twitter
    For Quick Alerts
    ALLOW NOTIFICATIONS  
    For Daily Alerts

    ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದ ನಟ ಮೋಹನ್ ಬಾಬು

    |

    ತೆಲುಗು ಖ್ಯಾತ ನಟ ಹಾಗೂ ರಾಜಕಾರಣಿ ಮೋಹನ್ ಬಾಬು ಇಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರಿದ್ದಾರೆ.

    ತೆಲುಗು ಸೂಪರ್ ಸ್ಟಾರ್ ಎನ್.ಟಿ.ಆರ್ ಸ್ಥಾಪಿಸಿದ್ದ ತೆಲುಗು ದೇಶಂ ಪಕ್ಷದಲ್ಲಿದ್ದ ನಟ ಮೋಹನ್ ಬಾಬು, ಎನ್.ಟಿ.ಆರ್ ಗೆ ಅತ್ಯಂತ ಆತ್ಮೀಯರಾಗಿದ್ದರು. ಟಿಡಿಪಿ ಪಕ್ಷದಲ್ಲಿ ಸ್ಪರ್ಧಿಸಿ ಎಂಪಿ ಕೂಡ ಆಗಿದ್ದರು. ಎನ್.ಟಿ.ಆರ್ ನಿಧನದ ಬಳಿಕ ತೆಲುಗು ದೇಶಂ ಪಕ್ಷದ ಜೊತೆ ಹೆಚ್ಚು ಗುರುತಿಸಿಕೊಂಡಿರಲಿಲ್ಲ.

    ಸುಮಲತಾ ಪರ ಪ್ರಚಾರಕ್ಕಾಗಿ ಬರ್ತಾರಾ ಈ ನಾಲ್ಕು ಸೂಪರ್ ಸ್ಟಾರ್ಸ್? ಸುಮಲತಾ ಪರ ಪ್ರಚಾರಕ್ಕಾಗಿ ಬರ್ತಾರಾ ಈ ನಾಲ್ಕು ಸೂಪರ್ ಸ್ಟಾರ್ಸ್?

    ನಿಧಾನವಾಗಿ ಪಕ್ಷದಿಂದ ದೂರವಾಗಿದ್ದ ಮೋಹನ್ ಬಾಬು, ಈಗ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಇದೇ ವೇಳೆ ಮಾತನಾಡಿದ ಮೋಹನ್ ಬಾಬು ''ಜಗನ್ಮೋಹನ್ ರೆಡ್ಡಿ ತೆಲುಗು ಜನರಿಗೆ ಒಳ್ಳೆಯದು ಮಾಡಲಿದ್ದಾರೆ, ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗ್ತಾರೆ'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    Telugu actor mohan babu joins Ysrcp

    ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಗೆ ಆಪ್ತ ಸ್ನೇಹಿತನಾಗಿದ್ದ ಮೋಹನ್ ಬಾಬು ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವುದು ಕರ್ನಾಟಕದಲ್ಲೂ ಕುತೂಹಲ ಹೆಚ್ಚಿಸಿದೆ. ಯಾಕಂದ್ರೆ, ಅಂಬರೀಶ್ ಪತ್ನಿ ಸುಮಲತಾ ಮಂಡ್ಯ ಲೋಕಸಭೆ ಚುನಾವಣೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಸುಮಲತಾ ಪರವಾಗಿ ಮೋಹನ್ ಬಾಬು ಪ್ರಚಾರಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ.

    English summary
    Senior Telugu actor and former MP Mohan Babu joins the YSRCP. Mohan Babu is an Indian film actor, director, and producer, known for his works predominantly in Telugu Cinema.
    Tuesday, March 26, 2019, 16:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X