For Quick Alerts
  ALLOW NOTIFICATIONS  
  For Daily Alerts

  'ಬಾನ ದಾರಿಯಲ್ಲಿ' ಮಂಗಳೂರಿನಿಂದ ಕೀನ್ಯಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್!

  |

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿಯ ಸಿನಿಮಾಗಳೆಲ್ಲಾ ಪ್ರೇಕ್ಷಕರ ಮನ ಗೆದ್ದಿದೆ. ಈ ಜೋಡಿಯ 4ನೇ ಸಿನಿಮಾ 'ಬಾನ ದಾರಿಯಲ್ಲಿ' . ಸದ್ಯ ಮಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿರೋ ಟೀಂ ಮುಂದಿನ ವಾರ ಸೌತ್ ಆಫ್ರಿಕಾ ಫ್ಲೈಟ್ ಏರುತ್ತಿದೆ.

  'ಭಾಗ್ಯವಂತ ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹಾಡಿ ನಟಿಸಿದ್ದ ಸೂಪರ್ ಹಿಟ್ ಹಾಡಿನ ಸಾಲನ್ನು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿ ಫಿಕ್ಸ್ ಮಾಡಿದ್ದಾರೆ. 'ನೋಡು ಎಂಥ ಚೆಂದ' ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ಸ್ಪೋರ್ಟ್ಸ್ ಜಾನರ್‌ನ 'ಬಾನ ದಾರಿಯಲ್ಲಿ' ಚಿತ್ರದಲ್ಲಿ ಗಣೇಶ್ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ರುಕ್ಮಿಣಿ ವಸಂತ್ ಈಜುಗಾರ್ತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  'ಗಾಳಿಪಟ 2' ಗೆಲ್ಲಿಸಿದ ಅಭಿಮಾನಿಗಳಿಗೆ ಗಣೇಶ್ ಪ್ರೀತಿಯ ಪತ್ರ 'ಗಾಳಿಪಟ 2' ಗೆಲ್ಲಿಸಿದ ಅಭಿಮಾನಿಗಳಿಗೆ ಗಣೇಶ್ ಪ್ರೀತಿಯ ಪತ್ರ

  ಮಂಗಳೂರಿನಲ್ಲಿ ಚಿತ್ರದ ಸೆಕೆಂಡ್ ಶೆಡ್ಯೂಲ್‌ ಶೂಟಿಂಗ್ ಮುಗಿದಿದೆ. ವಾಟರ್‌ ಗೇಮ್ಸ್ ಸೇರಿದಂತೆ ಕೆಲವು ಭಾಗದ ಚಿತ್ರೀಕರಣ ನಾಯಕ ಗಣೇಶ್, ನಾಯಕಿ ರುಕ್ಮಿಣಿ ವಸಂತ್ ಮುಂತಾದವರ ಅಭಿನಯದಲ್ಲಿ ಮಂಗಳೂರಿನಲ್ಲಿ ನಡೆದಿದೆ. ನಟಿ ರುಕ್ಮಿಣಿ ಸ್ವಿಮ್‌ ಸೂಟ್‌ನಲ್ಲಿ ಬೀಚ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊ ಕೂಡ ವೈರಲ್ ಆಗಿದೆ. 3ನೇ ಶೆಡ್ಯೂಲ್‌ ಆಫ್ರಿಕಾದಲ್ಲಿ ನಡೆಯಲಿದ್ದು, ಸೋಮವಾರ ಚಿತ್ರತಂಡ ಕೀನ್ಯಾಗೆ ಹೊರಟು ನಿಂತಿದೆ.

  ಪ್ರೀತಂ ಗುಬ್ಬಿ ನಿರ್ದೇಶನದ 'ಬಾನ ದಾರಿಯಲ್ಲಿ' ಚಿತ್ರಕ್ಕೆ ಪ್ರೀತಾ ಜಯರಾಂ ಕಥೆ ಬರೆದಿದ್ದಾರೆ. ಮಾಸ್ತಿ ಸಂಭಾಷಣೆ, ಅರ್ಜುನ್ ಜನ್ಯಾ ಸಂಗೀತ ಈ ರೊಮ್ಯಾಂಟಿಕ್ ಲವ್‌ಸ್ಟೋರಿ ಚಿತ್ರಕ್ಕಿದೆ. ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶ್ರೀವಾರಿ ಟಾಕೀಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ.

  Team Baana daariyalli to jet off to south africa to next schedule

  ಇದೊಂದು ಎಮೋಷನಲ್ ಅಡ್ವೆಂಚರಸ್ ಸಿನಿಮಾ ಆಗಿದ್ದು, ಲಾಕ್‌ಡೌನ್ ಸಮಯದಲ್ಲಿ ಕಥೆ ಸಿದ್ದವಾಯ್ತಂತೆ. ನಾಲ್ಕೈದು ಪಾತ್ರಗಳ ಸುತ್ತಾ ಇಡೀ ಸಿನಿಮಾ ಕತೆ ಸಾಗುತ್ತದೆ. ಬೆಂಗಳೂರು, ಮಂಗಳೂರು, ಚೆನ್ನೈ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ರೀಶ್ಮಾ ನಾಣಯ್ಯ ವೈಲ್ಡ್ ಲೈಫ್ ಫೋಟೊಗ್ರಫರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಂಗಾಯಣ ರಘು ಚಿತ್ರದ ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Team Baana daariyalli to jet off to south africa to next schedule.Ganesh and Rukmini shot a few scenes in the coastal backdrop of Mangaluru for Preetham gubbi Directed Baana dariyalli.
  Tuesday, September 13, 2022, 15:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X