»   » ಪ್ರಸಾರ ಭಾರತಿಯಿಂದ ಶೀಘ್ರದಲ್ಲಿ ಶಿಕ್ಷಣ-ರಂಜನೆ ಬೆರೆತ ಎಜುಟೈನ್‌ಮೆಂಟ್‌

ಪ್ರಸಾರ ಭಾರತಿಯಿಂದ ಶೀಘ್ರದಲ್ಲಿ ಶಿಕ್ಷಣ-ರಂಜನೆ ಬೆರೆತ ಎಜುಟೈನ್‌ಮೆಂಟ್‌

Posted By: Staff
Subscribe to Filmibeat Kannada

ಬೆಂಗಳೂರು: ಮನರಂಜನೆಯ ಹೆಸರಿನಲ್ಲಿ ಮೂರ್ಖತನದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವ ದೇಶದ ಖಾಸಗಿ ಚಾನಲ್‌ಗಳನ್ನು ಪ್ರಸಾರ ಭಾರತಿ ಅಧ್ಯಕ್ಷ ಹಾಗೂ ಇಸ್ರೋದ ಮಾಜಿ ಅಧ್ಯಕ್ಷ ಪ್ರೊ. ಯು.ಆರ್‌. ರಾವ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕೇಂದ್ರವಾಗುಳ್ಳ ಶೈಕ್ಷಣಿಕ ಕಾರ್ಯಕ್ರಮಗಳನ್ನು ಭಾರತದ ಯಾವುದೇ ಖಾಸಗಿ ಚಾನಲ್‌ ಪ್ರಸಾರ ಮಾಡುತ್ತಿಲ್ಲ . ಈ ಖಾಸಗಿ ವಾಹಿನಿಗಳು ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಲು ಆಕಾಶವಾಣಿ ಹಾಗೂ ದೂರದರ್ಶನದ ಮೂಲಭೂತ ಸೌಕರ್ಯಗಳನ್ನು ಬಳಸಿಕೊಳ್ಳಬೇಕು ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊ. ರಾವ್‌ ಕಿವಿಮಾತು ಹೇಳಿದರು.

ಶಿಕ್ಷಣ ಹಾಗೂ ಮನರಂಜನೆ ಬೆರೆತ ಎಜುಟೈನ್‌ಮೆಂಟ್‌(edutainment) ಎನ್ನುವ ಕಾರ್ಯಕ್ರಮವನ್ನು ಸದ್ಯದಲ್ಲಿಯೇ ರೂಪಿಸುವ ಉದ್ದೇಶವನ್ನು ಪ್ರಸಾರಭಾರತಿ ಹೊಂದಿದೆ. ಪ್ರಸಾರ ಭಾರತಿಯ ಆದಾಯ 450 ರಿಂದ 650 ಕೋಟಿ ರುಪಾಯಿಗೆ ಏರಿದೆ. ಸಾರ್ವಜನಿಕ ಹಣವನ್ನು ಪ್ರಸಾರ ಭಾರತಿ ಬೆಂಬಲಿಸುತ್ತದೆ ಎಂದು ಪ್ರೊ.ಯು.ಆರ್‌.ರಾವ್‌ ತಿಳಿಸಿದರು.

(ಪಿಟಿಐ)

English summary
Prasar Bharati chairman Prof U R Rao comes down heavily on Pvt TV channels

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada