twitter
    For Quick Alerts
    ALLOW NOTIFICATIONS  
    For Daily Alerts

    ತೆಲಂಗಾಣ ಕನ್ನಡಿಗರಿಗೆ ಕನ್ನಡ-ತೆಲುಗು ನಿರ್ಮಾಪಕರಿಂದ ಭಾರಿ ಮೋಸ

    By ಕನ್ನಡಕ
    |

    ಕರ್ನಾಟಕದಲ್ಲಿ ಕನ್ನಡ ಸಿನಿಮಾ ನೋಡುವ ಅಭಿಮಾನಿಗಳು ಎಷ್ಟಿದ್ದಾರೋ ಹಾಗೆ ಹೊರ ರಾಜ್ಯಗಳಾದ ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಲ್ಲೂ ಅಷ್ಟೇ ಕನ್ನಡಿಗರು ಜೊತೆಗೆ ಕನ್ನಡ ಸಿನಿಮಾ ನೋಡುವ ಪ್ರೇಕ್ಷಕ ಬಂಧುಗಳು ಸಾಕಷ್ಟು ಮಂದಿ ಕಾಣ ಸಿಗುತ್ತಾರೆ.

    ಕನ್ನಡ ಸಿನಿಮಾಗಳನ್ನು ಯಥವತ್ತಾಗಿ ಕನ್ನಡ ಭಾಷೆಯಲ್ಲೇ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಬಿಡುಗಡೆ ಮಾಡಿ ಅಂದರೆ ಅದು ಆಗಲ್ಲ ಅಂತಾರಂತೆ ನಮ್ಮ ಕನ್ನಡ ಸಿನಿಮಾ ನಿರ್ಮಾಪಕರು. ಇದು ಹೊರನಾಡು ಕನ್ನಡಿಗರು ಅಂತ ಹೊರ ರಾಜ್ಯಗಳಲ್ಲಿ ಯಾರೆಲ್ಲಾ ಇದ್ದಾರೆ ನೋಡಿ ಅವರ ಅಳಲು.[ಆಂಧ್ರ : ಮಲತಾಯಿ ಮನೆಯಲ್ಲಿ ಕನ್ನಡದ ಮಕ್ಕಳು]

    Telangana Kannadigas deprived of watching Kannada movies

    ಅಷ್ಟಕ್ಕೂ ಇದಕ್ಕೆ ಮುಖ್ಯ ಕಾರಣ ಏನಪ್ಪಾ ಅಂದ್ರೆ, 'ಜಂಟಲ್ ಮ್ಯಾನ್ ಅಗ್ರಿಮೆಂಟ್' ಎಂಬ ಪೆಡಂಭೂತ. ಅಂದಹಾಗೆ ಏನಪ್ಪಾ ಇದು ಹೊಸ ರೀತಿಯ ಅಗ್ರಿಮೆಂಟ್ ಅಂತ ತಲೆ ಕೆಡಿಸ್ಕೋತಾ ಇದ್ದೀರಾ?

    Telangana Kannadigas deprived of watching Kannada movies

    'ಜಂಟಲ್ ಮ್ಯಾನ್ ಅಗ್ರಿಮೆಂಟ್' ಅಂದರೆ ಕನ್ನಡ ಮತ್ತು ತೆಲುಗು ನಿರ್ಮಾಪಕರು ಮಾಡಿಕೊಂಡಿರುವ ಮಾತುಮಾತಿನ ಒಪ್ಪಂದ. ಈ ಒಪ್ಪಂದದಿಂದಾಗಿ ಕನ್ನಡ ಸಿನಿಮಾವನ್ನು ಹಾಗೆ ಕನ್ನಡದಲ್ಲಿಯೇ ಪ್ರದರ್ಶನ ಮಾಡುವಂತಿಲ್ಲ. ಬದಲಾಗಿ ಕನ್ನಡ ಸಿನಿಮಾವನ್ನು ತೆಲುಗು ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಬಹುದು.

    ಇದು ಹೊರನಾಡು ಕನ್ನಡಿಗರಿಗೆ ನಮ್ಮ ಕನ್ನಡ ನಿರ್ಮಾಪಕರಿಂದ ಆಗುತ್ತಿರುವ ಅನ್ಯಾಯ. ಈ ಅನ್ಯಾಯದ ಕುರಿತು 'ಕನ್ನಡಕ' ಎಂಬ ಹೆಸರಿನ ಕನ್ನಡಿಗರು ಒನ್ಇಂಡಿಯಾ/ಫಿಲ್ಮಿಬೀಟ್ ಗೆ ಪತ್ರ ಬರೆದಿದ್ದು, ಕನ್ನಡ ಚಿತ್ರಗಳನ್ನು ಪ್ರದರ್ಶಿಸದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಳಗಿದೆ ಅವರು ಬರೆದಿರುವ ಪತ್ರ.

