For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬಂದ ವಿಜಯ್ ದೇವರಕೊಂಡ: ರಶ್ಮಿಕಾ ಮಂದಣ್ಣ ನಾಯಕಿ.!

  |
  ಕನ್ನಡಕ್ಕೆ ಬಂದ ವಿಜಯ್ ದೇವರಕೊಂಡ: ರಶ್ಮಿಕಾ ಮಂದಣ್ಣ ನಾಯಕಿ.! FILMIBEAT KANNADA

  ವಿಜಯ್ ದೇವರಕೊಂಡ ಸೌತ್ ಸಿನಿ ಇಂಡಸ್ಟ್ರಿಯ ಬಹು ಬೇಡಿಕೆಯ ನಟ. ಚಿತ್ರರಸಿಕರ ಪಾಲಿನ ಹಾರ್ಟ್ ಫೇವರಿಟ್ ಹೀರೋ. ಕೇವಲ ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ವಿಜಯ್ ದೇವರಕೊಂಡ ಅವರನ್ನು ಹಾಡಿಹೊಗಳುತ್ತಿದೆ. ಅದ್ರಲ್ಲೂ ಮಹಿಳಾ ಅಭಿಮಾನಿಗಳ ಪಾಲಿಗಂತೂ ವಿಜಯ್ ಡ್ರೀಮ್ ಬಾಯ್ ಆಗಿದ್ದಾರೆ.

  ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಲಿವುಡ್ ಇಂಡಸ್ಟ್ರಿಯ ಟಾಪ್ ನಟರ ಸಾಲಿನಲ್ಲಿ ನಿಂತಿದ್ದಾರೆ. 'ಅರ್ಜುನ್ ರೆಡ್ಡಿ' ಸಿನಿಮಾ ವಿಜಯ್ ಅವರ ಸಿನಿ ಜೀವನದ ದಿಕ್ಕನ್ನೆ ಬದಲಾಯಿಸಿತು. ಆ ನಂತರ ಬಂದ 'ಗೀತಾ ಗೋವಿಂದಂ' ವಿಜಯ್ ಖ್ಯಾತಿಯನ್ನ ಮತ್ತಷ್ಟು ಹೆಚ್ಚಿಸಿತು.

  'ತಂದೆ'ಯಾದ ತೆಲುಗು ನಟ ವಿಜಯ್ ದೇವರಕೊಂಡ.!

  ಸದ್ಯ ಬಹುಬೇಡಿಕೆಯ ನಟನಾಗಿ ಬೆಳೆದು ನಿಂತಿರುವ ವಿಜಯ್ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ ಅರ್ಜುನ್ ರೆಡ್ಡಿಯನ್ನ ಕನ್ನಡಕ್ಕೆ ಸ್ವಾಗತ ಮಾಡ್ತಿರೋದು ಚಂದನವನದ ಚೆಲುವೆ ಕನ್ನಡತಿ ರಶ್ಮಿಕಾ ಮಂದಣ್ಣ. ಹೌದು, ಸೂಪರ್ ಹಿಟ್ ಜೋಡಿ ಎನಿಸಿಕೊಂಡಿರುವ ವಿಜಯ್ ಮತ್ತು ರಶ್ಮಿಕಾ ಈಗ ಸ್ಯಾಂಡಲ್ ವುಡ್ ನಲ್ಲೂ ಮಿಂಚಲಿದ್ದಾರೆ. ಯಾವ ಚಿತ್ರದಲ್ಲಿ? ಮುಂದೆ ಓದಿ.....

  ಸ್ಯಾಂಡಲ್ ವುಡ್ ಗೆ ವಿಜಯ್ ದೇವರಕೊಂಡ

  ಸ್ಯಾಂಡಲ್ ವುಡ್ ಗೆ ವಿಜಯ್ ದೇವರಕೊಂಡ

  ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ ಚಿತ್ರಗಳ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿದ್ದ ದೇವರಕೊಂಡ ಈಗ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ವಿಜಯ್ ಅಭಿನಯಯದ ಬಹುನಿರೀಕ್ಷೆಯ 'ಡಿಯರ್ ಕಾಮ್ರೇಡ್' ಸಿನಿಮಾ ಈಗ ಕನ್ನಡದಲ್ಲೂ ತೆರೆಕಾಣುತ್ತಿದ್ದು, ಈ ಮೂಲಕ ಕನ್ನಡ ಇಂಡಸ್ಟ್ರಿಯನ್ನ ಪ್ರವೇಶ ಮಾಡ್ತಿದ್ದಾರೆ ಸೌತ್ ಸ್ಟಾರ್ ವಿಜಯ್ ದೇವರಕೊಂಡ.

