ತೆಲುಗು ನಟ ಮಹೇಶ್ ಬಾಬು ಮಲತಾಯಿ ವಿಜಯ ನಿರ್ಮಲಾ ವಿಧಿವಶ

ತೆಲುಗು ಇಂಡಸ್ಟ್ರಿಯ ಖ್ಯಾತ ನಟಿ, ನಿರ್ದೇಶಕಿ, ನಿರ್ಮಾಪಕಿ ವಿಜಯ ನಿರ್ಮಲಾ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ. 73 ವರ್ಷದ ವಿಜಯ ನಿರ್ಮಲಾ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಅಂದ್ಹಾಗೆ ವಿಜಯ ನಿರ್ಮಲಾ ಅವರು ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಹಾಗೂ ಮಹೇಶ್ ಬಾಬು ಅವರ ಮಲತಾಯಿ. ವಿಜಯ ನಿರ್ಮಲಾ ಕೃಷ್ಣಮೂರ್ತಿ ಎಂಬುವರನ್ನ ವಿವಾಹವಾಗಿದ್ದರು. ಈ ದಂಪತಿಗೆ ನರೇಶ್ ಎಂಬ ಮಗ ಇದ್ದಾನೆ. ನರೇಶ್ ಕೂಡ ಚಿತ್ರರಂಗದಲ್ಲಿ ನಟ. ಕೃಷ್ಣಮೂರ್ತಿ ಅವರಿಂದ ವಿಚ್ಛೇದನ ಪಡೆದ ನಿರ್ಮಲಾ, ಬಳಿಕ ಸೂಪರ್ ಸ್ಟಾರ್ ಕೃಷ್ಣ ಅವರ ಜೊತೆ ಮದುವೆಯಾದರು.

ಮೂಲತಃ ತಮಿಳುನಾಡಿನವರಾದ ವಿಜಯ ನಿರ್ಮಲಾ ಅವರ ತಂದೆ ಸಿನಿಮಾ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡ್ತಿದ್ರು. ಬಳಿಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಿರ್ಮಲಾ, ಸಿನಿಮಾ ನಿರ್ದೇಶನಕ್ಕೆ ಇಳಿದರು. ಸುಮಾರು 44ಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಮಹಿಳೆಯೊಬ್ಬರು ಅತಿ ಹೆಚ್ಚು ಸಿನಿಮಾ ನಿರ್ದೇಶನ ಮಾಡಿರುವ ಕಾರಣ ಇದು 2002ರಲ್ಲಿ ಗಿನ್ನಿಸ್ ದಾಖಲೆಯಾಗಿದೆ.

Telugu actor mahesh babu step mother vijaya nirmala passed away

ನಿರ್ದೇಶನ ಮಾತ್ರವಲ್ಲ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆ ಸೇರಿದಂತೆ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಕೃಷ್ಣ ಅವರ ಜೊತೆ ಸುಮಾರು 47 ಚಿತ್ರದಲ್ಲಿ ನಟಿಸಿರುವ ದಾಖಲೆ ಹೊಂದಿದ್ದಾರೆ.

ವಿಜಯ ನಿರ್ಮಲಾ ಅವರ ಅಗಲಿಕೆಗೆ ಇಡೀ ದಕ್ಷಿಣ ಭಾರತದ ಚಿತ್ರರಂಗ ಸಂತಾಪ ಸೂಚಿಸಿದೆ. ಸಿನಿ ಇಂಡಸ್ಟ್ರಿಗೆ ಸಾಕಷ್ಟು ಕಲಾವಿದರನ್ನ ಪರಿಚಯಿಸಿ, ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ಖ್ಯಾತಿ ಇವರಿಗೆ ಸಲ್ಲಿಸುತ್ತೆ.

More from Filmibeat

English summary
Telugu legendary director, actor Vijaya Nirmala, passed away on June 26th, 2019 Midnight at the age of 75 in Hyderabad at Continental hospital. she is step mother of mahesh babu and wife of actor krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X