    Telangana Kannadigas deprived of watching Kannada movies

    "ಕನ್ನಡ ನಿರ್ದೇಶಕರ 'ಲಾಸ್ಟ್ ಬಸ್' ಚಿತ್ರ ತುಂಬಾ ಜನಪ್ರಿಯವಾದ ಕಾರಣ, ನಾನು ನನ್ನ ಎಂದಿನ ದಿನಚರಿಯಂತೆ, S.ಅರವಿಂದ್ ಅವರಿಗೆ ಆಂಧ್ರ ಹಾಗು ತೆಲಂಗಾಣದಲ್ಲಿ ಬಿಡುಗಡೆ ಮಾಡುವಂತೆ 'Twitter'ನಲ್ಲಿ ಬೇಡಿಕೆ ಇಟ್ಟೆ. ಆಗ ಅವರು ಕೊಟ್ಟ ಉತ್ತರದಿಂದ ಅದ ಶಾಕ್ ಗೆ ನಾವು ಹೈದರಾಬಾದ್ ಕನ್ನಡಿಗರು ಇನ್ನೂ ಚೇತರಿಸಿಕೊಂಡಿಲ್ಲ. ಅವರ ಟ್ವೀಟ್ ನೀವೇ ಓದಿ.

    "ಏನಿದರ ಅರ್ಥ?. ಕನ್ನಡ ಚಿತ್ರ ನಿರ್ಮಾಪಕರು ತೆಲುಗು ನಿರ್ಮಾಪಕರೊಂದಿಗೆ ಇಂಥ 'Gentleman Agreement' ಗಳನ್ನು ಮಾಡಿಕೊಳ್ಳುವುದು ನಮ್ಮ ಕಾಲನ್ನು ನಾವೇ ಕತ್ತರಿಸಿಕೊಂಡ ಹಾಗಲ್ಲವೇ? ತೆಲುಗಿನಲ್ಲಿ ಡಬ್ ಮಾಡುವ ಕಾರಣಕ್ಕೆ, ಕನ್ನಡದ ಒರಿಜಿನಲ್ ವರ್ಷನ್ ಬಿಡುಗಡೆ ಮಾಡಬಾರದು ಎಂದರೆ ನಮ್ಮಂತಹ ಹೊರನಾಡು ಕನ್ನಡಿಗರಿಗೆ ಮೋಸ ಮಾಡಿದಂತಲ್ಲವೇ? ಆ ತೆಲುಗು ನಿರ್ಮಾಪಕರಿಗೆ ಈ ರೀತಿ ಒಪ್ಪಂದ ಮಾಡಿಕೊಳ್ಳುವ ಕಾನೂನು ರೀತ್ಯ ಹಕ್ಕನ್ನು ಯಾರು ಕೊಟ್ಟಿದ್ದು? ನಮ್ಮವರೇ ಆದ ನಿರ್ಮಾಪಕರಿಗೂ ಈ ಬಗ್ಗೆ ಯೋಚಿಸುವ ಸದ್ಬುದ್ಧಿ ಇಲ್ಲವೇ"?.

    Telangana Kannadigas deprived of watching Kannada movies

    "ಹಿಂದೊಮ್ಮೆ ದುನಿಯಾ ಸೂರಿ ಕೂಡ ಇದೆ ಕಾರಣವನ್ನ ನನಗೆ ಹೇಳಿದ್ದರು. ಈಗ ಅರ್ಥವಾಯಿತೇ, ಏಕೆ ಕನ್ನಡ ಚಿತ್ರಗಳು ಹೊರ ರಾಜ್ಯದಲ್ಲಿ ಬಿಡುಗಡೆ ಭಾಗ್ಯ ಕಾಣುವುದಿಲ್ಲ ಎಂದು".

    ನಿಮ್ಮವನೇ ಹೊರನಾಡು ಕನ್ನಡಿಗ "ಕನ್ನಡಕ"

    English summary
    Telangana Kannadigas deprived of watching Kannada movies. Here is the Open letter for Telangana Kannadigas. Check it.
    Friday, February 26, 2016, 20:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X