ನನಗೆ ಈಗ 51 ವರ್ಷ,ಅವಮಾನವನ್ನು ನಾನು ಸಹಿಸಲಾರೆ ; ಕನ್ನಡಿಗರಿಗೆ ಬಹಿರಂಗ ಪತ್ರ ಬರೆದ ಗಾಯಕ ಸೋನು ನಿಗಮ್

ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು.

ಆದರೆ ಈಗೀಗ ಈ ಮಾತು ಮನೆಯನ್ನು ಕೆಡಿಸುತ್ತಿದೆ. ಮನಸನ್ನು ಕೂಡ ಕೆಡಿಸುತ್ತಿದೆ. ಇದಕ್ಕೆ ಸೋನು ನಿಗಮ್ ಸದ್ಯದ ಉದಾಹರಣೆ. ಹೌದು, ತಮ್ಮ ಚಿನ್ನದ ಕಂಠದಿಂದ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳನ್ನು ಸಂಪಾದಿಸಿದವರು ಸೋನು ನಿಗಮ್. ಹಿಂದಿ ಹೊರತು ಪಡಿಸಿದರೆ ಕನ್ನಡದಲ್ಲಿಯೇ ಇವರಿಗೆ ಅನೇಕ ಅಭಿಮಾನಿಗಳಿದ್ದಾರೆ.

Tell Me Who s at Fault Sonu Nigam Pens Open Letter to Kannadigas on Bengaluru Concert Controversy

ಆದರೆ ಈಗ ಆ ಅಭಿಮಾನಕ್ಕೆ ಧಕ್ಕೆಯಾಗಿದೆ. ಕರುನಾಡಿನೆಲ್ಲೆಡೆ ಸೋನು ನಿಗಮ್ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಕನ್ನಡ ಚಿತ್ರರಂಗ ಸೋನು ನಿಗಮ್ ಅವರನ್ನು ದೂರು ಇಡುವ ನಿರ್ಧಾರಕ್ಕೆ ಬಂದಿದೆ. ಅಧಿಕೃತವಾಗಿ ಬ್ಯಾನ್ ಎಂಬ ಶಬ್ದ ಬಳಸದಿದ್ದರೂ ಕೂಡ ಸೋನು ನಿಗಮ್ ಅವರ ಬಳಿ ಹಾಡು ಹಾಡಿಸದಿರಲು ನಿರ್ಧಾರ ಮಾಡಿದೆ. ಈ ಹಿನ್ನೆಲೆ ಸೋನು ನಿಗಮ್ ಕನ್ನಡಿಗರಿಗನ್ನು ಉದ್ದೇಶಿಸಿ ಸೋನು ನಿಗಮ್ ಸುದೀರ್ಘವಾದ ಪತ್ರವೊಂದನ್ನು ಬರೆದಿದ್ದಾರೆ. ಹಾಗಿದ್ದರೆ ಸೋನು ನಿಗಮ್ ಪತ್ರದಲ್ಲೇನಿದೆ ಎಂದು ತಿಳಿಯಲು ಮುಂದೆ ಓದಿ.


ತಪ್ಪು ಯಾರದ್ದು ಎಂದು ನೀವೇ ಹೇಳಿ

ನಮಸ್ಕಾರ, ನಾನು ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವದ ಬೇರೆ ಮೂಲೆಯಲ್ಲಿದ್ದರೂ ಕೂಡ ಬೇರೆ ಭಾಷೆ.. ಸಂಸ್ಕ್ರತಿ.. ಸಂಗೀತ.. ಸಂಗೀತಗಾರರು.. ರಾಜ್ಯ.. ಮತ್ತು ಜನರನ್ನು ಪ್ರೀತಿಸಿದ್ದೇನೆ. ನಿಜಾ ಹೇಳಬೇಕು ಅಂದರೆ ನಾನು ಹಿಂದಿ ಸೇರಿ ಇತರೆ ಭಾಷೆಗಳ ಹಾಡುಗಳಿಗಿಂತಲೂ ಕನ್ನಡದ ಹಾಡುಗಳನ್ನು ಹೆಚ್ಚು ಗೌರವದಿಂದ ನೋಡಿದ್ದೇನೆ. ನನ್ನ ಈ ಮಾತುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಇರುವ ನೂರಾರು ವಿಡಿಯೋಗಳೇ ಸಾಕ್ಷಿ.

