Just In
Don't Miss!
- News
ಬೆಂಗಳೂರಿನ ಸಬ್ಅರ್ಬನ್ ರೈಲು ಕಾರಿಡಾರ್ಗಳಿಗೆ ಹೂವುಗಳ ಹೆಸರು
- Sports
ಐಎಸ್ಎಲ್: ಗೋವಾಕ್ಕೆ ಫೈನಲ್ ಪಂಚ್ ನೀಡುವ ಗುರಿಯಲ್ಲಿ ಮುಂಬೈ
- Finance
ಮಾರ್ಚ್ 08ರಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ದರ
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೆಲುಗು ನಟ ವಿಜಯ್ ದೇವರಕೊಂಡ ಮೇಲೆ ಕನ್ನಡಿಗರಿಗೇಕೆ ಇಷ್ಟೊಂದು ಪ್ರೀತಿ?

ಕನ್ನಡ ಚಿತ್ರರಂಗದಲ್ಲಿ ಪರಭಾಷಿಗರಿಗೆ ಅದ್ಧೂರಿ ಸ್ವಾಗತ ನೀಡುವುದು ಹೊಸದೇನಲ್ಲ. ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಬರುವ ಕಲಾವಿದರನ್ನ ಸಂತೋಷದಿಂದ ಬರಮಾಡಿಕೊಂಡು, ಅಷ್ಟೇ ಖುಷಿಯಿಂದ ಕಳುಹಿಸಿಕೊಡುವ ಸಂಸ್ಕ್ರತಿ ಇತ್ತೀಚೆಗೆ ಹೆಚ್ಚಾಗಿದೆ.
ಕನ್ನಡ ಚಿತ್ರಗಳ ಆಡಿಯೋ ರಿಲೀಸ್, ಚಿತ್ರದ ಮುಹೂರ್ತ ಅಂತಹ ಕಾರ್ಯಕ್ರಮಗಳಲ್ಲಿ ಬೇರೆ ಭಾಷೆಯ ನಟರು ಅತಿಥಿಯಾಗಿ ಬರುವುದು ಸಾಮಾನ್ಯವಾಗಿದೆ. ಅದರಲ್ಲಿ, ಕಳೆದ ನಾಲ್ಕೈದು ತಿಂಗಳಿನಿಂದ ಕನ್ನಡ ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ ಎಂಬ ತೆಲುಗಿನ ಯುವ ನಟ ಅಟ್ರ್ಯಾಕ್ಷನ್ ಆಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರನ್ನ ಭೇಟಿ ಮಾಡಿದ 'ಅರ್ಜುನ್ ರೆಡ್ಡಿ' ನಾಯಕ
ಗಾಂಧಿನಗರದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ವಿಜಯ್ ದೇವರಕೊಂಡ ಬರ್ತಾರ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುವಷ್ಟು ಪ್ರಭಾವ ಬೀರಿದೆ. ಅಷ್ಟಕ್ಕೂ, ವಿಜಯ್ ಮೇಲೆ ಸ್ಯಾಂಡಲ್ ವುಡ್ ಮಂದಿಗ್ಯಾಕೆ ಇಷ್ಟೊಂದು ಪ್ರೀತಿ? 'ಅರ್ಜುನ್ ರೆಡ್ಡಿ' ನಾಯಕನ ಈ ಯಶಸ್ಸಿನ ಹಿಂದಿರುವ ಸತ್ಯವೇನು? ಮುಂದೆ ಓದಿ.....

'ಚಮಕ್' ಆಡಿಯೋ ರಿಲೀಸ್ ಮಾಡಿದ್ದ ವಿಜಯ್
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮೊದಲ ಭಾರಿಗೆ ತೆಲುಗು ನಟ ವಿಜಯ್ ದೇವರಕೊಂಡ ಅತಿಥಿಯಾಗಿ ಆಗಮಿಸಿದರು. 'ಚಮಕ್' ಚಿತ್ರದ ಆಡಿಯೋ ರಿಲೀಸ್ ಮಾಡಿ ಸ್ಯಾಂಡಲ್ ವುಡ್ ಮಂದಿಗೆ ಪರಿಚಯವಾದರು.

'ರಾಜರಥ' ಸಾಂಗ್ ಬಿಡುಗಡೆ ಮಾಡಿದ್ರು
'ರಂಗಿತರಂಗ' ಖ್ಯಾತಿಯ ಬಂಡಾರಿ ಬ್ರದರ್ಸ್ ತಯಾರಿಸುತ್ತಿರುವ 'ರಾಜರಥ' ಚಿತ್ರದ ಹೊಸ ಹಾಡೊಂದನ್ನ ವಿಜಯ್ ದೇವರಕೊಂಡ ಬಿಡುಗಡೆ ಮಾಡಿದ್ದರು. 'ರಾಜರಥ' ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದ್ದು, ಕನ್ನಡದ ಹಾಡನ್ನ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ರೆ, ತೆಲುಗು ಹಾಡನ್ನ 'ಅರ್ಜುನ್ ರೆಡ್ಡಿ' ನಾಯಕ ರಿಲೀಸ್ ಮಾಡಿದ್ದರು.

ಫಿಲ್ಮ್ ಫೆಸ್ಟಿವಲ್ ಗೆ ರಾಯಭಾರಿ
ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರಿಯ ಚಲನಚಿತ್ರೋತ್ಸವಕ್ಕೆ ತೆಲುಗು ನಟ ವಿಜಯ್ ದೇರಕೊಂಡ ರಾಯಭಾರಿ ಆಗಿದ್ದಾರೆ. ಶನಿವಾರವಷ್ಟೇ ನಡೆದ ಚಲನಚಿತ್ರೋತ್ಸವದ ಕಾರ್ಯಕ್ರಮದಲ್ಲಿ ತೆಲುಗು ನಟ ಭಾಗಿಯಾಗಿದ್ದರು.

ಬಿಗ್ ಬಾಸ್ ಕನ್ನಡ ವೇದಿಕೆಯಲ್ಲಿ ಭಾಗಿ
ಇದೇ ಮೊದಲ ಭಾರಿಗೆ ಬಿಗ್ ಬಾಸ್ ಕನ್ನಡ 5 ವೇದಿಕೆಯಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡರು. ಇನೋವೇಟಿವ್ ಫಿಲ್ಮ್ ಸಿಟಿಯ ಅಂತಾರಾಷ್ಟ್ರಿಯ ಚಲನಚಿತ್ರೋತ್ಸವದ ಲಾಂಚನ ಬಿಡುಗಡೆಯ ಕಾರ್ಯಕ್ರಮದ ಹಿನ್ನೆಲೆ ವಿಜಯ್ ದೇವರಕೊಂಡ, ಸುದೀಪ್ ನೇತೃತ್ವದ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡರು.

ರಶ್ಮಿಕಾ ಜೊತೆ ಸಿನಿಮಾ
'ಕಿರಿಕ್ ಪಾರ್ಟಿ' ನಾಯಕಿ ರಶ್ಮಿಕಾ ಮಂದಣ್ಣ ತೆಲುಗಿನ ಚಲೋ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದಾದ ನಂತರ ವಿಜಯ್ ದೇವರಕೊಂಡ ಅಭಿನಯಿಸಿಲಿರುವ ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿದ್ದಾರೆ. ಈ ಮೂಲಕ ಕನ್ನಡದ ಹುಡುಗಿ ಜೊತೆಯಲ್ಲಿ ಅರ್ಜುನ್ ರೆಡ್ಡಿ ಹೆಜ್ಜೆ ಹಾಕಲಿದ್ದಾರೆ.

ರಾಕ್ ಲೈನ್ ಜೊತೆ ಉತ್ತಮ ಬಾಂಧವ್ಯ?
ವಿಜಯ್ ದೇವರಕೊಂಡ ಅಭಿನಯದ ಪೆಳ್ಳಿಚೂಪುಲು ಚಿತ್ರದ ನಂತರ ರಾಕ್ ಲೈನ್ ವೆಂಕಟೇಶ್ ಅವರು ಸ್ವತಃ ವಿಜಯ್ ಅವರನ್ನ ಭೇಟಿ ಮಾಡಿದ್ದರಂತೆ. ಅಲ್ಲಿಂದ ರಾಕ್ ಲೈನ್ ಜೊತೆಯಲ್ಲಿ ವಿಜಯ್ ಅವರು ಉತ್ತಮ ಬಾಂಧವ್ಯವನ್ನ ಹೊಂದಿದ್ದಾರೆ. ಬಹುಶಃ ಈ ಆತ್ಮೀಯತೆ ಕನ್ನಡದಲ್ಲೂ ಸಿನಿಮಾ ಮಾಡಲು ಪ್ರೇರಿಪಿತವಾದರೂ ಅಚ್ಚರಿಯಿಲ್ಲ.

ಅರ್ಜುನ್ ರೆಡ್ಡಿ ರೀಮೇಕ್?
ಇನ್ನು ತೆಲುಗಿನಲ್ಲಿ ವಿಜಯ್ ದೇವರಕೊಂಡ ಅಭಿನಯಿಸಿ ಸೂಪರ್ ಹಿಟ್ ಆದ ಅರ್ಜುನ್ ರೆಡ್ಡಿ ಚಿತ್ರವನ್ನ ಕನ್ನಡದಲ್ಲಿ ರೀಮೇಕ್ ಮಾಡಲು ನಿರ್ಮಾಪಕ ರಾಅಕ್ ಲೈನ್ ವೆಂಕಟೇಶ್ ಸಿದ್ದವಾಗಿದ್ದಾರೆ. ಆದ್ರೆ, ಈ ಚಿತ್ರದ ನಾಯಕ ಯಾರಾಗ್ತಾರೆ ಎಂಬುದು ಇನ್ನು ಅಂತಿಮವಾಗಿಲ್ಲ. ಈ ಚಿತ್ರದ ಟ್ರೈಲರ್, ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲೂ ವಿಜಯ್ ಅತಿಥಿಯಾದ್ರು ಅಚ್ಚರಿಯಿಲ್ಲ.