ರಾಬರ್ಟ್ ತಂಡದಿಂದ ವಿನೋದ್ ಪ್ರಭಾಕರ್ ಲುಕ್ ಅನಾವರಣ

ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್‌' ನಲ್ಲಿ ನಟ ವಿನೋದ್ ಪ್ರಭಾಕರ್ ಸಹ ನಟಿಸಿದ್ದು, ಇಂದು ಅವರ ಹುಟ್ಟುಹಬ್ಬಕ್ಕೆ ರಾಬರ್ಟ್‌ ತಂಡ ವಿನೋದ್ ಅವರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ.

Recommended Video

Roberrt ಚಿತ್ರದಲ್ಲಿ Vinod Prabhakar ಖಡಕ್ ಲುಕ್ | Filmibeat Kannada

ವಿನೋದ್ ಪ್ರಭಾಕರ್, ರಗಡ್ ಲುಕ್‌ನಲ್ಲಿ ಗನ್ ಹಿಡಿದು ಫೋಸ್‌ ಕೊಡುತ್ತಿರುವ ಪೋಸ್ಟರ್‌ ಅನ್ನು ರಾಬರ್ಟ್‌ ಸಿನಿ ತಂಡ ಇಂದು ಬಿಡುಗಡೆ ಮಾಡಿದೆ.

ದರ್ಶನ್ ನಾಯಕರಾಗಿರುವ ರಾಬರ್ಟ್ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Team Roberrt Reveals The First Look Of Vinod Prabhakar On His Birthday

ವಿನೋದ್ ಪ್ರಭಾಕರ್ ಅವರ ಪೋಸ್ಟರ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಸಿನಿಮಾದ ನಿರ್ದೇಶಕ ತರುಣ್ ಸುಧೀರ್, 'ಜನ್ಮದಿನದ ಶುಭಾಶಯಗಳು ಸಹೋದರ. ಈ ಹುಟ್ಟುಹಬ್ಬದ ಅಂಗವಾಗಿ ನಮ್ಮ ರಾಬರ್ಟ್ ತಂಡದಿಂದ ಪುಟ್ಟ ಕಾಣಿಕೆ' ಎಂದು ಬರೆದಿದ್ದಾರೆ.

ತರುಣ್ ಸುಧೀರ್ ನಿರ್ದೇಶಿಸಿರುವ ರಾಬರ್ಟ್‌ ಸಿನಿಮಾದಲ್ಲಿ ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಇದ್ದಾರೆ. ಜೊತೆಗೆ ದೇವರಾಜ್, ರವಿಶಂಕರ್, ಚಿಕ್ಕಣ್ಣ ಅವರುಗಳು ಸಹ ಇದ್ದಾರೆ.

ರಾಬರ್ಟ್‌ ಸಿನಿಮಾವು ಇದೇ ಏಪ್ರಿಲ್ ತಿಂಗಳಲ್ಲಿಯೇ ಬಿಡುಗಡೆ ಆಗಬೇಕಿತ್ತು. ಕೊರೊನಾ ಕಾರಣಕ್ಕೆ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಜನವರಿ ಆರಂಭದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

More from Filmibeat

English summary
Team Roberrt reveals the first look of Vinod Prabhakar on his birthday. Movie will release soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X