For Quick Alerts
  ALLOW NOTIFICATIONS  
  For Daily Alerts

  'ಶ್ರೀಮನ್ನಾರಾಯಣ'ನ ಬಗ್ಗೆ ತರುಣ್ ಸುಧೀರ್ ಮಾಡಿದ್ದು ವ್ಯಂಗ್ಯನಾ ಮೆಚ್ಚುಗೆನಾ?

  |
  Avane Srimannarayana Movie: ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದ್ದೇ ಹವಾ

  ಸ್ಯಾಂಡಲ್ ವುಡ್ ನಲ್ಲಿ ಸದ್ಯ ನಟ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದ್ದೇ ಹವಾ. ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆದ ಶ್ರೀಮನ್ನಾರಾಯಣ ಪೋಸ್ಟರ್ ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

  ಟೀಸರ್ ರಿಲೀಸ್ ಗೂ ಮೊದಲು 'ಅವನೇ ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರತಂಡಕ್ಕೆ ಒಂದಿಷ್ಟು ಪ್ರಶ್ನೆ ಎದುರಾಗತೊಡಗಿತ್ತು. ಯಾಕಂದ್ರೆ ಈ ಫೋಸ್ಟರ್ ನಕಲು ಮಾಡಿದ್ದಾರಾ ಎನ್ನುವ ಅನುಮಾನ ಅನೇಕರಲ್ಲಿ ಕಾಡುತ್ತಿತ್ತು.

  ಹುಟ್ಟುಹಬ್ಬದ ದಿನ ಬಿಂದಾಸ್ ಹುಲಿ ಡ್ಯಾನ್ಸ್ ಮಾಡಿದ ರಕ್ಷಿತ್ ಶೆಟ್ಟಿ

  ಯಾಕಂದ್ರೆ ಹಿಂದಿಯ 'ಫಟ ಪೋಸ್ಟರ್ ನಿಕ್ಲ ಹೀರೋ' ಚಿತ್ರದಿಂದ ಯಥಾವತ್ತಾಗಿ ಕಾಪಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕ ತರುಣ್ ಸುಧೀರ್ ರಕ್ಷಿತ್ ಗೆ ವ್ಯಂಗ್ಯವಾಗಿ ಶುಭ ಕೋರಿದ್ದಾರೆ. ಮುಂದೆ ಓದಿ..

  'ಫಟ ಪೋಸ್ಟರ್ ನಿಕ್ಲ ಹೀರೋ' ಎಂದ ತರುಣ್

  ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಶುಭಕೋರುವ ಜೊತೆಗೆ ಹಿಂದಿಯ 'ಫಟ ಫೋಸ್ಟರ್ ನಿಕ್ಲ ಹೀರೋ' ಚಿತ್ರದ ಟೈಟಲ್ ಅನ್ನು ಸೂಚಿಸಿ ಪೋಸ್ಟರ್ ತುಂಬಾ ಸುಂದರವಾಗಿದೆ ಎಂದು ಹೇಳಿದ್ದಾರೆ. ಇದು ತುರುಣ್ ಸುಧೀರ್ ಮಾಡಿರುವ ವ್ಯಂಗ್ಯನ ಅಥವಾ ಮೆಚ್ಚುಗೆನಾ ಎಂದು ಅನೇಕರಿಗೆ ಗೊಂದಲವಾಗಿದೆ. 'ಅವನೇ ಶ್ರೀಮನ್ನಾರಾಯಣ' ಪೋಸ್ಟರ್ 'ಫಟ ಪೋಸ್ಟರ್ ನಿಕ್ಲ ಹೀರೋ' ಚಿತ್ರದಿಂದ ನಕಲು ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ತರುಣ್ ಸುಧೀರ್ ಟ್ವೀಟ್ ಗೊಂದಲ ಮೂಡಿಸಿದೆ.

  'ಅವನೇ ಶ್ರೀಮನ್ನಾರಾಯಣ' ಟೀಸರ್ ಕ್ವಾಲಿಟಿ ಕಂಡು ಜೈ ಎಂದ ಕನ್ನಡಿಗರು

  ತರುಣ್ ಸುಧೀರ್ ಗೆ ನೆಟ್ಟಿಗರ ಪ್ರಶ್ನೆ

  ತರುಣ್ ಸುಧೀರ್ ಗೆ ನೆಟ್ಟಿಗರ ಪ್ರಶ್ನೆ

  ತರುಣ್ ಸುಧೀರ್ ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆ ಅನೇಕರು 'ರಾಬರ್ಟ್' ಪೋಸ್ಟರ್ ಶೇರ್ ಮಾಡಿ ಇದು ಕಾಪಿ ಅಲ್ವಾ ಎಂದು ತರುಣ್ ಸುಧೀರ್ ಅವರನ್ನು ಪ್ರಶ್ನಿಸುತ್ತಿದ್ದಾರೆ. 'ರಾಬರ್ಟ್' ಪೋಸ್ಟರ್ ಅನ್ನು ಮತ್ತು ಅದೇ ರೀತಿ ಇರುವ ಹಾಲಿವುಡ್ ನ ಒರಿಜಿನಲ್ ಪೋಸ್ಟರ್ ಗೆ ಹೋಲಿಸಿ ತರುಣ್ ಸುಧೀರ್ ಗೆ ಪೋಸ್ಟ್ ಮಾಡುತ್ತಿದ್ದಾರೆ.

