twitter
    For Quick Alerts
    ALLOW NOTIFICATIONS  
    For Daily Alerts

    ಕೇಕ್ ಕತ್ತರಿಸಿ 'ಗಂಧದ ಗುಡಿ' ಸಕ್ಸಸ್ ಸೆಲೆಬ್ರೇಷನ್: ಯಾರೆಲ್ಲಾ ಭಾಗಿ ಆಗಿದ್ದರು?

    |

    ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕನಸಿನ 'ಗಂಧದ ಗುಡಿ' ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಅಕ್ಟೋಬರ್ 28ಕ್ಕೆ ಬಿಡುಗಡೆಯಾಗಿದ್ದ ಈ ಡಾಕ್ಯುಡ್ರಾಮಾ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ನೋಡಿ ಅಪ್ಪು ಹೇಳಲು ಬಯಸಿದ ಸಂದೇಶವನ್ನು ಪ್ರತಿಯೊಬ್ಬರು ಕೊಂಡೊಯ್ದಿದ್ದರು. ಚಿತ್ರತಂಡ ಕೇಕ್ ಕತ್ತರಿಸಿ 'ಗಂಧದ ಗುಡಿ' ಸಕ್ಸಸ್ ಸೆಲೆಬ್ರೇಷನ್ ಮಾಡಿದೆ.

    ಪುನೀತ್ ರಾಜ್‌ಕುಮಾರ್ ಅವರಾಗಿಯೇ ಕಾಣಿಸಿಕೊಂಡಿದ್ದ ವಿಶೇಷ ಸಿನಿಮಾ 'ಗಂಧದ ಗುಡಿ'. ವೈಲ್ಡ್ ಲೈಫ್ ಫೋಟೊಗ್ರಫರ್ ಅಮೋಘ ವರ್ಷ ಸಾರಥ್ಯದಲ್ಲಿ ಮೂಡಿ ಬಂದ ಈ ಸಿನಿಮಾ ಅದ್ಭುತ ಮೇಕಿಂಗ್‌ನಿಂದ ಗಮನ ಸೆಳೆದಿತ್ತು. ಇಡೀ ಪ್ರಪಂಚಕ್ಕೆ ಕರ್ನಾಟಕದ ಅರಣ್ಯ ಸಂಪತ್ತು, ವನ್ಯ ಜೀವಿ ಸಂಕುಲದ ಪರಿಚಯ ಮಾಡಿಸುವುದರ ಜೊತೆಗೆ ಅದನ್ನು ಉಳಿಸಿ ಬೆಳೆಸುವ ಬಗ್ಗೆ ಸಂದೇಶವನ್ನು ಅಪ್ಪು ನೀಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಗಲಿಕೆಯ ನಂತರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದರು.

    ಒಂದು ದಿನ ಮೊದಲೇ 'ಗಂಧದ ಗುಡಿ' ಶೋಗಳು ಆರಂಭವಾಗಿತ್ತು. ಮೊದಲ ಶೋನಿಂದಲೇ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಅಭಿಮಾನಿಗಳು ನೆಚ್ಚಿನ ನಟನನ್ನು ಕೊನೆ ಸಿನಿಮಾದಲ್ಲಿ ನೋಡಿ ಕಣ್ತುಂಬಿಕೊಂಡಿದ್ದರು. ಒಂದುವರೆ ಗಂಟೆ ಪುನೀತ್ ರಾಜ್‌ಕುಮಾರ್ ಜೊತೆಗೆ ಪ್ರತಿಯೊಬ್ಬರು ಕಾಡು ಮೇಡು ಸುತ್ತಾಡಿ ಬಂದ ಅನುಭವ ಆಗಿತ್ತು.

    ಕೇಕ್ ಕತ್ತರಿಸಿದ ಸಕ್ಸಸ್ ಸೆಲೆಬ್ರೇಷನ್

    ಕೇಕ್ ಕತ್ತರಿಸಿದ ಸಕ್ಸಸ್ ಸೆಲೆಬ್ರೇಷನ್


    ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರತಂಡದ ಜೊತೆಗೆ 'ಗಂಧದ ಗುಡಿ' ಸಕ್ಸಸ್ ಸೆಲೆಬ್ರೇಷನ್ ಮಾಡಿದ್ದಾರೆ. ಕ್ವಿನ್ಸ್ ರೋಡ್‌ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ತಂಡ ಕೇಕ್ ಕಟ್ ಮಾಡಿ ಖುಷಿಪಟ್ಟಿದೆ. ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್‌ಕುಮಾರ್ ಸಾಥ್ ಕೊಟ್ಟಿದ್ದಾರೆ. ಸಕ್ಸಸ್ ಸೆಲೆಬ್ರೇಷನ್‌ಗೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    25ನೇ ದಿನ ಗಡಿಯಲ್ಲಿ 'ಗಂಧದ ಗುಡಿ'