ಕರ್ನಾಟಕದಲ್ಲಿ ನನ್ನ ಸಂಗೀತ ಸಂಜೆಯ ಕಾರ್ಯಕ್ರಮ ಇರುವಾಗ ನಾನು ಒಂದು ಗಂಟೆಗಳಿಗಿಂತ ಹೆಚ್ಚಿನ ಹಾಡುಗಳನ್ನು ನನ್ನೊಡನೆ ತಗೆದುಕೊಂಡು ಹೋಗುತ್ತೇನೆ. ಆದರೆ ಈಗ ನಾನು ಇನ್ನು ಹದಿಹರೆಯದ ಯುವಕನಲ್ಲ. ಅವಮಾನವನ್ನು ನಾನು ಸಹಿಸಲಾರೆ.

ನನಗೆ ಈಗ 51 ವರ್ಷ, ಜೀವನದ ದ್ವೀತಿಯಾರ್ಧಕ್ಕೆ ನಾನು ಕಾಲಿಟ್ಟಿದ್ದೇನೆ. ನನ್ನ ಮಗನ ವಯಸ್ಸಿನ ಹುಡುಗರು ಭಾಷೆಯ ಹೆಸರಿನಲ್ಲಿ ಅಲ್ಲಿ ಸೇರಿದ ಸಾವಿರಾರು ಜನರ ಮುಂದೆ ಬೆದರಿಕೆ ಹಾಕಲು ಪ್ರಯತ್ನ ಮಾಡಿದಾಗ ಕೋಪ ಮಾಡಿಕೊಳ್ಳುವ ಹಕ್ಕು ನನಗೆ ಇದೆ.

ಕೆಲಸದ ವಿಚಾರಕ್ಕೆ ಬಂದರೆ ಕನ್ನಡ ನನ್ನ ಎರಡನೇ ಭಾಷೆ. ನಾನು ಮೊದಲ ಹಾಡು ಹಾಡಿದ ತಕ್ಷಣವೇ ಅವನು ಕೆಲವರನ್ನು ಪ್ರಚೋದಿಸಿದ. ಅಲ್ಲಿದ್ದ ಅವನ ಜನರೇ ಮುಜುಗರಕ್ಕೊಳಗಾದರು. ಅವಮಾನವಾಗದಂತೆ ಸುಮ್ಮನೆ ಇರುವಂತೆ ಆ ವ್ಯಕ್ತಿಗೆ ಹೇಳಿದರು.

ನಾನು ಅವರಲ್ಲಿ ಮನವಿಯನ್ನು ಮಾಡಿಕೊಂಡೆ, ತುಂಬಾ ಸಮಾಧಾನದಿಂದ ಪ್ರೀತಿಯಿಂದ ಹೇಳಿದೆ. ಕಾರ್ಯಕ್ರಮ ಈಗಷ್ಟೇ ಆರಂಭವಾಗಿದೆ. ಇದು ನನ್ನ ಮೊದಲ ಹಾಡು ನಿಮ್ಮನ್ನು ನಾನು ನಿರಾಸೆ ಮಾಡುವುದಿಲ್ಲ. ನನ್ನ ಯೋಜನೆಯಂತೆ ಹಾಡುಗಳನ್ನು ಹಾಡಲು ಅವಕಾಶ ಮಾಡಿಕೊಡಿ ಎಂದು ಮನವಿಯನ್ನು ಮಾಡಿಕೊಂಡೆ.

