂಕಣ ಭಾಗ್ಯ

Subscribe to Filmibeat Kannada

*ಗುಪ್ತಾಚಾರ

ತಾರಾ ಮದುವೆ ನಿಶ್ಚಯವಾಗಿದೆ.

ತಾರೆಯರ ವಿವಾಹದ ಸುದ್ದಿ ಸಾಮಾನ್ಯವಾಗಿ ಬಹಿರಂಗವಾಗುವ ಮುನ್ನ ಹಲವು ಮುಚ್ಚ ಮರೆಗಳನ್ನು ಸರಿಸಿಯೇ ಹೊರಬರಬೇಕು. ಮೊನ್ನೆ ಮೊನ್ನೆಯಷ್ಟೇ ತಾರಾ ತಮ್ಮ ಗೆಳೆಯರಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಊಟ ಹಾಕಿಸಿದರು. ಏನು ನಿಮ್ಮ ಮದುವೆ ಗೊತ್ತಾಯಿತಾ ಎಂದು ಪತ್ರಕರ್ತರೊಬ್ಬರು ಕೇಳಿದಾಗ ಇಲ್ಲ, ನನಗೆ ಪ್ರಶಸ್ತಿ ಬಂದ ಸಂತಸದಲ್ಲಿ ಈ ಔತಣಕೂಟ, ಮದುವೆ ಆದ್ರೆ ನಿಮಗೆಲ್ಲಾ ಹೇಳ್ದೆ ಇರ್ತೀನಾ ಎಂದಷ್ಟೇ ಹೇಳಿ ಸುಮ್ಮನಾಗಿದ್ದರು.

ಈಗ ಇದ್ದಕ್ಕಿದ್ದಂತೆ ತಾರಾ - ಗೌತಮ್‌ ಎಂಬುವವರನ್ನು ತಮ್ಮ ಬಾಳಸಂಗಾತಿಯಾಗಿ ಆರಿಸಿದ್ದಾರೆ. ಗೌತಮ್‌ ಸಕಲೇಶಪುರದವರು. ಡಿಸೆಂಬರ್‌ 18ರಂದು ಈ ಇಬ್ಬರ ಮದುವೆಯ ನಿಶ್ಚಿತಾರ್ಥ ನಡೆದಿದೆ. ಆದರೂ ಇದು ಇಷ್ಟು ದಿನ ಗುಟ್ಟಾಗೇ ಉಳಿದಿತ್ತು. ಅಂದಹಾಗೆ ವಿಷಯ ಗೊತ್ತೆ ? ತಾರಾದು ಪ್ರೇಮ ವಿವಾಹ ಅಲ್ಲ. ಪ್ಯೂರ್‌ಲಿ ಅರೇಂಜ್‌ಡ್‌ ಮ್ಯಾರೇಜ್‌. ನಿಶ್ಚಿತಾರ್ಥವೇನೋ ಆಗಿದೆ. ಮದುವೆಯ ದಿನ ಇನ್ನೂ ನಿರ್ಧಾರ ಆಗಿಲ್ಲ ಎಂಬುದು ತಾಜಾ ಸುದ್ದಿ.

ಹದಿನಾರು ವರ್ಷಗಳ ಹಿಂದೆ ಕನ್ನಡ ಚಿತ್ರರಂಗ ಪ್ರವೇಶಿಸಿದ ತಾರಾ ಏಳು ಬೀಳುಗಳನ್ನು ಕಂಡು, ಕೊನೆಗೊಮ್ಮೆ ಬೇಸತ್ತು ಕನ್ನಡ ಚಿತ್ರರಂಗದಿಂದಲೇ ದೂರವಾಗುವ ನಿರ್ಧಾರವನ್ನೂ ತಳೆದಿದ್ದರು. ಕೊನೆಗೆ ಟಿ.ವಿ. ಧಾರಾವಾಹಿಗಳಲ್ಲಿ ಮಿಂಚಿದ ತಾರಾಗೆ ಕಾನೂರು ಹೆಗ್ಗಡಿತಿ ರಾಷ್ಟ್ರ ಪ್ರಶಸ್ತಿ ಹಾಗೂ ಸುಪ್ರಭಾತ ವಿಡಿಯೋಕಾನ್‌ ಪ್ರಶಸ್ತಿ ತಂದುಕೊಟ್ಟಿತು.

150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ತಾರಾ, ಪ್ರಶಸ್ತಿಗಳ ಪಡೆದ ಜೋಷ್‌ನಲ್ಲೇ ಮದುವೆ ಆಗ್ತಾ ಇದ್ದಾರೆ. ಸುಮನ್‌ ನಗರ್‌ಕರ್‌, ಮಾಳವಿಕಾ, ಅವಿನಾಶ್‌, ಸುಧಾರಾಣಿ ಮದುವೆಗಳ ಸರಣಿಯಲ್ಲಿ ತಾರಾ ಮದುವೆ ಹೊಸ ಸೇರ್ಪಡೆ.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada