For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ಪ್ರಭಾಸ್ ಗೆ ಕನ್ನಡದ ಈ ನಟರಂದ್ರೆ ಇಷ್ಟವಂತೆ.!

  By Bharath Kumar
  |
  Prabhas Telugu Actor likes These 4 Kannada Stars | Watch video | Filmibeat Kannada

  ತೆಲುಗು ನಟ ಪ್ರಭಾಸ್ ಗೆ 'ಬಾಹುಬಲಿ' ಚಿತ್ರದ ನಂತರ ಕರ್ನಾಟಕದಲ್ಲೂ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಸದ್ಯ, 'ಸಾಹೋ' ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರಭಾಸ್, ತೆಲುಗು, ತಮಿಳು ಹಾಗು ಹಿಂದಿಯಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ.

  ಕನ್ನಡ ಪ್ರೇಕ್ಷಕರು ಇಷ್ಟಪಟ್ಟಿರುವ ಪ್ರಭಾಸ್ ಗೆ ಕನ್ನಡದಲ್ಲಿ ನೆಚ್ಚಿನ ನಟರಿದ್ದಾರೆ ಎಂಬುದು ವಿಶೇಷ. ಅದು ಒಬ್ಬರಲ್ಲ, ಇಬ್ಬರಲ್ಲ ಕನ್ನಡದ ನಾಲ್ಕು ನಟರಂದ್ರೆ ಪ್ರಭಾಸ್ ಗೆ ಹೆಚ್ಚು ಇಷ್ಟವಂತೆ.

  ಹೌದು, ಇತ್ತೀಚೆಗಷ್ಟೇ ಕನ್ನಡ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಪ್ರಭಾಸ್ ಕನ್ನಡ ನಟರು ಮತ್ತು ಕರ್ನಾಟಕದ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ರೆ, ಪ್ರಭಾಸ್ ಇಷ್ಟ ಪಡುವ ಕನ್ನಡ ನಟರು ಯಾರು? ಮುಂದೆ ಓದಿ.....

  ಕನ್ನಡ ಪ್ರೇಕ್ಷಕರಿಗೆ ಧನ್ಯವಾದಗಳು

  ಕನ್ನಡ ಪ್ರೇಕ್ಷಕರಿಗೆ ಧನ್ಯವಾದಗಳು

  ''ಕನ್ನಡ ಪ್ರೇಕ್ಷಕರಿಗೆ ತುಂಬ ಧನ್ಯವಾದಗಳು. 'ಬಾಹುಬಲಿ' ಸಿನಿಮಾ ಗೆಲ್ಲಲು ನೀವೂ ಕೂಡ ಕಾರಣ. ನನ್ನನ್ನು ಮತ್ತು ನನ್ನ ಸಿನಿಮಾವನ್ನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್, ನಿಮ್ಮಂಥ ಸುಂದರ ಅಭಿಮಾನಿಗಳನ್ನ ಪಡೆದಿರುವ ನನ್ನ ಅದೃಷ್ಟ''ವೆಂದಿದ್ದಾರೆ

  ಉಪೇಂದ್ರ ಅಂದ್ರೆ ತುಂಬ ಇಷ್ಟ

  ಉಪೇಂದ್ರ ಅಂದ್ರೆ ತುಂಬ ಇಷ್ಟ

  ಕನ್ನಡದಲ್ಲಿ ಯಾವ ನಟ ನಿಮಗೆ ಇಷ್ಟ ಎಂಬ ಪ್ರಶ್ನೆಗೆ ''ನನಗೆ ತುಂಬ ಜನ ಇಷ್ಟ. ಅದರಲ್ಲೂ ಉಪೇಂದ್ರ ಅವರಂದ್ರೆ ಹೆಚ್ಚು ಇಷ್ಟ. ತೆಲುಗಿನಲ್ಲಿ ಅವರ ಚಿತ್ರಗಳನ್ನ ನಾನು ನೋಡಿದ್ದೀನಿ'' ಎಂದು ಉಪ್ಪಿ ಬಗ್ಗೆ ಮೆಚ್ಚಿಕೊಂಡಿದ್ದಾರೆ.

  ಡಾ.ರಾಜ್ ಅಂದ್ರೆ ಎಲ್ಲರಿಗೂ ಇಷ್ಟ

  ಡಾ.ರಾಜ್ ಅಂದ್ರೆ ಎಲ್ಲರಿಗೂ ಇಷ್ಟ

  ಮೊದಲೇ ಹೇಳಿದಾಗೆ ಪ್ರಭಾಸ್ ಅವರಿಗೆ ಕನ್ನಡದಲ್ಲಿ ತುಂಬ ಜನ ನಟರು ಇಷ್ಟ. ''ಡಾ.ರಾಜ್ ಕುಮಾರ್ ಅಂದ್ರೆ ಎಲ್ಲರಿಗೂ ಇಷ್ಟ'' ಎನ್ನುವ ಮೂಲಕ ಅಣ್ಣಾವ್ರನ್ನ ಕೂಡ ಪ್ರಭಾಸ್ ನೆನಪಿಸಿಕೊಂಡಿದ್ದಾರೆ.

  ಪುನೀತ್ ಸಿನಿಮಾಗಳನ್ನ ನೋಡಿದ್ದಾರಂತೆ

  ಪುನೀತ್ ಸಿನಿಮಾಗಳನ್ನ ನೋಡಿದ್ದಾರಂತೆ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಗಳನ್ನ ಪ್ರಭಾಸ್ ನೋಡಿದ್ದಾರಂತೆ.

  ಸುದೀಪ್ ಅಂದ್ರೆನೂ ಇಷ್ಟ

  ಸುದೀಪ್ ಅಂದ್ರೆನೂ ಇಷ್ಟ

  ಕಿಚ್ಚ ಸುದೀಪ್ ಅವರಂದ್ರೆ ಕೂಡ ಇಷ್ಟವಂತೆ. ಅವರ ಜೊತೆ 'ಬಾಹುಬಲಿ' ಸಿನಿಮಾ ಮಾಡಿರುವ ಪ್ರಭಾಸ್, ಸುದೀಪ್ ಅಭಿನಯದ 'ಈಗ' ಚಿತ್ರವನ್ನ ನೋಡಿದ್ದಾರಂತೆ.

  English summary
  Telugu Actor Prabhas talk About Kannada Actor Upendra, Dr Rajkumar, Puneeth rajkumar and sudeep

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X