ಕಿಚ್ಚ ಸುದೀಪ್ ನಟನೆ ಬಗ್ಗೆ ತೆಲುಗು ನಟ ನಾಗಾರ್ಜುನ್ ಹೇಳಿದ್ದೇನು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಚಿತ್ರರಂಗದವರಿಗೂ ಚಿರಪರಿಚಿತರು. ಅನೇಕ ವರ್ಷಗಳ ಹಿಂದೆಯೇ ಸುದೀಪ್ ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Recommended Video

ನಾನು ಸುದೀಪ್ ಗೆ ಸಪೋರ್ಟ್ ಮಾಡೋದು ಇದೊಂದೆ ಕಾರಣಕ್ಕೆ | Kichcha 25years Celebration | ShivaRaj Kumar

ಅಭಿನಯ ಚಕ್ರವರ್ತಿಯ ನಟನೆಯನ್ನು ಅನೇಕ ಸ್ಟಾರ್ ಕಲಾವಿದರೂ ಕೊಂಡಾಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಅವರ '' ಈಗ'' ಸಿನಿಮಾದಲ್ಲಿ ನಟಿಸಿದ್ದ ಸುದೀಪ್ ಗೆ ಆ ಪಾತ್ರ ಮತ್ತಷ್ಟು ಖ್ಯಾತಿ ತಂದುಕೊಟ್ಟಿತು. ಜೊತೆಗೆ ಕಿಚ್ಚ ಗಡಿಗೂ ಮೀರಿ ಬೆಳೆದುನಿಂತರು.

ಸದ್ಯ ಬಣ್ಣದ ಲೋಕದಲ್ಲಿ 25 ವರ್ಷಗಳನ್ನು ಪೂರೈಸಿರುವ ಸುದೀಪ್, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲೂ ಮಿಂಚಿದ್ದಾರೆ. ಇದೀಗ ಮಲಯಾಳಂ ಸಿನಿಮಾದಲ್ಲೂ ನಟಿಸಲು ಸಜ್ಜಾಗಿದ್ದಾರೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಕಿಚ್ಚನಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ಸಮಯದಲ್ಲಿ ಸುದೀಪ್ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ಕಿಚ್ಚನ ನಟನೆ ನೋಡಿ ತೆಲುಗು ನಟ ನಾಗಾರ್ಜುನ ಹಾಡಿ ಹೊಗಳಿದ್ದನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

ಶಿವಣ್ಣ ಬಳಿ ನಾಗಾರ್ಜುನ ಹೇಳಿದ್ದೇನು?

ಶಿವಣ್ಣ ಬಳಿ ನಾಗಾರ್ಜುನ ಹೇಳಿದ್ದೇನು?

ತೆಲುಗಿನ ಖ್ಯಾತ ನಟ ನಾಗಾರ್ಜುನ, ಸುದೀಪ್ ನಟನೆ ನೋಡಿ, ಶಿವಣ್ಣ ಬಳಿ ಇಷ್ಟು ಅದ್ಭುತವಾಗಿ ನಟಿಸುತ್ತಾರೆ ಎಂದು ಹೇಳಿದ್ದರಂತೆ. ಸುದೀಪ್ ನಟನೆಯ ''ಈಗ'' ಸಿನಿಮಾ ನೋಡಿ ಫಿದಾ ಆಗಿದ್ದ ನಾಗಾರ್ಜುನ, ಶಿವರಾಜ್ ಕುಮಾರ್ ಬಳಿ ಹೇಳಿಕೊಂಡಿದ್ದ ಮಾತನ್ನು ಹ್ಯಾಟ್ರಿಕ್ ಹೀರೋ ಬಹಿರಂಗ ಪಡಿಸಿದ್ದಾರೆ.

ನಾಗಾರ್ಜುನ ಮಾತು ಕೇಳಿ ತುಂಬಾ ಹೆಮ್ಮೆಯಾಯಿತು

ನಾಗಾರ್ಜುನ ಮಾತು ಕೇಳಿ ತುಂಬಾ ಹೆಮ್ಮೆಯಾಯಿತು

'ನಾಗಾರ್ಜುನ ಹೇಳಿದ್ದು ಕೇಳಿ ತುಂಬಾ ಖುಷಿ ಆಯ್ತು. ಮತ್ತೊಬ್ಬ ದೊಡ್ಡ ಹೀರೋ ಹೀಗೆ ಹೇಳಿದಾಗ ತುಂಬಾ ಖುಷಿ ಆಗುತ್ತೆ. ಅದನ್ನು ಕೇಳಿ ತುಂಬಾ ಹೆಮ್ಮೆ ಆಯ್ತು. ನಮ್ಮ ಕನ್ನಡದ ನಟನ ಬಗ್ಗೆ ಮತ್ತೊಂದು ಭಾಷೆಯ ಹೀರೋ ಮಾತಾಡ್ತಾರೆ ಎಂದರೆ ಅದಕ್ಕಿಂತ ಸಂತೋಷ ಇನ್ನೇನು ಬೇಕು' ಎಂದು ಶಿವಣ್ಣ ಹೇಳಿದ್ದಾರೆ.

ಇದು ಪ್ರಾರಂಭ ಅಷ್ಟೆ

ಇದು ಪ್ರಾರಂಭ ಅಷ್ಟೆ

ಇನ್ನು ಸುದೀಪ್ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ಇದು ಪ್ರಾರಂಭ ಅಂತ ತಿಳಿದುಕೊಳ್ಳಿ, ಇನ್ನು ಸಾಕಷ್ಟು ವರ್ಷಗಳಿವೆ. ನಾನು 125ನೇ ಸಿನಿಮಾ ಮಾಡುತ್ತಿದ್ರು ಇದೇ ನನ್ನ ಮೊದಲ ಸಿನಿಮಾ ಅಂತ ಅಂದುಕೊಂಡು ಮಾಡುತ್ತೇನೆ' ಎಂದಿದ್ದಾರೆ.

ತುಂಬಾ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ

ತುಂಬಾ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ

'ಯಾವದೇ ಒಂದು ಕೆಲಸ ಮಾಡಿದ್ರು ತುಂಬಾ ಆಸಕ್ತಿಯಿಂದ ಮಾಡುತ್ತೀರಿ, ಕ್ರಿಕೆಟ್ ಪಂದ್ಯ ಆಯೋಜನೆ ಮಾಡಿದ್ರು ಅಷ್ಟು ಅಚ್ಚುಕಟ್ಟಾಗಿ ಮಾಡುತ್ತೀರಿ. ಹಾಗಾಗಿ ನಾವು ನಿಮಗೆ ಬೆಂಬಲ ನೀಡುತ್ತೀವಿ. ನಾನು ಸುದೀಪ್ ಒಟ್ಟಿಗೆ ನಟನೆ ಮಾಡಿದ್ದೀವಿ. ಮತ್ತೆ ನಾವಿಬ್ಬರು ಸಿನಿಮಾ ಮಾಡಬೇಕು' ಎಂದು ಶಿವಣ್ಣ ಹೇಳಿದ್ದಾರೆ.

More from Filmibeat

English summary
Shiva Rajkumar talks about Sudeep in Silver Jubilee Function. He says Nagarjuna Praises Sudeep performance in Eega movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X