ಹೆಣ್ಣು ಬೆ*ತ್ತಲೆಯಾಗಿದ್ದರೂ ನೀನು ಕಣ್ಣೆತ್ತಿ ನೋಡಬಾರದು ; ಕೆರಳಿ ಕೆಂಡವಾಗಿದ್ದೇಕೆ ನಿಶ್ವಿಕಾ ನಾಯ್ಡು ?

ಕಾಲ ಎಷ್ಟೇ ಬದಲಾದರೂ.. ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬಂದಿದ್ದರೂ.. ಇವತ್ತು ಕೂಡ ಮಹಿಳೆಯ ವ್ಯಕ್ತಿತ್ವವನ್ನು ಆಕೆಯ ಹಾಕಿಕೊಳ್ಳುವ ಬಟ್ಟೆಯಿಂದ ಹಲವರು ನಿರ್ಧಾರ ಮಾಡುತ್ತಾರೆ. ತುಂಡು ಉಡುಗೆ ನಮ್ಮದಲ್ಲ. ಬದಲಿಗೆ ವಿದೇಶಿ ಪರಿಕಲ್ಪನೆ.. ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಹೇಳುತ್ತಾರೆ. ಮಹಿಳೆಯರ ಮೇಲೆ ಆಗುತ್ತಿರುವ ಅ*ತ್ಯಾಚಾರಕ್ಕೆ ಅವರು ಧರಿಸುವ ಪ್ರಚೋದನಾತ್ಮಕ ಬಟ್ಟೆಗಳೇ ಕಾರಣ ಎಂಬ..

ವಾದವನ್ನು ಕೂಡ ಹಲವರು ಮಾಡುತ್ತಾರೆ. ಉಡುಪಿನ ಆಯ್ಕೆಯನ್ನು ವ್ಯಕ್ತಿಯ ಸ್ವಾತಂತ್ರ್ಯ ಎಂದು ನೋಡದೇ ಸಂಸ್ಕ್ರತಿ ಮತ್ತು ಗೌರವದ ಮಾನದಂಡವನ್ನಾಗಿ ನೋಡುತ್ತಾರೆ. ಇನ್ನೂ... ಚಿತ್ರರಂಗದಲ್ಲಿ ಈಗೀಗ ಅಂಗಾಗ ಪ್ರದರ್ಶನ ಮಾಡುವುದನ್ನೇ ಸಾಧನೆ ಎಂದು ಹಲವರು ಅಂದುಕೊಂಡಿದ್ದಾರೆ. ಇದರಿಂದ ಕೂಡ ಆಗಾಗ ಮಹಿಳೆಯರು ಹಾಕಿಕೊಳ್ಳುವ ಬಟ್ಟೆಯ ಕುರಿತು ಚರ್ಚೆ ನಡೆಯುತ್ತೆ. ವಾದ ಪ್ರತಿವಾದ ಶುರುವಾಗಿ ವಿವಾದವಾಗುತ್ತೆ. ಮನಶಾಂತಿ ಕೂಡ ಹಾಳಾಗುತ್ತೆ. ಉದಾಹರಣೆಗೆ ನಿಶ್ವಿಕಾ ನಾಯ್ಡು ಅವರ ವಿಚಾರವನ್ನೇ ತೆಗೆದುಕೊಳ್ಳಿ.

Tell Men to Keep Their Eyes Lower Nishvika Naidu SLAMS YouTuber for Blaming Vaishnavi s Glamour

ಹೌದು, ಅಸಲಿಗೆ ತೀರಾ ಇತ್ತೀಚೆಗೆ ''ಲವ್ ಯೂ ಮುದ್ದು'' ಚಿತ್ರದ ವಿಶೇಷ ಪ್ರದರ್ಶನ ಇತ್ತು. ಕನ್ನಡದ ಬೆಳ್ಳಿತೆರೆ ಮತ್ತು ಕಿರುತೆರೆಯ ಹಲವರು ಈ ಚಿತ್ರ ನೋಡಲು ಬಂದಿದ್ದರು.

ಆದರೆ.. ಅಂದು ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ ''ಮಿಥುನ ರಾಶಿ'' ಮತ್ತು ''ಪ್ರೇಮಕಾವ್ಯ'' ಧಾರಾವಾಹಿಯ ನಾಯಕಿ ವೈಷ್ಣವಿ ಕೌಂಡಿನ್ಯ. ಹಸಿರು ಬಣ್ಣದ ಬ್ಯಾಕ್ ಲೆಸ್, ಡೀಪ್ ನೆಕ್ ಗೌನ್ ಧರಿಸಿ ವೈಷ್ಣವಿ ಕೌಂಡಿನ್ಯ ಬಂದಿದ್ದೇ ತಡ ಕ್ಯಾಮರಾದ ಕಣ್ಣುಗಳು ಅರಳಿದ್ದವು. ನೋಡ .. ನೋಡುತ್ತಾ.. ಕ್ಷಣಾರ್ಧದಲ್ಲಿಯೇ ವೈಷ್ಣವಿ ವಿಡಿಯೋ ವೈರಲ್ ಆದವು.

