ಶ್ರೀಮುರಳಿ ಹುಟ್ಟುಹಬ್ಬಕ್ಕೆ ತೆಲುಗು ನಟ ಜಗಪತಿಬಾಬು ವಿಶ್ ಮಾಡಿದ್ದು ಹೀಗೆ
ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು (ಡಿಸೆಂಬರ್ 17) ಹುಟ್ಟುಹಬ್ಬದ ಸಂಭ್ರಮ. ಈ ವರ್ಷ ಶ್ರೀಮರಳಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ಅಪಾರ ಸಂಖ್ಯೆಯ ಅಭಿಮಾನಿಗಳು ಶ್ರೀಮುರಳಿ ಮನೆ ಮುಂದೆ ಬಂದು ಜಮಾಯಿಸುತ್ತಿದ್ದರು. ಆದರೆ ಈ ವರ್ಷ ಎಲ್ಲಾ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ.
Recommended Video
ಮನೆಯ ಬಳಿ ಬರಬೇಡಿ ಎಂದು ಶ್ರೀಮುರಳಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ವಿಶ್ ಮಾಡಿ, ಸಂತಸ ಪಡುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ವಿಶ್ ಮಾಡುತ್ತಿದ್ದಾರೆ. ವಿಶೇಷ ಎಂದರೆ ಶ್ರೀಮುರಳಿ ಹುಟ್ಟುಹಬ್ಬಕ್ಕೆ ತೆಲುಗು ನಟ ಜಗಪತಿ ಬಾಬು ವಿಶ್ ಮಾಡಿದ್ದಾರೆ.

ಜಗಪತಿ ಬಾಬು ವಿಶ್
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜಗಪತಿ ಬಾಬು, ಜನ್ಮ ದಿನದ ಶುಭಾಶಯಗಳು ಶ್ರೀಮುರಳಿ. ನಾನು ಕೆಲಸ ಮಾಡಿದ ಕನ್ನಡ ನಟರಲ್ಲಿ ತುಂಬಾ ಕೂಲ್ ನಟ ಎಂದು ಭಾವಿಸುತ್ತೇನೆ. ನೀವು ನನಗೆ ತೋರಿದ ಎಲ್ಲಾ ಕಾಳಜಿಗೆ ಧನ್ಯವಾದಗಳು' ಎಂದು ವಿಶ್ ಮಾಡಿದ್ದಾರೆ.

ಮದಗಜ ಚಿತ್ರದಲ್ಲಿ ಜಗಪತಿ ಬಾಬು ನಟನೆ
ಅಂದಹಾಗೆ ಜಗಪತಿ ಬಾಬು ಶ್ರೀಮುರಳಿ ನಟನೆಯ ಮದಗಜ ಚಿತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಮುರಳಿ ಜೊತೆ ತೆರೆಹಂಚಿಕೊಂಡಿದ್ದಾರೆ. ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಜಗಪತಿ ಬಾಬು ಕನ್ನಡದಲ್ಲೂ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.

ಮದಗಜ ಸಿನಿಮಾದ ಟೀಸರ್ ರಿಲೀಸ್
ಇಂದು ಮದಗಜ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಮಫ್ತಿ ಬಳಿಕ ಶ್ರೀಮುರಳಿ ಮತ್ತೆ ಮಾಸ್ ಲುಕ್ ನಲ್ಲಿ ಎಂಟ್ರಿ ಕೊಟ್ಟಿದ್ದು, ಮದಗಜ ಚಿತ್ರದ ಟೀಸರ್ ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಕ್ಕೆ ಆಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಮುರಳಿ ಜೊತೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಣಿಸಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳಿಗೆ ಏನೆಲ್ಲ ಗಿಫ್ಟ್ ಸಿಗಲಿದೆ
ಇನ್ನೂ ಇಂದು ಹುಟ್ಟುಹಬ್ಬದ ಪ್ರಯುಕ್ತ ಶ್ರೀಮುರಳಿ ಕಡೆಯಿಂದ ಏನೆಲ್ಲ ಗಿಫ್ಟ್ ಸಿಗಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ. ಈಗಾಗಲೇ ಎರಡು ಸಿನಿಮಾ ಅನೌನ್ಸ್ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಯಾವೆಲ್ಲ ಸಿನಿಮಾಗಳು ಘೋಷಣೆ ಆಗಲಿದೆ ಎನ್ನುವುದು ಕಾದು ನೋಡಬೇಕು.


Click it and Unblock the Notifications











