Dhruva Sarja: 3 ವರ್ಷಗಳ ಬಳಿಕ ಬರ್ತ್‌ಡೇ ಸೆಲೆಬ್ರೇಷನ್.. ದರ್ಶನ್‌ ಸೆಲೆಬ್ರಿಟೀಸ್ ಹಾದಿಯಲ್ಲಿ ಧ್ರುವ ವಿಐಪಿಗಳು

'ಮಾರ್ಟಿನ್' ಸಿನಿಮಾ ರಿಲೀಸ್‌ಗೂ ಮುನ್ನ ಧ್ರುವ ಸರ್ಜಾ 'KD' ಆಗಿ ಕ್ಯಾಮರಾ ಮುಂದೆ ಅಬ್ಬರಿಸುತ್ತಿದ್ದಾರೆ. 4 ಸಿನಿಮಾಗಳ ಮೂಲಕ ಭಾರೀ ಕ್ರೇಜ್ ಸಂಪಾದಿಸಿದ ನಟ ಧ್ರುವ ಸರ್ಜಾ. 'ಪೊಗರು' ಬಳಿಕ ಧ್ರುವ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಸದ್ಯ 2 ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಆಕ್ಷನ್ ಪ್ರಿನ್ಸ್ ನಟಿಸ್ತಿದ್ದಾರೆ.

ಅಕ್ಟೋಬರ್ 6ರಂದು ಧ್ರುವ ಸರ್ಜಾ 34ನೇ ವಸಂತಕ್ಕೆ ಕಾಲಿಡಲಿದ್ದಾರೆ. ಕಳೆದ 3 ವರ್ಷಗಳಿಂದ ಆಕ್ಷನ್ ಪ್ರಿನ್ಸ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಆದರೆ ಈ ಬಾರಿ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ವಿಐಪಿಗಳು(ಅಭಿಮಾನಿಗಳು) ಈ ವರ್ಷ ತಮ್ಮ ನೆಚ್ಚಿನ ನಟನನ್ನು ನೋಡಿ ಕೈಕುಲುಕಿ ಹುಟ್ಟುಹಬ್ಬದ ಶುಭಾಶಯಕ ಕೋರುವ ಅವಕಾಶ ಸಿಗಲಿಲ್ಲ. ಆದರೆ ವಿಐಪಿಗಳಲ್ಲಿ ಒಂದು ಷರತ್ತು.

Dhruva-Sarja-Birthday-requests-fans

ಈ ತಮ್ಮ ಹುಟ್ಟುಹಬ್ಬದ ದಿನ ಧ್ರುವ ಕಡೆಯಿಂದ ವಿಐಪಿಗಳಲ್ಲಿ ವಿಶೇಷ ಮನವಿ ಇದೆ. "ಧ್ರುವ ಸರ್ಜಾ ಅವರ ಎಲ್ಲಾ ವಿಐಪಿ ಅಭಿಮಾನಿಗಳಿಗೆ, ಸ್ನೇಹಿತರಿಗೆ ಹಾಗೂ ಹಿತೈಷಿಗಳಿಗೆ ತಿಳಿಸುವುದೇನೆಂದರೆ, ಇದೇ ಅಕ್ಟೋಬರ್ 05, 2023 ರಂದು ರಾತ್ರಿ 11.00 ರಿಂದ ಧ್ರುವ ಸರ್ಜಾರವರ ಹುಟ್ಟುಹಬ್ಬವನ್ನು ಅವರ ಮನೆಯ ಬಳಿ ಅದ್ದೂರಿಯಾಗಿ ಆಚರಿಸುತ್ತೇವೆ. ಚಿರು ಅಣ್ಣನವರ ನಿಧನ ನಂತರ ಧ್ರುವ ಸರ್ಜಾರವರ ಹುಟ್ಟು ಹಬ್ಬವನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. 3 ವರ್ಷಗಳ ನಂತರ ಎಲ್ಲಾ ವಿಐಪಿ ಅಭಿಮಾನಿಗಳು ಹಾಗೂ ಹಿತೈಷಿಗಳ ಕೋರಿಕೆಯ ಮೇರೆಗೆ ಆಚರಿಸಲು ನಿರ್ಧರಿಸಿದ್ದೇವೆ"

