For Quick Alerts
  ALLOW NOTIFICATIONS  
  For Daily Alerts

  ಪುನೀತ್, ತರುಣ್ ಇವರಿಬ್ಬರೂ 'ತಂದೆಗೆ ತಕ್ಕ ಮಕ್ಕಳು'

  By Pavithra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗಾಗಲೇ ಕೋಟ್ಯಾಂತರ ಅಭಿಮಾನಿಗಳಿಂದ ತಂದೆಗೆ ತಕ್ಕಮಗ ಎಂದು ಕರೆಸಿಕೊಂಡಿದ್ದಾರೆ. ಈಗ ನಟ ತರುಣ್ ಸುಧೀರ್ ಕೂಡ ತಂದೆಗೆ ತಕ್ಕ ಮಗ ಎನ್ನಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ತಂದೆಗೆ ತಕ್ಕ ಮಕ್ಕಳಾದ ಇವರಿಬ್ಬರು ಒಟ್ಟಿಗೆ ಫಿಲ್ಮ್ ಫೇರ್ ಅವಾರ್ಡ್ ಪಡೆದು ಕೊಂಡಿದ್ದಾರೆ.

  'ಚೌಕ' ಸಿನಿಮಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ತರುಣ್ ಸುಧೀರ್ ಪಡೆದುಕೊಂಡಿದ್ದರೆ ನಟ ಪುನೀತ್ ರಾಜ್ ಕುಮಾರ್ 'ರಾಜಕುಮಾರ' ಸಿನಿಮಾದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇಬ್ಬರು ಪ್ರಶಸ್ತಿ ಪಡೆದುಕೊಂಡ ನಂತರ ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದರು.

  ಪ್ರಶಸ್ತಿ ಗೆದ್ದವರ ಮಾತು : ಪುನೀತ್, ಶೃತಿ, ತರುಣ್, ಧನಂಜಯ್ ಸಂತಸಪ್ರಶಸ್ತಿ ಗೆದ್ದವರ ಮಾತು : ಪುನೀತ್, ಶೃತಿ, ತರುಣ್, ಧನಂಜಯ್ ಸಂತಸ

  ಪುನೀತ್ ಹಾಗೂ ತರುಣ್ ಪ್ರಶಸ್ತಿ ಹಿಡಿದು ತೆಗೆಸಿಕೊಂಡ ಫೋಟೋವನ್ನು ಹಾಗೂ ಸುಧೀರ್ ಮತ್ತು ಡಾ ರಾಜ್ ಕುಮಾರ್ ಒಟ್ಟಿಗಿರುವ ಫೋಟೋವನ್ನು ತರಣ್ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಅದರ ಜೊತೆಯಲ್ಲಿ "ನಾನು ತಿಳಿದಿರುವ ಅತ್ಯಂತ ವಿನಮ್ರ ವ್ಯಕ್ತಿ ಅಪ್ಪು ಸರ್. ಅಪ್ಪಾಜಿ ಮತ್ತು ಅಪ್ಪ ದೊಡ್ಡ ಬಂಧವನ್ನು ಹಂಚಿಕೊಂಡಿದ್ದರು ಈಗ ಅದೇ ಪರಂಪರೆಯು ಮುಂದುವರಿದಿದೆ" ಎಂದು ಬರೆದುಕೊಂಡಿದ್ದಾರೆ.

  ತರುಣ್ ಸಿನಿಮಾರಂಗದಲ್ಲಿ ಅತ್ಯುತ್ತಮ ತಂತ್ರಜ್ಞ ಹಾಗೂ ನಿರ್ದೇಶಕ ಆಗುವುದರಲ್ಲಿ ಸಂಶಯವಿಲ್ಲ ಅಷ್ಟೇ ಅಲ್ಲದೆ ಉತ್ತಮ ನಟ ಹಾಗೂ ನೃತ್ಯಗಾರ. ಸದ್ಯ ಫೋಟೋದಲ್ಲಿ ಒಂದಾಗಿ ಕಾಣಿಸಿಕೊಂಡಿರುವ ಈ ಜೋಡಿ ಆದಷ್ಟು ಬೇಗ ಸಿನಿಮಾದಲ್ಲಿ ಒಂದಾಗಲಿ ಎನ್ನುವುದು ಅಭಿಮಾನಿಗಳ ಆಶಯ.

  English summary
  Kannada director Tarun Sudhir and actor Puneeth Rajkumar have bagged the Filmfare Award. Tarun wrote on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X