ಚಂದನ್ ಶೆಟ್ಟಿ ಈ ಮಾತು ಹೇಳಿದ್ಯಾಕೆ.? ಅಲೋಕ್ ಗೆ ತಿರುಗೇಟು ಕೊಟ್ರಾ ಶೆಟ್ರು.?
ಕನ್ನಡ Rappers ಆಲ್-ಓಕೆ ಹಾಗೂ ರಾಹುಲ್ ಡಿಟ್-ಓ ಕಡೆಯಿಂದ 'ನಂಗನ್ಸಿದ್ದು' ಹಾಡು ರಿಲೀಸ್ ಆಯ್ತು, ಟ್ರೆಂಡ್ ಆಗಿದ್ದೂ ಆಯ್ತು, ವಿವಾದಕ್ಕೀಡಾಗಿದ್ದೂ ಆಯ್ತು. ನಾವು ಯಾರ ಕಾಲು ಎಳೆದಿಲ್ಲ ಅಂತ ಅಲೋಕ್ ಹಾಗೂ ರಾಹುಲ್ ಫೇಸ್ ಬುಕ್ ಲೈವ್ ನಲ್ಲಿ ಸ್ಪಷ್ಟನೆ ನೀಡಿದ್ದೂ ಆಯ್ತು.
ಇಷ್ಟೆಲ್ಲ ಆದರೂ, ಚಂದನ್ ಶೆಟ್ಟಿ ಅಭಿಮಾನಿಗಳು ಮಾತ್ರ ತಣ್ಣಗಾಗಿಲ್ಲ. ಕೆಲ ಟ್ರೋಲ್ ಪೇಜ್ ಗಳು 'ಟೀಮ್ ಆಲ್-ಓಕೆ'ನ ಟ್ರೋಲ್ ಮಾಡುವುದನ್ನೂ ಕಮ್ಮಿ ಮಾಡಿಲ್ಲ.
ಇತ್ತ 'ಬಿಗ್ ಬಾಸ್' ಗೆದ್ದು ಬಂದ್ಮೇಲೆ ಎಲ್ಲ ವಾಹಿನಿಗಳಲ್ಲೂ ಸಂದರ್ಶನ ಕೊಟ್ಟು ಕೊಟ್ಟು ಸುಸ್ತಾಗಿದ್ದ ಚಂದನ್ ಶೆಟ್ಟಿ ನಿನ್ನೆ ಫೇಸ್ ಬುಕ್ ಲೈವ್ ಗೆ ಬಂದಿದ್ದರು. ಫೇಸ್ ಬುಕ್ ಲೈವ್ ನಲ್ಲಿ ಚಂದನ್ ಶೆಟ್ಟಿ ಆಡಿರುವ ಕೆಲ ಮಾತುಗಳು ಅಲೋಕ್ ಹಾಗೂ ರಾಹುಲ್ ಗೆ ತಿರುಗೇಟು ಕೊಟ್ಟಂಗಿದೆ ಅಂತ ಕೆಲವರು ಮಾತನಾಡಿಕೊಳ್ತಿದ್ದಾರೆ. ಅಷ್ಟಕ್ಕೂ, ಚಂದನ್ ಶೆಟ್ಟಿ ಅಂಥದ್ದು ಏನು ಹೇಳಿದ್ರು ಅಂದ್ರಾ.? ನೀವೇ ಓದಿರಿ..

ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ
''ಎಲ್ಲ ಪ್ರತಿಭಾವಂತರಿಗೂ ಸಪೋರ್ಟ್ ಮಾಡಿ.. ಯಾವ ತರಹ ಹಾಡು ಬಂದರೂ ಎಂಜಾಯ್ ಮಾಡಿ.. ಕರ್ನಾಟಕದಲ್ಲಿ ಒಳ್ಳೊಳ್ಳೆ ಟ್ಯಾಲೆಂಟ್ ಇದ್ದಾರೆ. ಇಂಟರ್ ನ್ಯಾಷನಲ್ ಲೆವೆಲ್ ರೀಚ್ ಮಾಡುವವರೂ ಇದ್ದಾರೆ. ಎಲ್ಲರಿಗೂ ಸಪೋರ್ಟ್ ಮಾಡಿ... ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಪ್ರೀತಿಯಿಂದ ಎಲ್ಲರನ್ನೂ ಗೆಲ್ಲಬೇಕು. ಪ್ರೀತಿ ಕೊಟ್ಟರೆ ಒಳ್ಳೆಯದ್ದು'' ಎಂದು ಫೇಸ್ ಬುಕ್ ಲೈವ್ ಗೆ ಬಂದಿದ್ದ ವೇಳೆ ಚಂದನ್ ಶೆಟ್ಟಿ ಹೇಳಿದ್ದಾರೆ.

ಗೊತ್ತಿದ್ದರೆ, ಹೇಳಿಕೊಡಿ..
''ಯು ಆರ್ ದಿ ಬೆಸ್ಟ್ ಅನಿಸಿದರೆ, ಹೀಗಲ್ಲ ಹೀಗೆ ಅಂತ ಇನ್ನೊಬ್ಬರಿಗೆ ಹೇಳಿಕೊಡಿ.. ನೀವು ಜಾಸ್ತಿ ತಿಳಿದುಕೊಂಡಿದ್ದರೆ, ಇನ್ನೊಬ್ಬರಿಗೆ ವಿದ್ಯೆ ದಾನ ಮಾಡಿ.. ಬೈದು ಹೇಳಬೇಡಿ'' ಎಂದಿದ್ದಾರೆ ಚಂದನ್ ಶೆಟ್ಟಿ

ಪ್ರೀತಿಯಿಂದ ಗೆಲ್ಲೋಣ
''ನಾವಿರೋದು ಕರ್ನಾಟಕದಲ್ಲಿ, ಇಲ್ಲಿ ಪ್ರೀತಿ ಕೊಟ್ಟು ತೆಗೆದುಕೊಳ್ಳುವುದು ಅಷ್ಟೇ ಗೊತ್ತಿರುವುದು. ಪ್ರೀತಿಯಿಂದ ಗೆಲ್ಲೋಣ'' - ಚಂದನ್ ಶೆಟ್ಟಿ.

ಇದು ತಿರುಗೇಟು.?
''ಪ್ರೀತಿಯಿಂದ ಗೆಲ್ಲೋಣ... ಯು ಆರ್ ದಿ ಬೆಸ್ಟ್ ಅನಿಸಿದರೆ ಹೇಳಿಕೊಡಿ... ಎಲ್ಲರಿಗೂ ಸಪೋರ್ಟ್ ಮಾಡಿ'' ಎಂಬೆಲ್ಲ ಮಾತುಗಳು ಚಂದನ್ ಶೆಟ್ಟಿ ಬಾಯಿಂದ ಯಾಕೆ ಬಂತೋ ಗೊತ್ತಿಲ್ಲ. ಆದ್ರೆ, ಅಭಿಮಾನಿಗಳು ಮಾತ್ರ ಇದನ್ನೆಲ್ಲ 'ನಂಗನ್ಸಿದ್ದು' ಹಾಡಿಗೆ ತಳುಕು ಹಾಕುತ್ತಿದ್ದಾರೆ. ''ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ'' ಅಂತ ಹೇಳುವ ಮೂಲಕ ಅಲೋಕ್ ಹಾಗೂ ರಾಹುಲ್ ಗೆ ತಿರುಗೇಟು ನೀಡಿದ್ದಾರೆ ಚಂದನ್ ಶೆಟ್ಟಿ ಅಂತಿದ್ದಾರೆ ಫ್ಯಾನ್ಸ್.


Click it and Unblock the Notifications











