ಕನ್ನಡದ 'ಮಿಸ್ಸಿಂಗ್ ಬಾಯ್'ಗೆ ಸಾಥ್ ನೀಡಿದ ತೆಲುಗು ನಟ ನಾನಿ

ಸ್ಯಾಂಡಲ್ ವುಡ್ ನಲ್ಲಿ 'ಮಿಸ್ಸಿಂಗ್ ಬಾಯ್' ನ ಹುಡುಕಾಟ ಜೋರಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೆ ಕಿಚ್ಚ ಸುದೀಪ್ 'ಮಿಸ್ಸಿಂಗ್ ಬಾಯ್' ಟೀಂ ಸೇರಿಕೊಂಡಿದ್ದರು. ಯಾರಿದು 'ಮಿಸ್ಸಿಂಗ್ ಬಾಯ್' ಅಂತ ನೀವು ಹುಡುಕಬೇಡಿ. ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಹೊಸ ಸಿನಿಮಾ.

ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ದವಾಗಿರುವ 'ಮಿಸ್ಸಿಂಗ್ ಬಾಯ್' ಚಿತ್ರದ ಆಡಿಯೋವನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದರು. ವಿಭಿನ್ನ ಟ್ರೈಲರ್ ಮತ್ತು ಹಾಡುಗಳ ಮೂಲಕ 'ಮಿಸ್ಸಿಂಗ್ ಬಾಯ್' ಪ್ರೇಕ್ಷಕರನ್ನ ಸೆಳೆಯುತ್ತಿದೆ.

ಮಿಸ್ಸಿಂಗ್ ಬಾಯ್' ನ ಹುಡುಕಾಟ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ, ಪಕ್ಕದ ತೆಲುಗಿನಲ್ಲೂ ಜೋರಾಗಿದೆ. ಹೌದು, ತೆಲುಗು ನಟ ನಾನಿ 'ಮಿಸ್ಸಿಂಗ್ ಬಾಯ್' ಚಿತ್ರದ ಟ್ರೈಲರ್ ನೋಡಿ ಇಂಪ್ರೆಸ್ ಆಗಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

Telugu actor nani wish to kannada movie missing boy

"ಪ್ರೀತಿಯ ಪಮ್ಮಿ (ನಿರ್ಮಾಪಕ ಕೊಲ್ಲ ಪ್ರವೀಣ್) ಮತ್ತು ಇಡೀ ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರ ಮಾರ್ಚ್ ಅಂದರೆ ಇದೆ ತಿಂಗಳು 22ಕ್ಕೆ ತೆರೆಗೆ ಬರುತ್ತಿದೆ" ಎಂದು ಟ್ವಿಟ್ ಮಾಡುವ ಮೂಲಕ ಚಿತ್ರತಂಡದ ಬೆನ್ನು ತಟ್ಟಿದ್ದಾರೆ.

ಅಂದ್ಹಾಗೆ, 'ಮಿಸ್ಸಿಂಗ್ ಬಾಯ್' ನೈಜ ಘಟನೆ ಆಧಾರಿತ ಸಿನಿಮಾ. ತಾಯಿ ಮತ್ತು ತಾಯ್ನಾಡಿಗೆ ಎಂಬ ಅಡಿಬರಹವಿರುವ ಚಿತ್ರದಲ್ಲಿ ಕಳೆದುಹೋಗಿರುವ ಹುಡುಗನೊಬ್ಬನ ಕರುಣಾಜನಕ ಕತೆಯನ್ನು ಹೇಳಲಾಗಿದೆ. ಚಿತ್ರದಲ್ಲಿ ನಾಯಕನಾಗಿ ಗುರುನಂದನ್ ಕಾಣಿಸಿಕೊಂಡಿದ್ದಾರೆ. ಚಿತ್ರ ರಘುರಾಮ್ ಸಾರಥ್ಯದಲ್ಲಿ ಮೂಡಿಬಂದಿದೆ.

More from Filmibeat

English summary
Telugu actor nani has taken his twitter account to wish kannada movie missing boy. the movie directed by raghuram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X