For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಮನೆಗೆ ಬಂತು ಐಷಾರಾಮಿ ಕ್ಯಾರವ್ಯಾನ್: ಇದರ ಬೆಲೆ ಎಷ್ಟು?

  |

  ಸಿನಿಮಾ ಸ್ಟಾರ್ ಗಳು ಅಂದ್ರೆ ಅವರಿಗೆ ವಿಶೇಷವಾದ ಆತಿಥ್ಯ ಇರುತ್ತೆ ಎನ್ನುವುದು ಗೊತ್ತಿರುವ ಸಂಗತಿ. ಅದರಲ್ಲೂ ದೊಡ್ಡ ಸ್ಟಾರ್ ನಟರು ಅಂದ್ರೆ ಅವರಿಗಾಗಿ ಎಲ್ಲವೂ ಸ್ಪೆಷಲ್ ಆಗಿರುತ್ತೆ. ಊಟ, ಉಳಿದುಕೊಳ್ಳುವ ಹೋಟೆಲ್, ಶೂಟಿಂಗ್ ಸ್ಥಳದಲ್ಲಿ ಬಳಸುವ ಕ್ಯಾರವ್ಯಾನ್ ಎಲ್ಲವೂ ದುಬಾರಿ.

  ಹಾಗ್ನೋಡಿದ್ರೆ, ದೊಡ್ಡ ದೊಡ್ಡ ನಟರು ತಮ್ಮದೇ ಸ್ವಂತ ಕ್ಯಾರವ್ಯಾನ್ ಹೊಂದಿರುತ್ತಾರೆ. ತಮಗೆ ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಸಿರುತ್ತಾರೆ. ಇದೀಗ, ಇಂತಹ ಕ್ಯಾರವ್ಯಾನ್ ವಿಷ್ಯದಲ್ಲಿ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಭಾರಿ ಸುದ್ದಿಯಾಗಿದ್ದಾರೆ.

  ಕನ್ನಡಕ್ಕೆ ಮಹೇಶ್, ಅಲ್ಲು ಅರ್ಜುನ್, ಅನುಷ್ಕಾ ಬರ್ತಾರೆ.! ಎಲ್ಲ ಪುಕ್ಕಟೆ ಪ್ರಚಾರ.! ಕನ್ನಡಕ್ಕೆ ಮಹೇಶ್, ಅಲ್ಲು ಅರ್ಜುನ್, ಅನುಷ್ಕಾ ಬರ್ತಾರೆ.! ಎಲ್ಲ ಪುಕ್ಕಟೆ ಪ್ರಚಾರ.!

  ಯಾಕಂದ್ರೆ, ಅಲ್ಲು ಅರ್ಜುನ್ ದುಬಾರಿ ಬೆಲೆಯ ಮತ್ತು ಅತ್ಯಂತ ಆಕರ್ಷಣಿಯ ಕ್ಯಾರವ್ಯಾನ್ ಖರೀದಿಸಿದ್ದಾರೆ. ಇದರ ಬೆಲೆ ಕೇಳಿ ಒಂದು ಕ್ಷಣ ಅಚ್ಚರಿಯಾಗಿದ್ದಲ್ಲೇ, ಅದರೊಳಗಿನ ವಿನ್ಯಾಸ ನೋಡಿ ಇದು ಬಸ್ ಅಥವಾ ಬಂಗಲೆನಾ ಎಂದು ಯೋಚಿಸುವಂತಾಗಿದೆ. ಅಷ್ಟಕ್ಕೂ, ಅಲ್ಲು ಅರ್ಜುನ್ ಖರೀದಿ ಮಾಡಿರುವ ಈ ವ್ಯಾನಿಟಿ ವ್ಯಾನ್ ಯಾವುದು? ಅದರ ಬೆಲೆ ಎಷ್ಟು?

  ಇದೇ ನೋಡಿ ಅಲ್ಲು ಅರ್ಜುನ್ ಹೊಸ ಕ್ಯಾರವ್ಯಾನ್

  ಇದೇ ನೋಡಿ ಅಲ್ಲು ಅರ್ಜುನ್ ಹೊಸ ಕ್ಯಾರವ್ಯಾನ್

  ಸ್ಟೈಲಿಶ್ ಸ್ಟಾರ್ ತೆರೆಮೇಲೆ ಎಷ್ಟು ಸ್ಟೈಲ್ ಆಗಿ ಕಾಣ್ತಾರೋ ನಿಜ ಜೀವನದಲ್ಲೂ ಅಷ್ಟೇ ಸ್ಟೈಲ್ ಆಗಿ ಜೀವನ ನಡೆಸಲು ಪ್ರಯತ್ನ ಮಾಡ್ತಾರೆ. ತಮಗೆ ಸಂಬಂಧಿಸಿದ ಎಲ್ಲ ವಸ್ತುಗಳ ಬಗ್ಗೆಯೂ ವಿಶೇಷವಾದ ಕಾಳಜಿ ವಹಿಸುತ್ತಾರೆ ಬನ್ನಿ. ಇದಕ್ಕೆ ತಾಜಾ ನಿದರ್ಶನ ಅಲ್ಲು ಅರ್ಜುನ್ ಡಿಸೈನ್ ಮಾಡಿಸಿರುವ ಕ್ಯಾರವ್ಯಾನ್.