    25ನೇ ದಿನ ಗಡಿಯಲ್ಲಿ 'ಗಂಧದ ಗುಡಿ'

    ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಗಂಧದ ಗುಡಿ' ಸಿನಿಮಾ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿತ್ತು. ರಾಜ್ಯಾದ್ಯಂತ ಚಿತ್ರವನ್ನು ಬಹಳ ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡಲಾಗಿತ್ತು. ಒಂದು ಕಮರ್ಷಿಯಲ್ ಚಿತ್ರಕ್ಕೆ ಸಿಗುವಂತಹ ಸ್ವಾಗತ, ಓಪನಿಂಗ್ ಈ ಈ ಡಾಕ್ಯುಡ್ರಾಮ ಚಿತ್ರಕ್ಕೂ ಸಿಕ್ಕಿತ್ತು. ರಮ್ಯಾ, ರಕ್ಷಿತ್ ಶೆಟ್ಟಿ ಸೇರಿದಂತೆ ಸಾಕಷ್ಟು ಜನ ಸೆಲೆಬ್ರೆಟಿಗಳು ಒಂದು ದಿನ ಮೊದಲೇ ಸಿನಿಮಾ ನೋಡಿ ಖುಷಿಪಟ್ಟಿದ್ದರು. ಇದೀಗ ಚಿತ್ರದ 25 ದಿನದ ಹೊಸ್ತಿಲಲ್ಲಿದೆ.

    4 ದಿನಗಳ ಕಾಲ ಟಿಕೆಟ್ ದರ ಇಳಿಕೆ

    4 ದಿನಗಳ ಕಾಲ ಟಿಕೆಟ್ ದರ ಇಳಿಕೆ

    ಇದೊಂದು ಸಂದೇಶಾತ್ಮಕ ಸಿನಿಮಾ ಆಗಿರುವುದರಿಂದ ಎಲ್ಲರೂ ಸಿನಿಮಾ ನೋಡಬೇಕು ಎನ್ನುವ ಕಾರಣಕ್ಕೆ 4 ದಿನಗಳ ಕಾಲ ಟಿಕೆಟ್ ದರ ಇಳಿಸಲಾಗಿತ್ತು. ಅದರಲ್ಲೂ ಮಕ್ಕಳು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಬೇಕು ಎಂದು ಅಕ್ಟೋಬರ್ 7ರಿಂದ ಅಕ್ಟೋಬರ್ 10ರ ವರೆಗೆ 4 ದಿನಗಳ ಕಾಲ ಟಿಕೆಟ್ ದರ ಇಳಿಸಲಾಗಿತ್ತು. ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲಿ 56 ರೂ. ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ 112 ರೂ.ಗೆ ಟಿಕೆಟ್ ದರ ನಿಗದಿಪಡಿಸಲಾಗಿತ್ತು.

    PRK ಸಂಸ್ಥೆಯಿಂದ ಮತ್ತಷ್ಟು ಚಿತ್ರಗಳು

    PRK ಸಂಸ್ಥೆಯಿಂದ ಮತ್ತಷ್ಟು ಚಿತ್ರಗಳು


    ಪುನೀತ್ ರಾಜ್‌ಕುಮಾರ್ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಹೆಸರಿನಲ್ಲಿ ಪಿಆರ್‌ಕೆ ಆಡಿಯೋ ಹಾಗೂ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ತಮ್ಮ ಬ್ಯಾನರ್‌ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವುದು ಅವರ ಆಸೆಯಾಗಿತ್ತು. ಅದೇ ರೀತಿಯಲ್ಲಿ ಸಾಕಷ್ಟು ಸಿನಿಮಾಗಳು ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ನಿರ್ಮಾಣ ಆಗಿದೆ. ಈಗಲೂ ನಿರ್ಮಾಣ ಆಗುತ್ತಲೇ ಇದೆ. ಅಪ್ಪು ಅನುಪಸ್ಥಿತಿಯಲ್ಲಿ ಪತ್ನಿ ಪುನೀತ್ ರಾಜ್‌ಕುಮಾರ್ ಸಿನಿಮಾ ನಿರ್ಮಾಣವನ್ನು ಮುಂದುವರೆಸಲಿದ್ದಾರೆ.

    English summary
    Team Gandhadagudi celebrate the success with cake cutting ceremony. Gandhada Gudi was Puneeth Rajkumar’s last movie. Gandhada Gudi' is running successfully towards 25 days. Know more.
    Sunday, November 20, 2022, 20:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X