ಹಾಡುಗಳ ಪಟ್ಟಿಯನ್ನು ಮೊದಲೇ ಸಿದ್ಧ ಮಾಡಿಕೊಂಡಿದ್ದರಿಂದ ಅಲ್ಲಿದ್ದ ಸಂಗೀತಗಾರರು- ತಾಂತ್ರಿಕ ವಿಭಾಗದವರು ಒಬ್ಬರ ಜೊತೆ ಒಬ್ಬರು ಸಮನ್ವಯದಲ್ಲಿರುತ್ತಾರೆ, ಆದರೆ ಇದನ್ನು ಅರಿಯದೇ ಅವರು ಗದ್ದಲ ಸೃಷ್ಟಿಸಲು ನನಗೆ ಬೆದರಿಕೆ ಹಾಕಲು ಕಾತುರರಾಗಿದ್ದರು. ಇಲ್ಲಿ ತಪ್ಪು ಯಾರದ್ದು ಎನ್ನುವುದನ್ನು ನೀವೇ ಹೇಳಿ.

ನಾನು ದೇಶಭಕ್ತನಾದ ಕಾರಣಕ್ಕೆ ವಿಶೇಷವಾಗಿ ಪಹಲ್ಗಾಮ್‌ನಲ್ಲಿನ ದುರಂತರ ನಂತರ ಭಾಷೆ, ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷದ ಬೀಜ ಬಿತ್ತುವ ಪ್ರಯತ್ನ ಯಾರೇ ಮಾಡಿದರು ನಾನು ಅದನ್ನು ವಿರೋಧಿಸುತ್ತೇನೆ. ಹೀಗಾಗಿ ನಾನು ಅವರಿಗೆ ಬುದ್ದಿವಾದ ಹೇಳಬೇಕಾಯ್ತು. ಅಲ್ಲಿದ್ದ ಅನೇಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ವಿಚಾರದಲ್ಲಿ ನನ್ನನ್ನು ಹುರಿದುಂಬಿಸಿದರು. ವಿಷಯ ಅಲ್ಲಿಗೆ ಮುಕ್ತಾಯವಾಯ್ತು.

ಆ ನಂತರ ನಾನು ಒಂದು ಗಂಟೆಗೂ ಹೆಚ್ಚು ಕಾಲ ಕನ್ನಡದ ಹಾಡುಗಳನ್ನು ಹಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದೆಲ್ಲವೂ ಇದೆ. ಹೀಗಾಗಿ ಇಲ್ಲಿ ತಪ್ಪು ಯಾರದ್ದು ಎಂಬ ನಿರ್ಧಾರ ಮಾಡಲು ಕರ್ನಾಟಕದ ಪ್ರಜ್ಞಾವಂತ ಜನರಿಗೆ ಬಿಟ್ಟಿದ್ದೇನೆ. ನಿಮ್ಮ ತೀರ್ಪನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ.

ಕರ್ನಾಟಕದ ಕಾನೂನು ವ್ಯವಸ್ಥೆ ಮತ್ತು ಪೊಲೀಸರನ್ನು ಸಂಪೂರ್ಣ ಗೌರವಿಸುತ್ತೇನೆ, ನಂಬುತ್ತೇನೆ ಮತ್ತು ನನ್ನಿಂದ ನಿರೀಕ್ಷಿಸಬಹುದಾದ ಎಲ್ಲ ರೀತಿಯ ಸಹಕಾರವನ್ನು ನಾನು ನೀಡುತ್ತೇನೆ. ನನಗೆ ಕರ್ನಾಟಕದಿಂದ ದೈವಿಕ ಪ್ರೀತಿ ಸಿಕ್ಕಿದೆ. ನಿಮ್ಮ ತೀರ್ಪು ಏನೇ ಇರಲಿ, ಯಾವುದೇ ದುರುದ್ದೇಶವಿಲ್ಲದೇ ನಾನು ಅದನ್ನು ಸದಾ ಗೌರವದಿಂದ ಸ್ವೀಕರಿಸುತ್ತೇನೆ.