  ಟ್ರೈಲರ್ ನಲ್ಲಿ ಈ ಡೈಲಾಗ್ ಇಲ್ಲ

  ಟ್ರೈಲರ್ ನಲ್ಲಿ ಈ ಡೈಲಾಗ್ ಇಲ್ಲ

  'ಫಟ ಪೋಸ್ಟರ್ ನಿಕ್ಲ ಹೀರೋ' ಎನ್ನುವ ಡೈಲಾಗ್ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಇಲ್ಲ. ಪೋಸ್ಟರ್ ಮಾತ್ರ ಹಿಂದಿ ಸಿನಿಮಾದ ಪೋಸ್ಟರ್ ಅನ್ನೇ ಹೋಲುತ್ತಿದೆ. ಅಲ್ಲದೆ ಈ ಟೈಟಲ್ ಅನ್ನು ಹಾಕಿ ಡಬಲ್ ಕೋಟ್ ಮಾಡಿದ್ದಾರೆ. ಹಾಗಾಗಿ ತರುಣ್ ಸುಧೀರ್ ನಿಜಕ್ಕು 'ಅವನೇ ಶ್ರೀಮನ್ನಾರಾಯಣ'ನಿಗೆ ವ್ಯಂಗ್ಯ ಮಾಡಿರ ಬಹುದು ಎನ್ನುವ ಅನುಮಾನ ದಟ್ಟವಾಗಿ ಕಾಡುತ್ತಿದೆ.

  ಬಾಲಿವುಡ್ ಚಿತ್ರವನ್ನ ಹೋಲುತ್ತಿದೆ ಶ್ರೀಮನ್ನಾರಾಯಣನ ಪೋಸ್ಟರ್

  'ಫಟ ಪೋಸ್ಟರ್ ನಿಕ್ಲ ಹೀರೋ' ಹಿಂದಿ ಡೈಲಾಗ್

  'ಫಟ ಪೋಸ್ಟರ್ ನಿಕ್ಲ ಹೀರೋ' ಹಿಂದಿ ಡೈಲಾಗ್

  ಸದ್ಯ ಚರ್ಚೆಯಾಗುತ್ತಿರುವ 'ಫಟ ಪೋಸ್ಟರ್ ನಿಕ್ಲ ಹೀರೋ' ಹಿಂದಿ ಸಿನಿಮಾವೊಂದರ ಡೈಲಾಗ್. ನಾಸಿರುದ್ದೀನ್ ಶಾ ಅಭಿನಯದ ಚಿತ್ರದ ಡೈಲಾಗ್ ಫೇಮಸ್ ಆಗಿತ್ತು. ನಾಸಿರುದ್ದೀನ್ ಶಾ ಪೋಸ್ಟರ್ ಅನ್ನು ಹರಿದು ನುಸುಳಿ ಬರುವ ದೃಶ್ಯವದು. ಅದೆ ಹೆಸರಿನಲ್ಲಿ ಶಾಹಿದ್ ಕಪೂರ್ ಕೂಡ ಒಂದು ಸಿನಿಮಾ ಮಾಡಿದ್ದಾರೆ. ಅದೇ ಪೋಸ್ಟರ್ ಅನ್ನು ಶ್ರೀಮನ್ನಾರಾಯಣ ಚಿತ್ರದಲ್ಲಿ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.

  'ಉಳಿದವರು ಕಂಡಂತೆ' ಚಿತ್ರದಲ್ಲಿದೆ ಡೈಲಾಗ್

  'ಉಳಿದವರು ಕಂಡಂತೆ' ಚಿತ್ರದಲ್ಲಿದೆ ಡೈಲಾಗ್

  ರಕ್ಷಿತ್ ಶೆಟ್ಟಿ ಅಭಿನಯದ 'ಉಳಿದವರು ಕಂಡಂತೆ' ಚಿತ್ರದಲ್ಲೂ 'ಫಟ ಪೋಸ್ಟರ್ ನಿಕ್ಲ ಹೀರೋ' ಡೈಲಾಗ್ ಬಳಸಲಾಗಿದೆ. ರಕ್ಷಿತ್ ಬಾಗಿಲನ್ನು ತಳ್ಳಿಕೊಂಡು ಒಳನುಗ್ಗುವಾಗ ಈ ಡೈಲಾಗ್ ಹೇಳಿಕೊಂಡು ಎಂಟ್ರಿ ಕೊಡುತ್ತಾರೆ. ಈಗ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ಅನ್ನು ಹಾಗೆ ಡಿಸೈನ್ ಮಾಡಿರುವುದು ವಿಶೇಷವಾಗಿದೆ.

  English summary
  Kannada director Tarun Sudhir said that "Phata Poster Nikhla Hero" lovely poster to 'Avana Shrimannarayana' film. Rakshith Shetty starrer Avana Shrimannarayana film set to release in August.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X