ಭಾರತಕ್ಕೆ ವಾಪಸ್ ಆಗುತ್ತಿರುವ ರಾಣಾ ಕಿಡ್ನಿ ವೈಫಲ್ಯ ವದಂತಿಗೆ ತೆರೆ ಎಳೆಯುತ್ತಾರಾ?
ಟಾಲಿವುಡ್ ನ ಸ್ಟಾರ್ ನಟ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ಆನಾರೋಗ್ಯದ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ರಾಣಾ ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇತ್ತೀಚಿಗೆ ಕಿಡ್ನಿ ಬದಲಾವಣೆ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಚಿಕಿತ್ಸೆಗಾಗಿ ರಾಣಾ ವಿದೇಶಕ್ಕೆ ತೆರಳಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿತ್ತು.
ರಾಣಾ ಈಗ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ಸುಮಾರು ತಿಂಗಳಿಂದ ರಾಣಾ ಯು ಎಸ್ ಎ ನಲ್ಲಿದ್ದರು. ಆದ್ರೀಗ ತಿಂಗಳುಗಳ ಬಳಿಕ ರಾಣಾ ತಾಯ್ನಾಡಿಗೆ ಬರುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. "ಇನ್ನು 72 ಗಂಟೆಗಳಲ್ಲಿ ನಾನು ಭಾರತದಲ್ಲಿ ಇರುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ರಾಣಾ ವಾಪಸ್ ಆದ ನಂತರ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳಿಗೆ ಸ್ಪಷ್ಟನೆ ನೀಡುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ರಾಣಾ ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದರು. ಆದ್ರೆ ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿರಲಿಲ್ಲ. ಹಾಗಾಗಿ ಭಾರತಕ್ಕೆ ಬಂದ ನಂತರವಾದರು ಮಾತನಾಡುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

ರಾಣಾ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದರು. ತೀರ ತೆಳ್ಳಗಾಗಿರುವ ರಾಣಾ ನೋಡಿ ಅಭಿಮಾನಿಗಳು ಬೆರಗಾಗಿದ್ರು. ಈ ಫೋಟೋ ರಾಣಾ ಆರೋಗ್ಯ ವಿಚಾರವಾಗಿ ಎದ್ದಿದ್ದ ವದಂತಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಇತ್ತು. ರಾಣಾ ನೋಡಿ ಅಭಿಮಾನಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದ್ರೆ ರಾಣಾ ಯಾವ ಪ್ರಶ್ನೆಗೂ ಉತ್ತರಿಸಿಲ್ಲ.
ಭಾರತಕ್ಕೆ ವಾಪಸ್ ಆಗುತ್ತಿರುವ ರಾಣಾಗೆ ಅನೇಕ ನಟರು ಸ್ವಾಗತ ಕೋರುತ್ತಿದ್ದಾರೆ. 2018ರ ನಂತರ ರಾಣಾ ಸಿನಿಮಾಗಳು ತೆರೆಗೆ ಬಂದಿಲ್ಲ. ರಾಣಾ ಸದ್ಯ ತೆಲುಗಿನ ವಿರಾಟಪರ್ವಂ ಸಿನಿಮಾದಲ್ಲಿ ಅಭಿನಯಿಸಬೇಕು. ಬಾಲಿವುಡ್ ನ ಹೌಸ್ ಫುಲ್-4 ಚಿತ್ರದಲ್ಲಿ ರಾಣಾ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಜೊತೆಗೆ ಸಾಕಷ್ಟು ಸಿನಿಮಾಗಳು ರಾಣಾ ಕೈಯಲ್ಲಿವೆ.


Click it and Unblock the Notifications