ಹೀಗೆ ಸೋನು ನಿಗಮ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪತ್ರದ ಮೂಲಕ ಸಂದೇಶವನ್ನು ರವಾನೆ ಮಾಡಿದ್ಧಾರೆ. ಇದಕ್ಕೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಉತ್ತರ ಭಾರತದ ಸೋನು ನಿಗಮ್ ಅವರ ಅಭಿಮಾನಿಗಳು ಇವರ ಈ ಮಾತುಗಳಿಗೆ ಸಮ್ಮತಿಯನ್ನು ಸೂಚಿಸಿದ್ಧಾರೆ. ನಾವೆಲ್ಲ ನಿಮ್ಮ ಜೊತೆ ಸದಾ ಕಾಲ ಇದ್ದೇವೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಇಂದು ಪತ್ರದ ಮೂಲಕ ಉತ್ತರವನ್ನು ನೀಡಿರುವ ಸೋನು ನಿಗಮ್ ಮೊನ್ನೆ ಮೊನ್ನೆ ವಿಡಿಯೋ ಮೂಲಕ, ತಮ್ಮ ಮನದ ಮಾತು ಹಂಚಿಕೊಂಡಿದ್ದರು. 'ಕನ್ನಡ.. ಕನ್ನಡ' ಎಂದು ಪ್ರೀತಿಯಿಂದ ಕರೆಯುವುದಕ್ಕೂ 'ಕನ್ನಡ.. ಕನ್ನಡ' ಎಂದು ಧಮ್ಕಿ ಹಾಕುವುದಕ್ಕೂ ತುಂಬಾನೇ ವ್ಯತ್ಯಾಸ ಇದೆ ಎಂದು ಹೇಳಿದ್ದರು.

ನಾನು ಹಾಡು ಹಾಡುತ್ತಿದ್ದ ಸಮಯದಲ್ಲಿ ಕೆಳಗಡೆ ನಾಲ್ಕೈದು ಗೂಂಡಾಗಳು ಇದ್ದರು, ಕೂಗಾಡುತ್ತಿದ್ದರು ಎಂದಿದ್ದ ಸೋನು ನಿಗಂ ಅಲ್ಲಿದ್ದ ಸುಮಾರು ಜನ ಅವರಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದರು, ವಾತಾವರಣ ಹಾಳು ಮಾಡಬೇಡಿ ಎಂದು ಮನವಿಯನ್ನು ಮಾಡುತ್ತಿದ್ದರು, ಆದರೆ..ಅವರು ಸುಮ್ಮನಾಗಲಿಲ್ಲ, ಹೀಗಾಗಿ ಪಹಲ್ಗಾಮ್‌ನಲ್ಲಿ ಪ್ಯಾಂಟ್ ಕಳಚುವಾಗ ಭಾಷೆ ಕೇಳಿಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸುವುದು ಅನಿವಾರ್ಯವಾಗಿತ್ತು ಎಂದು ಹೇಳಿದ್ದರು.

ಮುಂದುವರೆದು ಕನ್ನಡಿಗರು ತುಂಬಾನೇ ಒಳ್ಳೆಯವರು ಎಂದು ಹೇಳಿರುವ ಸೋನು ನಿಗಂ ನೀವು ಯಾವುದೇ ರಾಜ್ಯವನ್ನು ತೆಗೆದುಕೊಳ್ಳಿ, ಪ್ರತಿಯೊಂದು ಪ್ರಾಂತ್ಯದಲ್ಲಿಯೂ ನಾಲ್ಕೈದು ಜನ ಕೆಟ್ಟವರು ಇದ್ದೇ ಇರುತ್ತಾರೆ ಎಂದು ಹೇಳಿರುವ ಸೋನು ನಿಗಂ ಬೇರೆಯವರಿಗೆ ಬೆದರಿಕೆ ಹಾಕುವ ಅವಕಾಶವನ್ನು ಅವರಿಗೆ ನೀಡಬಾರದು ಎಂದು ಹೇಳಿದ್ದರು. ಜಗತ್ತು ನಿಮ್ಮ ಜೊತೆ ಪ್ರೀತಿಯಿಂದ ನಡೆದುಕೊಳ್ಳುವಾಗ ಹೀಗೆಲ್ಲ ಮಾಡಬಾರದು ಎಂದು ಹೇಳಿದ್ದರು.

