ಹೈದರಾಬಾದ್ ನಲ್ಲಿ ನಡೆಯುವ 'ಪೈಲ್ವಾನ್' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಈ ಸ್ಟಾರ್ ನಟ ಗೆಸ್ಟ್
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಕುಸ್ತಿ ಅಖಾಡದಲ್ಲಿ ತೊಡೆತಟ್ಟಿ ನಿಂತಿರುವ ಕಿಚ್ಚನನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಚಿತ್ರತಂಡ ಸದ್ಯ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಕನ್ನಡ ಮಾತ್ರವಲ್ಲದೆ ಐದು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಕಾರಣ ಬೇರೆ ಬೇರೆ ಭಾಷೆಯಲ್ಲಿ ಚಿತ್ರದ ಪ್ರಮೋಷನನ್ನು ಭರ್ಜರಿಯಾಗಿ ಮಾಡುತ್ತಿದೆ ಚಿತ್ರತಂಡ.
ಬಾಲಿವುಡ್ ಅಂಗಳದಲ್ಲಿ ಪೈಲ್ವಾನ್ ಚಿತ್ರದ ಬಗ್ಗೆ ಪ್ರಚಾರ ಮಾಡಿ, ಈಗ ಚಿತ್ರತಂಡ ತೆಲುಗು ಚಿತ್ರರಂಗದ ಕಡೆ ಹೊರಟಿದೆ. ಇಂದು ಹೈದರಾಬಾದ್ ನಲ್ಲಿ ನಡೆಯುವ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ ಪೈಲ್ವಾನ್ ಟೀಂ. ಈ ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ಸುನೀಲ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗುತ್ತಿದೆ.
ವಿಶೇಷ ಅಂದ್ರೆ ಈ ಕಾರ್ಯಕ್ರಮಕ್ಕೆ ಯಾರು ಅತಿಥಿಯಾಗಿ ಬರುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದ್ರೀಗ ಮೂಲಗಳ ಪ್ರಕಾರ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ತೆಲುಗು ನಟ ನಾನಿ ಬರ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಮಾತ್ರ ಅಧಿಕೃತವಾಗಿ ಹೇಳಿಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೈಲ್ವಾನ್ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ನಾನಿ ಅತಿಥಿ ಎನ್ನುವ ಸುದ್ದಿ ಹರಿದಾಡುತ್ತಿದೆ.

ನಾನಿ ಮತ್ತು ಸುದೀಪ್ ಇಬ್ಬರು ಈಗ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಾಗಾಗಿ ಪೈಲ್ವಾನ್ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬಂದರೆ ಅಚ್ಚರಿ ಇಲ್ಲ. ಅಂದ್ಹಾಗೆ ಇಂದು ಸಂಜೆ 6ಗಂಟೆಗೆ ಹೈದರಾಬಾದ್ ನ ಜಿ ಆರ್ ಸಿ ಕನ್ವೇಷನ್ ಹಾಲ್ ನಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ಮದಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಭಾಗಿಯಾಗುವ ಸಾಧ್ಯತೆ ಇದೆ.
ಒಂದು ವೇಳೆ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ ಯೂ ಟ್ಯೂಬ್ ನಲ್ಲಿ ಪೈಲ್ವಾನ್ ಸಂಭ್ರಮ ವೀಕ್ಷಸ ಬಹುದು. ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಗೆ ಮೆಂಟರ್ ಆಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಆಕಾಂಕ್ಷ ಸಿಂಗ್ ಬಣ್ಣಹಚ್ಚಿದ್ದಾರೆ.


Click it and Unblock the Notifications











