'ಕೆಜಿಎಫ್' ಕಂಡು ಕ್ಲೀನ್ ಬೋಲ್ಡ್ ಆದ ತೆಲುಗು ನಟ ನಿತೀನ್
ಕೆಜಿಎಫ್ ಚಿತ್ರಕ್ಕೆ ಐದು ಭಾಷೆಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲೂ ಸಖತ್ ಬಿಸಿನೆಸ್ ಮಾಡ್ತಿದೆ. ಈಗಾಗಲೇ ಕೆಜಿಎಫ್ ಚಿತ್ರವನ್ನ ಎಲ್ಲಾ ಭಾಷಿಗರು ಮೆಚ್ಚಿಕೊಂಡಿದ್ದು, ಪರಭಾಷೆ ನಟ-ನಟಿಯರು ಶಬ್ಬಾಶ್ ಎನ್ನುತ್ತಿದ್ದಾರೆ.
ನಟ ಜಗ್ಗೇಶ್ ಮಾರುವೇಷದಲ್ಲಿ ಹೋಗಿ ಸಿನಿಮಾ ನೋಡಿದ್ದಾರೆ. ನಟಿ ಅಮೂಲ್ಯ 25 ಟಿಕೆಟ್ ಬುಕ್ ಮಾಡಿ ಸ್ನೇಹಿತರು, ಕುಟುಂಬದವರ ಜೊತೆ ಕೆಜಿಎಫ್ ನೋಡಿದ್ದಾರೆ.

ಇದೀಗ, ತೆಲುಗು ನಿತೀನ್ ಕೆಜಿಎಫ್ ಚಿತ್ರಕ್ಕೆ ಫಿದಾ ಆಗಿದ್ದಾರೆ. ಕೆಜಿಎಫ್ ತೆಲುಗು ಸಿನಿಮಾ ವೀಕ್ಷಿಸಿದ ನಿತೀನ್, ''ಮನಮೋಹಕ ದೃಶ್ಯ, ಅತ್ಯದ್ಭುತ ಸಂಗೀತ, ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೆಲಸ ನಿಜಕ್ಕೂ ಇಷ್ಟವಾಯಿತು. ಯಶ್ ಅವರ ನಟನೆ ಚಿಂದಿ. ತೆಲುಗು ಚಿತ್ರರಂಗಕ್ಕೆ ಸ್ವಾಗತ ಸಹೋದರ. ನಾನು ಎರಡನೇ ಚಾಪ್ಟರ್ ಗಾಗಿ ಕಾಯ್ತಿದ್ದೀನಿ'' ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದ್ದು, ನೂರು ಕೋಟಿ ಗಳಿಸಿದೆ. ಈ ಮೂಲಕ ಕನ್ನಡದ ಮೊದಲ ಸಿನಿಮಾ ನೂರು ಕೋಟಿ ಕ್ಲಬ್ ಗೆ ಸೇರಿದೆ.


Click it and Unblock the Notifications