"ಈ ಮೂಲಕ ತಿಳಿಯಪಡೆಸುವುದೇನೆಂದರೆ, ಹುಟ್ಟು ಹಬ್ಬದ ಆಚರಣೆಗೆ ಆಗಮಿಸುತ್ತಿರುವ ಎಲ್ಲಾ ವಿಐಪಿ ಅಭಿಮಾನಿಗಳು ಹಾಗೂ ಹಿತೈಷಿಗಳು ಯಾವುದೇ ರೀತಿಯ ಕೇಕ್‌ಗಳು, ಹೂಗುಚ್ಚಗಳು ಹಾಗೂ ಉಡುಗೊರೆಗಳನ್ನು ತರದೆ, ಬದಲಿಗೆ ಶಾಲಾ ಮಕ್ಕಳಿಗೆ ಉಪಯುಕ್ತವಾಗುವಂತಹ ಪುಸ್ತಕಗಳು, ಪೆನ್ನುಗಳು ಹಾಗೂ ಶಾಲಾ ಬ್ಯಾಗ್ಗಳನ್ನು ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಎಂದು ಕೋರಿಕೊಳ್ಳುತ್ತೇವೆ, ಹಾಗೂ ನಾವು ಅವುಗಳನ್ನು ನೇರವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ತಲುಪಿಸುತ್ತೇವೆ. ಜೈ ಆಂಜನೇಯ" ಎಂದು ಧ್ರುವ ತಂಡದ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನೆಯಾಗಿದೆ.

Dhruva-Sarja-Birthday-requests-fans

ನಟ ಸುದೀಪ್ ಹಾಗೂ ದರ್ಶನ್ ಕೂಡ ಇದೇ ರೀತಿ ತಮ್ಮ ಹುಟ್ಟುಹಬ್ಬದ ದಿನ ಕೇಕ್, ಹಾರ, ಉಡುಗೊರೆ ತಂದು ವ್ಯರ್ಥ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡುತ್ತಾ ಬರ್ತಿದ್ದಾರೆ. ನಟ ದರ್ಶನ್ ಕೇಕ್, ಹಾರ ಬದಲು ದಿನಸಿ ಪದಾರ್ಥಗಳನ್ನು ತಂದು ಕೊಡಲು ಹೇಳುತ್ತಾರೆ. ಅದನ್ನು ಅಗತ್ಯ ಇರುವವರಿಗೆ ತಲುಪಿಸುತ್ತಾ ಬರ್ತಿದ್ದಾರೆ. ಅದಕ್ಕೆ ಅಭಿಮಾನಿಗಳು ಕೈ ಜೋಡಿಸುತ್ತಿದ್ದಾರೆ. ಪ್ರತಿ ವರ್ಷ ಈ ರೀತಿ ಕ್ವಿಂಟಾಲ್‌ಗಟ್ಟಲೆ ದವಸ, ಧಾನ್ಯವನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ನೀಡಲಾಗುತ್ತಿದೆ.

ಇದೀಗ ಧ್ರುವ ಸರ್ಜಾ ಕೂಡ ಇದೇ ರೀತಿ ತಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ಅಭಿಮಾನಿಗಳ ದುಂದು ವೆಚ್ಚಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಆ ಹಣದಿಂದ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಒಂದೊಳ್ಳೆ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಧ್ರುವ ಸರ್ಜಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದೆ. ಇತ್ತೀಚೆಗಷ್ಟೆ ಪ್ರೇರಣಾಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಲಾಗಿತ್ತು.

ಸಿನಿಮಾಗಳ ವಿಚಾರಕ್ಕೆ ಬಂದರೆ ಎ. ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಉದಯ್ ಕೆ ಮೆಹ್ತಾ ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

'ಮಾರ್ಟಿನ್' ಬಳಿಕ ಜೋಗಿ ಪ್ರೇಮ್‌ ನಿರ್ದೇಶನದ 'KD' ಸಿನಿಮಾ ರಿಲೀಸ್ ಆಗಬೇಕಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಈ ಚಿತ್ರವನ್ನು ಕೂಡ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ನಡೀತಿದೆ. ಇನ್ನು ಈ ಬಾರಿ ಧ್ರುವ ಹುಟ್ಟುಹಬ್ಬಕ್ಕೆ ಅಣ್ಣ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ರಿಲೀಸ್ ಆಗಲಿದೆ.

More from Filmibeat

English summary
Dhruva Sarja requests fans not to bring cakes, garlands on his Birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X