ಇನ್ನು ನಾನು ಪ್ರತಿ ಬಾರಿ ಕಾರ್ಯಕ್ರಮ ನೀಡುವಾಗ, ಒಂದು ಗಂಟೆಗಾಗುವಷ್ಟು ಕನ್ನಡದ ಹಾಡುಗಳನ್ನು ನನ್ನ ಜೊತೆ ನಾನು ತೆಗೆದುಕೊಂಡು ಬರುತ್ತೇನೆ ಈ ವಿಚಾರವನ್ನು ನಾನು ಹಲವಾರು ಬಾರಿ ಹೇಳಿದ್ದೇನೆ ಕೂಡ ಎಂದು ಹೇಳಿದ್ದ ಸೋನು ನಿಗಮ್, ಕೆರಳಿಸುವಂತಹ, ಉದ್ರೇಕಗೊಳಿಸವಂತಹ ವ್ಯಕ್ತಿಗಳು ಯಾರೇ ಆದರೂ ಕೂಡ ಅವರನ್ನು ಅಲ್ಲಿಯೇ ತಡೆಯಬೇಕು ಎಂದು ಹೇಳಿದ್ದರು. ಪ್ರೀತಿಯಿಂದ ತುಂಬಿರುವ ಮಣ್ಣಿನಲ್ಲಿ ದ್ವೇಷದ ಬೀಜ ಯಾರಾದರೂ ಬಿತ್ತುತ್ತಿದ್ದರೆ ಅವರನ್ನು ಕೂಡಲೇ ತಡೆಯಬೇಕು ಎಂದು ಹೇಳಿದ್ದರು.

ಕನ್ನಡಿಗರು ತುಂಬಾನೇ ಒಳ್ಳೆಯವರು, ಯಾರೋ ನಾಲ್ಕೈದು ವ್ಯಕ್ತಿಗಳು ದುರ್ವತನೆ ತೋರಿದ್ದಕ್ಕೆ ಕನ್ನಡಿಗರನ್ನು ದೂಷಿಸುವುದು ತಪ್ಪು ಎಂದು ಹೇಳಿದ್ದ ಸೋನು ನಿಗಂ, ಕಾರ್ಯಕ್ರಮದಲ್ಲಿ ನನ್ನ ಮೊದಲ ಹಾಡು ಮುಕ್ತಾಯವಾದ ನಂತರ, ಆ ನಾಲ್ಕು ಜನ ನನ್ನನ್ನೇ ಗುರಾಯಿಸುತ್ತಿದ್ದರು, ಹಾಡು ಹಾಡುವಂತೆ ಅವರು ಬೇಡಿಕೆಯನ್ನಿಡುತ್ತಿರಲಿಲ್ಲ ಬದಲಿಗೆ ಹಾಡು ಹಾಡಬೇಕೆಂದು ಬೆದರಿಕೆಯನ್ನು ಹಾಕುತ್ತಿದ್ದರು ಎಂದು ಹೇಳಿದ್ದರು.

More from Filmibeat

English summary
After being booked by Bengaluru Police over the Kannada language controversy at his recent concert, Sonu Nigam took to social media on Monday to share his side of the story. In his letter, he revealed that a young man threatened and insulted him on stage in front of a massive crowd. Keep reading to see what he said.
Read more about: sonu nigam singer filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X