ಇವತ್ತು 'ಮಾಸ್ಟರ್ ಪೀಸ್' ಹಾಡು ಕೇಳಕ್ಕಾಗಲ್ಲ ಬಿಡಿ..!
ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಿಗೆ ಈ ಸುದ್ದಿ ಕೊಂಚ ಬೇಸರ ತರಬಹುದು ಆದರೂ ಪರವಾಗಿಲ್ಲ ಏನಪ್ಪಾ ಬೇಜಾರಾಗೋ ಸಂಗತಿ ಅಂತ ಸ್ವಲ್ಪ ಕುತೂಹಲ ಇಟ್ಟುಕೊಂಡೇ ಈ ಸುದ್ದಿ ಓದಿ.
ಯಶ್ ಅವರ ಬಹುನಿರೀಕ್ಷಿತ 'ಮಾಸ್ಟರ್ ಪೀಸ್' ಚಿತ್ರದ ಹಾಡುಗಳು ಬಿಡುಗಡೆಗೆ ಸಿದ್ಧವಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಚಿತ್ರದ ಮೊದಲ ಹಾಡು 'ಅಣ್ಣಂಗೆ ಲವ್ ಆಗಿದೆ' ಬಿಡುಗಡೆಯಾಗಬೇಕಿತ್ತು.[ರಾಕಿಂಗ್ ಸ್ಟಾರ್ 'ಮಾಸ್ಟರ್ ಪೀಸ್' ಹಾಡುಗಳ ಲಿಸ್ಟ್ ನೋಡಿದ್ರಾ?]
'ಮಾಸ್ಟರ್ ಪೀಸ್' ಚಿತ್ರದ ಹಾಡುಗಳನ್ನು ಅಭಿಮಾನಿಗಳಿಗಾಗಿ 91.1 ರೇಡಿಯೋ ಸಿಟಿ ಮೂಲಕ ಕೇಳಿಸುವ ಪ್ಲಾನ್ ಇತ್ತು ಚಿತ್ರತಂಡಕ್ಕೆ. ಆದರೆ ತಾಂತ್ರಿಕ ಸಮಸ್ಯೆ ಉಂಟಾಗಿರುವ ಕಾರಣ 'ಮಾಸ್ಟರ್ ಪೀಸ್ ಆಡಿಯೋ ಇಂದು ಬಿಡುಗಡೆಯಾಗುತ್ತಿಲ್ಲ,[ಅಬುಧಾಬಿಗೆ ಹಾರಿದ ರಾಕಿಂಗ್ ಸ್ಟಾರ್ ಯಶ್ ಮತ್ತು ಶಾನ್ವಿ..!]
ಹೀಗಂತ ಖುದ್ದು ರೇಡಿಯೋ ಸಿಟಿಯ ಆರ್ ಜೆ ಪ್ರದೀಪ್ ಅವರು ಟ್ವೀಟ್ ಮಾಡಿದ್ದಾರೆ.
ಆದ್ರೆ ಏನಂತೆ ನಿರಾಸೆ ಪಡುವ ಹಾಗಿಲ್ಲ ನಾಳೆ ಅಥವಾ ನಾಡಿದ್ದು 'ಮಾಸ್ಟರ್ ಪೀಸ್' ಹಾಡುಗಳನ್ನು ನೀವು ಕೇಳಬಹುದು. ಈ ತಿಂಗಳಾಂತ್ಯಕ್ಕೆ ಚಿತ್ರವೇ ನಿಮ್ಮ ಎದುರಿಗೆ ಬರ್ತಾ ಇದೆಯಲ್ಲಾ. ಸೋ ಅಣ್ತಮ್ಮಂದ್ರ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ......


Click it and Unblock the Notifications