ವೈಷ್ಣವಿ ಅವರ ಈ ಬೋಲ್ಡ್ ಅವತಾರದ ಬಗ್ಗೆ ಹಲವರು ಚರ್ಚೆ ಮಾಡಲು ಶುರು ಮಾಡಿದರು. ಆ ಪೈಕಿ ''ಅಶ್ವಮೇಧ'' ಎಂಬ ಚಾನೆಲ್ ನಡೆಸುವ ಯೂಟ್ಯೂಬರ್ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಹೆಣ್ಮಕ್ಕಳು ಅರ್ಧಂಭರ್ದ ಬಟ್ಟೆ ಹಾಕೋದು ಸರಿನಾ..? ಎಂಬ ಪ್ರಶ್ನೆ ಮಾಡಿದ್ದರು. ಅರೆಬೆ*ತ್ತಲೆ ಬಟ್ಟೆ ಅತ್ಯಾಚಾರಕ್ಕೆ ಕಾರಣನಾ ಎಂದು ಕೇಳಿದ್ದರು.

ಯೂಟ್ಯೂಬರ್ ಮಾಡಿರುವ ಈ ವಿಡಿಯೋ ನಿಶ್ವಿಕಾ ನಾಯ್ಡು ಅವರ ಕಣ್ಣಿಗೆ ಸದ್ಯ ಬಿದ್ದಿದೆ. ಮಾತು ನಿಶ್ವಿಕಾ ಅವರನ್ನು ಕೆರಳಿಸಿದೆ. ಹೀಗಾಗಿಯೇ ಕೋಪ ತಡೆಯಲಾಗದೆ ನಿಶ್ವಿಕಾ ನಾಯ್ಡು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. ವೈಷ್ಣವಿ ಕೌಂಡಿನ್ಯ ಅವರ ಬಟ್ಟೆಯ ಕುರಿತು ಯೂಟ್ಯೂಬರ್ ಮಾಡಿದ್ದ ವಿಡಿಯೋದ ಸ್ಕ್ರೀನ್ ಶಾಟ್ ಹಂಚಿಕೊಂಡು ಕಿಡಿ ಕಾರಿದ್ದಾರೆ.

Tell Men to Keep Their Eyes Lower Nishvika Naidu SLAMS YouTuber for Blaming Vaishnavi s Glamour

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ನಿಶ್ವಿಕಾ ನಾಯ್ಡು, ಈ ವಿಡಿಯೋ ಮಾಡುವಾಗ ನಿಮಗೆ ನಾಚಿಕೆಯಾಗಿಲ್ವಾ ..? ಎಂದು ಪ್ರಶ್ನೆ ಮಾಡಿದ್ದಾರೆ. ಹೆಣ್ಣು ಮತ್ತು ಆಕೆ ಧರಿಸುವ ಬಟ್ಟೆಯ ಬಗ್ಗೆ ಠೀಕೆ ಮಾಡುವ ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿರುವ ನಿಶ್ವಿಕಾ ನಾಯ್ಡು, ಹೆಣ್ಣು ಬೆ*ತ್ತಲೆ ಇದ್ದರೂ ನೀನು ಕಣ್ಣೆತ್ತಿ ನೋಡಬಾರದು ಎಂದು ಹೇಳಿದ್ದಾರೆ. ಮಹಿಳೆಯರಿಗೆ ಯಾವ ಬಟ್ಟೆ ಹಾಕಿಕೊಳ್ಳಬೇಕು ಎಂದು ಹೇಳುವುದನ್ನು ನಿಲ್ಲಿಸಿ ಎಂದು ಹೇಳಿರುವ ನಿಶ್ವಿಕಾ ದೃಷ್ಟಿಕೋನ ಬದಲಿಸುವಂತೆ ಗಂಡಸರಿಗೆ ಹೇಳಿ ಎಂದಿದ್ದಾರೆ. ಜಿಪ್ ಓಪನ್ ಮಾಡಿ ರಾಜಾರೋಷವಾಗಿ ಮೂತ್ರ ವಿರ್ಸಜನೆ ಮಾಡುವ ನೀವು ಮೊದಲು ಮಾನ ಮುಚ್ಕೊಳ್ಳಿ ಎಂದು ಕಿಡಿ ಕಾರಿದ್ದಾರೆ.

ಮುಂದುವರೆದು ನಿಮ್ಮ ಮನೆ ಹೆಣ್ಮಕ್ಕಳಷ್ಟೇ ಅಲ್ಲ, ಯಾರ ಮನೆ ಹೆಣ್ಮಕ್ಕಳ ಬಗ್ಗೆಯೂ ಮಾತನಾಡುವ ಹಕ್ಕು ನಿಮಗಿಲ್ಲ ಎಂದು ಹೇಳಿರುವ ನಿಶ್ವಿಕಾ ನಾಯ್ಡು ಈ ಪೇಜ್‌ನ ಎಲ್ಲರೂ ರಿಪೋರ್ಟ್‌ ಮಾಡಿ ಎಂಬ ಮನವಿಯನ್ನು ತಮ್ಮ ಅಭಿಮಾನಿಗಳಲ್ಲಿ.. ಹಿಂಬಾಲಕರಲ್ಲಿ ಮಾಡಿಕೊಂಡಿದ್ದಾರೆ.

More from Filmibeat

English summary
Kannada actress Nishvika Naidu delivers a powerful response to the controversial video, demanding viewers report the page for blaming clothing for violence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X