  ಕುತೂಹಲ ಮೂಡಿಸಿದೆ ಪುನೀತ್-ಅಲ್ಲು ಸಿರೀಶ್ ಎರಡನೇ ಭೇಟಿ.!ಕುತೂಹಲ ಮೂಡಿಸಿದೆ ಪುನೀತ್-ಅಲ್ಲು ಸಿರೀಶ್ ಎರಡನೇ ಭೇಟಿ.!

  ಈ ಪರ್ಸನಲ್ ಬಸ್ ಬೆಲೆ ಎಷ್ಟು?

  ಈ ಪರ್ಸನಲ್ ಬಸ್ ಬೆಲೆ ಎಷ್ಟು?

  ಅಲ್ಲು ಅರ್ಜುನ್ ತಮಗಾಗಿ, ತಮಗೆ ಅಗತ್ಯವೆನಿಸುವಂತೆ ಡಿಸೈನ್ ಮಾಡಿಸಿಕೊಂಡಿರುವ ಈ ದುಬಾರಿ ಕ್ಯಾರವ್ಯಾನ್ ಬೆಲೆ ಬರೋಬ್ಬರಿ 7 ಕೋಟಿ ಎಂದು ಹೇಳಲಾಗ್ತಿದೆ. ಕಪ್ಪು ಬಣ್ಣದ ಬಸ್ ಇದಾಗಿದ್ದು, ಒಳಗೆ ಅತ್ಯಂತ ಸ್ಟೈಲಿಶ್ ಆಗಿ ವಿನ್ಯಾಸ ಮಾಡಲಾಗಿದೆ.

  ಕೊನೆಗೂ ಅಲ್ಲು ಅರ್ಜುನ್ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ, ಇದು ಪಕ್ಕಾ ಸುದ್ದಿ ಕೊನೆಗೂ ಅಲ್ಲು ಅರ್ಜುನ್ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ, ಇದು ಪಕ್ಕಾ ಸುದ್ದಿ

  ಈ ಕ್ಯಾರವ್ಯಾನ್ ವಿಶೇಷತೆ ಏನು?

  ಈ ಕ್ಯಾರವ್ಯಾನ್ ವಿಶೇಷತೆ ಏನು?

  ಈ ಕ್ಯಾರವ್ಯಾನ್ ಮೇಲೆ ಮತ್ತು ಒಳಗೆ ಅಲ್ಲು ಅರ್ಜುನ್ ಹೆಸರನ್ನ ಸೂಚಿಸಿರುವ AA ಎಂದು ಹಾಕಲಾಗಿದೆ. ಒಂದು ಐಷಾರಾಮಿ ಜೀವನ ನಡೆಸಲು ಬೇಕಾಗುವಂತೆ ಬಸ್ ವಿನ್ಯಾಸ ಆಗಿದೆ. ಬೆಡ್, ಸೋಫಾ, ಟಿವಿ, ವೀವ್ ಪಾಯಿಂಟ್ ಹೀಗೆ ಎಲ್ಲವೂ ಸಖತ್ ದುಬಾರಿ ಎನಿಸುವಂತಿದೆ. ಈ ಕ್ಯಾರವ್ಯಾನ್ ಒಳ ಭಾಗದ ಫೋಟೋಗಳನ್ನ ಕೂಡ ಅಲ್ಲು ಅರ್ಜುನ್ ಬಹಿರಂಗಪಡಿಸಿದ್ದಾರೆ.

  ಮುಂಬೈ ಡಿಸೈನರ್ ಮಾಡಿದ್ದು

  ಮುಂಬೈ ಡಿಸೈನರ್ ಮಾಡಿದ್ದು

  ಅಂದ್ಹಾಗೆ, ಈ ಕ್ಯಾರವ್ಯಾನ್ ಇಂಟಿರಿಯರ್ ಡಿಸೈನ್ ಗಾಗಿ ಸುಮಾರು 3.5 ಕೋಟಿ ಖರ್ಚು ಮಾಡಲಾಗಿದೆಯಂತೆ. ಮುಂಬೈ ಮೂಲದ ಡಿಸೈನರ್ ಒಬ್ಬರು ವಿಶೇಷ ಕಾಳಜಿ ವಹಿಸಿ ಬಸ್ ತಯಾರಿಸಿದ್ದಾರೆ. ಸದ್ಯ ತ್ರಿವಿಕ್ರಮ್ ಜೊತೆ ಒಂದು ಸಿನಿಮಾ ಮಾಡ್ತಿದ್ದು, ಅದಾದ ಬಳಿಕ ಸುಕುಮಾರ್ ಜೊತೆಯೂ ಒಂದು ಚಿತ್ರ ಘೋಷಣೆ ಮಾಡಿದ್ದಾರೆ.

  English summary
  Telugu super star allu arjun bought new vanity van and he shares some beautiful pics of the costly bus.
  Friday, July 5, 2019, 16:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X