For Quick Alerts
  ALLOW NOTIFICATIONS  
  For Daily Alerts

  'ಗುರುಶಿಷ್ಯರು' ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದು ಏಕೆ?

  |

  ಶರಣ್ ನಾಯಕನಾಗಿ ಅಭಿನಯಿಸುತ್ತಿರುವ 'ಗುರುಶಿಷ್ಯರು' ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಕಾಡ್ತಿತ್ತು. ಇದೀಗ, ಗುರುಶಿಷ್ಯರು ಚಿತ್ರದ ನಾಯಕಿ ಅಂತಿಮವಾಗಿದೆ.

  ಮುದ್ದು ಮುಖದ ಚೆಲುವೆ ನಿಶ್ವಿಕಾ ನಾಯ್ಡು 'ಗುರು ಶಿಷ್ಯರು' ಸಿನಿಮಾಗೆ ಹಿರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆ ನಿಶ್ವಿಕಾ ಅವರ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.

  ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ನಿಶ್ವಿಕಾ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ನಿಶ್ವಿಕಾ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿ. ಈ ಸಿನಿಮಾದಲ್ಲಿ ನಿಶ್ವಿಕಾ ಪಾತ್ರದ ಹೆಸರು ಸೂಜಿ.

  ರಚಿತಾ ರಾಮ್, ಅದಿತಿ ಪ್ರಭುದೇವ, ಆಶಿಕಾ ರಂಗನಾಥ್, ರಶ್ಮಿಕಾ ಮಂದಣ್ಣ ಅವರ ಹೆಸರುಗಳು ಚರ್ಚೆಯಾದರೂ, ಈ ಪಾತ್ರಕ್ಕೆ ನಿಶ್ವಿಕಾ ಅವರೇ ಸೂಕ್ತ ಎಂದು ಚಿತ್ರತಂಡ ನಿರ್ಧರಿಸಿ ಆಯ್ಕೆ ಮಾಡಿಕೊಂಡಿದೆ. ನಿಶ್ವಿಕಾ ಫಸ್ಟ್ ಲುಕ್ ಟೀಸರ್‌ನಲ್ಲಿ ಈ ವಿಚಾರ ಬಹಿರಂಗಪಡಿಸಿದೆ.

  ಹಳೆಯ ಟೈಟಲ್ ಇಟ್ಕೊಂಡು ಬರ್ತಿರುವ ಕಾರಣ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಜಡೇಶ್ ಕೆ ಹಂಪಿ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ನಟ ಶರಣ್-ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ನಿರ್ಮಾಣವಾಗ್ತಿದೆ.

  Kirik Party ಅನುಭವವನ್ನು‌ ಮತ್ತೆ ಫೀಲ್‌ ಮಾಡೋಕೆ ಇಷ್ಟ ಇಲ್ಲ | Filmibeat Kannada

  ಅಂದ್ಹಾಗೆ, ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಈ ಹಿಂದೆ ಜಂಟಲ್‌ಮ್ಯಾನ್ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲೂ ನಿಶ್ವಿಕಾ ನಾಯಕಿಯಾಗಿ ನಟಿಸಿದ್ದರು. ಈಗ ಅದೇ ಕಾಂಬಿನೇಷನ್ ಮತ್ತೆ ಮುಂದುವರಿದಿದೆ. ಇನ್ನುಳಿದಂತೆ ಅಮ್ಮ ಐ ಲವ್ ಯೂ, ವಾಸು ನಾನ್ ಪಕ್ಕಾ ಕಮರ್ಷಿಯಲ್, ಪಡ್ಡೆಹುಲಿ, ಜಂಟಲ್‌ಮ್ಯಾನ್, ರಾಮಾರ್ಜುನ ಚಿತ್ರಗಳಲ್ಲಿ ನಿಶ್ವಿಕಾ ನಟಿಸಿದ್ದಾರೆ.

  English summary
  Team Guru Shishyaru reveal the first look of poster of female lead Nishvika Naidu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X