twitter
    For Quick Alerts
    ALLOW NOTIFICATIONS  
    For Daily Alerts

    ಬದುಕಿದ್ದಾಗಲೇ ಸಾವಿನ ಸುದ್ದಿ ವೈರಲ್: ಗರಂ ಆದ ನಟಿ ತೇಜಸ್ವಿನಿ ಪ್ರಕಾಶ್

    By ಫಿಲ್ಮ್ ಡೆಸ್ಕ್
    |

    ಸ್ಯಾಂಡಲ್ ವುಡ್ ನಟಿ ತೇಜಸ್ವಿನಿ ಪ್ರಕಾಶ್ ಇನ್ನಿಲ್ಲ, ತೇಜಸ್ವಿನಿ ಪ್ರಕಾಶ್ ನಿಧನ ಎನ್ನುವ ಸುದ್ದಿ ವೈರಲ್ ಆಗಿದೆ. ಕಳೆದೆರಡು ದಿನಗಳಿಂದ ತೇಜಸ್ವಿನಿ ಪ್ರಕಾಶ್ ಸಾವಿನ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಈ ಸುದ್ದಿ ಓದಿ ಅನೇಕರು ತೇಜಸ್ವಿನಿ ಪ್ರಕಾಶ್ ಗೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ.

    Recommended Video

    Ramesh Aravind's week days with ramesh is start from June 18th | Week Days With Ramesh

    ಇತ್ತೀಚಿಗಷ್ಟೆ ನಟಿ ತೇಜಸ್ವಿನಿ ಪ್ರಕಾಶ್ ತಂದೆಯನ್ನು ಕಳೆದುಕೊಂಡಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಂದೆಯ ಅಗಲಿಕೆಯ ನೋವಿನಲ್ಲಿರುವ ತೇಜಸ್ವಿನಿ ಪ್ರಕಾಶ್ ಗೆ ತನ್ನ ಸಾವಿನ ಸುದ್ದಿ ವೈರಲ್ ಆಗಿರುವುದು ಮತ್ತೊಂದು ಆಘಾತವುಂಟುಮಾಡಿದೆ. ಮುಂದೆ ಓದಿ...

    ಅಗಲಿದ ತಂದೆಯನ್ನು ನೆನೆದು ಭಾವುಕರಾದ ನಟಿ ತೇಜಸ್ವಿನಿ ಪ್ರಕಾಶ್ಅಗಲಿದ ತಂದೆಯನ್ನು ನೆನೆದು ಭಾವುಕರಾದ ನಟಿ ತೇಜಸ್ವಿನಿ ಪ್ರಕಾಶ್

    ತೇಜಸ್ವಿನಿ ಪ್ರಕಾಶ್ ಗೆ ತಲೆನೋವಾದ ಸಾವಿನ ಸುದ್ದಿ

    ತೇಜಸ್ವಿನಿ ಪ್ರಕಾಶ್ ಗೆ ತಲೆನೋವಾದ ಸಾವಿನ ಸುದ್ದಿ

    ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಕಷ್ಟು ಕರೆಗಳು ಬರುತ್ತಿವೆಯಂತೆ. ತೇಜಸ್ವಿನಿ ಪ್ರಕಾಶ್ ಇನ್ನಿಲ್ಲ ಎನ್ನುವ ಸುದ್ದಿ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. ಯಾವುದೋ ಸುದ್ದಿಗಳಿಗೆ ತೇಜಸ್ವಿನಿ ಪ್ರಕಾಶ್ ಇನ್ನಿಲ್ಲ ಎನ್ನುವ ಹೆಡ್ ಲೈನ್ ನೀಡಲಾಗಿದೆ. ಸ್ಟೋರಿಯನ್ನು ಕ್ಲಿಕ್ ಮಾಡಿದರೆ ಒಳಗೆ ಬೇರೆಯದೆ ಸುದ್ದಿ ಬಿತ್ತರವಾಗಿರುತ್ತೆ. ಸ್ಟೋರಿ ಕ್ಲಿಕ್ ಮಾಡುವ ಉದ್ದೇಶದಿಂದ, ಜನರನ್ನು ಸೆಳೆಯುವ ಉದ್ದೇಶದಿಂದ ಈ ರೀತಿಯ ಹೆಟ್ ಟೈನ್ ನೀಡಲಾಗುತ್ತಿದೆ.

    ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿರುವ ತೇಜಸ್ವಿನಿ ಪ್ರಕಾಶ್

    ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿರುವ ತೇಜಸ್ವಿನಿ ಪ್ರಕಾಶ್

    ಬದುಕಿರುವಾಗಲೇ ಯಾಕೆ ಹೀಗೆ ಸುದ್ದಿ ಹಾಕುತ್ತಾರೆ ಎಂದು ಪರಿಶೀಲಿಸಿದಾಗ ತೇಜಸ್ವಿನಿ ಪ್ರಕಾಶ್ ಅವರ ಸಾವಿನ ಸುದ್ದಿಯ ಹೆಡ್ ಲೈನ್ ನೀಡಿ ಬೇರೆಯದೆ ಸುದ್ದಿ ಪೋಸ್ಟ್ ಮಾಡಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ತೇಜಸ್ವಿನಿ ದಿಕ್ಕು ತಪ್ಪಿಸುವ ಸುದ್ದಿಗಳ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ನಟಿ ತೇಜಸ್ವಿನಿ ಪ್ರಕಾಶ್ ತಂದೆ ಅನಾರೋಗ್ಯದಿಂದ ನಿಧನನಟಿ ತೇಜಸ್ವಿನಿ ಪ್ರಕಾಶ್ ತಂದೆ ಅನಾರೋಗ್ಯದಿಂದ ನಿಧನ

    ತೇಜಸ್ವಿನಿ ಪ್ರಕಾಶ್ ಸ್ಪಷ್ಟನೆ

    ತೇಜಸ್ವಿನಿ ಪ್ರಕಾಶ್ ಸ್ಪಷ್ಟನೆ

    "ಕೆಲವು ಯೂಟ್ಯೂಬ್ ಚಾನೆಲ್ ಗಳು, ಸೋಷಿಯಲ್ ಮೀಡಿಯಾ ಪೇಜ್ ಗಳು ಕಳೆದ ಒಂದು ತಿಂಗಳಿಂದ ಈ ರೀತಿಯ ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸುದ್ದಿ ಬಂದಾಗಿನಿಂದಲೂ ಸಂಬಂಧಿಕರು, ಸ್ನೇಹಿತರು ಮತ್ತು ಹಿತೈಷಿಗಳು ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ. ಈ ಸುದ್ದಿ ಸುಳ್ಳು ಎಂದು ಹೇಳಲು ಬಯಸುತ್ತೇನೆ" ಎಂದಿದ್ದಾರೆ.

    ಜವಾಬ್ದಾರಿ ಇರಬೇಕು

    ಜವಾಬ್ದಾರಿ ಇರಬೇಕು

    "ಇದನ್ನು ತುಂಬಾ ದಿನದಿಂದ ನಿರ್ಲಕ್ಷಿಸಿದ್ದೇನೆ. ಆದರೆ ಈಗ ಈ ಬಗ್ಗೆ ಧ್ವನಿ ಎತ್ತಿದ್ದೇನೆ. ನೀವು ಈ ರೀತಿಯ ಸುದ್ದಿಗಳ ಮೂಲಕ ನನ್ನ ಸಾವಿನ ಬಗ್ಗೆ ಮಾತನಾಡುವುದಿಲ್ಲ. ಆದ್ದರಿಂದ ಕಾನೂನು ಮೊಕದ್ದಮೆಯಿಂದ ಪಾರಾಗಬಹುದು. ಈ ರೀತಿಯ ಸುದ್ದಿಗಳು ಹೆಚ್ಚು ಕ್ಲಿಕ್ ಗಳನ್ನು ನೀಡಬಹುದು. ಆದರೆ ನನ್ನ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎನ್ನುವುದನ್ನು ಮರೆತ್ತಿರುತ್ತೀರಿ. ಜವಾಬ್ದಾರಿ ಪ್ರಜ್ಞೆ ಇರಬೇಕು ಎಂದು ಹೇಳುತ್ತೇನೆ" ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

    English summary
    Kannada Actress Tejaswini Prakash reaction about her fake death news.
    Tuesday, June 16, 2020, 10:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X