ಶಿವಣ್ಣನ ಮನೆಗೆ ತೆಲುಗು ನಟ ಬಾಲಕೃಷ್ಣ ಬಂದಿದ್ದೇಕೆ
ತೆಲುಗಿನ ಖ್ಯಾತ ನಟ ಕಮ್ ರಾಜಕಾರಣಿ ನಂದಮೂರಿ ಬಾಲಕೃಷ್ಣ ಅವರು ಇತ್ತೀಚೆಗೆ ದಿಢೀರ್ ಅಂತ ಬೆಂಗಳೂರಿನ ನಾಗಾವಾರದಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಹಾಜರಾಗಿದ್ದರು.
ಟಾಲಿವುಡ್ ನ ನಂದಮೂರಿ ಕುಟುಂಬಕ್ಕೂ ಕನ್ನಡ ಚಿತ್ರರಂಗದ ವರನಟ ಡಾ.ರಾಜ್ ಅವರ ಕುಟುಂಬಕ್ಕೂ ಬಹಳ ವರ್ಷಗಳ ಹಿಂದಿನ ನಂಟು ಇದೆ. ಅದು ಕೇವಲ ಅಣ್ಣಾವ್ರ ಕಾಲಕ್ಕೆ ಮಾತ್ರ ಸೀಮಿತವಾಗದೇ ಈಗ ಮಕ್ಕಳ ಕಾಲದಲ್ಲೂ ಆ ನಂಟು ಮುಂದುವರಿಯುತ್ತಿದೆ.[ಚಿತ್ರರಂಗದಲ್ಲಿ ಶಿವಣ್ಣನಿಗಿರುವ ಬೇಡಿಕೆಯ ಹಿಂದಿರುವ ಗುಟ್ಟೇನು]

ಅಂದಹಾಗೆ ಇವರಿಬ್ಬರು ಮುಂದೆ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರ ಅಂತ ನೀವು ಕನ್ ಫ್ಯೂಶನ್ ಮಾಡಿಕೊಳ್ಳಬೇಡಿ. ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಲು ಕಾರಣ ಏನಪ್ಪಾ ಅಂದ್ರೆ, ಹೈದ್ರಾಬಾದ್ ಗೆ ಶಿವಣ್ಣ ಅವರನ್ನು ಕರೆದುಕೊಂಡು ಹೋಗಲು ಇವರು ಬಂದಿದ್ದು.[ಶಿವಣ್ಣ30 ವಿಶೇಷ: ಶಿವಣ್ಣ ಅವರ 20 ಉತ್ತಮ ಚಿತ್ರಗಳ List]

ಹೌದು ಅನಂತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿಯಲ್ಲಿ ಫೆ.27 ಹಾಗೂ 28ರಂದು ನಡೆಯಲಿರುವ 'ಲೇಪಾಕ್ಷಿ ಉತ್ಸವ -2016'ಕ್ಕೆ ಶಿವಣ್ಣ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲು ನಟ ಕಮ್ ರಾಜಕೀಯ ವ್ಯಕ್ತಿ ಆಗಿರುವ ನಂದಮೂರಿ ಬಾಲಕೃಷ್ಣ ಅವರೇ ನೇರವಾಗಿ ಬೆಂಗಳೂರಿಗೆ ಬಂದಿಳಿದಿದ್ದರು.
ಇನ್ನು ಈ ಆಮಂತ್ರಣವನ್ನು ಸಂತೋಷವಾಗಿ ಸ್ವೀಕರಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಖಂಡಿತ ಬರುವುದಾಗಿ ಮಾತು ಬೇರೆ ಕೊಟ್ಟುಬಿಟ್ಟಿದ್ದಾರಂತೆ.[ಶಿವಣ್ಣ30: ಅಭಿಮಾನಿಗಳು ಶಿವಣ್ಣನಿಗೆ ಪ್ರೀತಿಯಿಂದ ಕೊಟ್ಟ ಗಿಫ್ಟೇನು?]

ನಂದಮೂರಿ ಬಾಲಕೃಷ್ಣ ಅವರು ಹಿಂದುಪುರ ಕ್ಷೇತ್ರದ ಶಾಸಕರು. ನಟ ಕಮ್ ಶಾಸಕ ಬಾಲಕೃಷ್ಣ ಅವರೇ 'ಲೇಪಾಕ್ಷಿ ಉತ್ಸವ-2016ರ ಕಾರ್ಯಕ್ರಮದ ಮುಖ್ಯ ಆಯೋಜಕರು. ಇದು ಆಂಧ್ರಪ್ರದೇಶ ಸರ್ಕಾರದ ಒಂದು ಸಾರ್ವಜನಿಕ ಕಾರ್ಯಕ್ರಮ, ಆಂಧ್ರಪ್ರದೇಶ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ಗೊಳಿಸುವ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮೊನ್ನೆ ಮೊನ್ನೆ ನಂದಮೂರಿ ಕುಟಂಬದ ಮತ್ತೊಂದು ಕುಡಿ ತೆಲುಗು ಸ್ಟಾರ್ ನಟ ಜ್ಯೂನಿಯರ್ ಎನ್.ಟಿ.ಆರ್ ಅವರು ಪವರ್ ಸ್ಟಾರ್ ಪುನೀತ್ ಅವರ 'ಚಕ್ರವ್ಯೂಹ' ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದರು.[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]

ಆ ಮೂಲಕ ಅವರ ಹಳೇ ಕಾಲದ ಬಂಧವನ್ನು ಉಳಿಸುತ್ತಿದ್ದರೆ, ಇದೀಗ ಬಾಲಕೃಷ್ಣ ಅವರು ಶಿವಣ್ಣ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಮತ್ತೆ ಹಳೇ ಕಾಲದ ನಂಟನ್ನು ಮುಂದುವರಿಸುತ್ತಿದ್ದಾರೆ.


Click it and Unblock the Notifications