  ಒಂದ್ಕಾಲದಲ್ಲಿ 500 ರೂಪಾಯಿ ಇರಲಿಲ್ಲ: ಈಗ ಫೋರ್ಬ್ಸ್ ಪಟ್ಟಿ ಸೇರಿದ ವಿಜಯ್ ದೇವರಕೊಂಡ.!

  ಮತ್ತೊಮ್ಮೆ ಬೋಲ್ಡ್ ಪಾತ್ರದಲ್ಲಿ ರಶ್ಮಿಕಾ

  ಮತ್ತೊಮ್ಮೆ ಬೋಲ್ಡ್ ಪಾತ್ರದಲ್ಲಿ ರಶ್ಮಿಕಾ

  ಗೀತಾ ಗೋವಿಂದ ಚಿತ್ರದ ಮೂಲಕ ಹಿಟ್ ಜೋಡಿ ಎನಿಸಿಕೊಂಡಿದ್ದ ರಶ್ಮಿಕಾ ಮತ್ತು ವಿಜಯ್ ಈ ಚಿತ್ರದಲ್ಲೂ ಒಟ್ಟಿಗೆ ಅಭಿನಯಿಸಿದ್ದಾರೆ. ಸದ್ಯ ಡಿಯರ್ ಕಾಮ್ರೇಡ್ ಫಸ್ಟ್ ಲುಕ್ ರಿವೀಲ್ ಆಗಿದ್ದು, ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರನ್ನ ಗಟ್ಟಿಯಾಗಿ ತಬ್ಬಿಕೊಂಡಿರುವ ಫೋಟೋ ಅಭಿಮಾನಿಗಳ ನಿದ್ದೆಗೆಡಿಸಿದೆ. ಫಸ್ಟ್ ಲುಕ್ಕೇ ಈ ಪರಿ ಇದೆ ಅಂದರೆ ಚಿತ್ರ ಇನ್ನೇಗೆ ಇರಲಿದೆ ಎನ್ನುವ ಲೆಕ್ಕಾಚಾರ ಪ್ರೇಕ್ಷಕರಲ್ಲಿ ಶುರುವಾಗಿದೆ. ಯಾಕಂದ್ರೆ ಈ ಹಿಂದೆ ಗೀತಾ ಗೋವಿಂದಂ ಚಿತ್ರದಲ್ಲೂ ಇಬ್ಬರು ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯದ ಮೂಲಕ ಪ್ರೇಕ್ಷಕರ ಹುಬ್ಬೇರಿಸುವಂತೆ ಮಾಡಿದ್ದರು ರಶ್ಮಿಕಾ. ಹಾಗಾಗಿ ಡಿಯರ್ ಕಾಮ್ರೇಡ್ ಚಿತ್ರದ ಮೊದಲ ಲುಕ್ ನೋಡಿದ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

  ಬೆಂಗಳೂರಿಗೆ ಬಂದಿದ್ದ ವಿಜಯ ದೇವರಕೊಂಡ ರಕ್ಷಿತ್, ರಶ್ಮಿಕಾ ಬಗ್ಗೆ ಹೀಗಂದ್ರು!

  ನಾಲ್ಕು ಭಾಷೆಯಲ್ಲಿ ಡಿಯರ್ ಕಾಮ್ರೇಡ್

  ನಾಲ್ಕು ಭಾಷೆಯಲ್ಲಿ ಡಿಯರ್ ಕಾಮ್ರೇಡ್

  ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಟಾಲಿವುಡ್ ನ ಚಿತ್ರಜಗತ್ತಿನ ಹಿಟ್ ಪೇರ್. ಗೀತಾ ಗೋವಿಂದಂ ಚಿತ್ರದ ನಂತರ ಇಬ್ಬರ ಖ್ಯಾತಿ ದೇಶಾದ್ಯಂತ ಪಸರಿಸಿದೆ. ಡಿಯರ್ ಕಾಮ್ರೇಡ್ ಕೇವಲ ತೆಲುಗು ಮತ್ತು ಕನ್ನಡದಲ್ಲಿ ಮಾತ್ರವಲ್ಲದೆ, ತಮಿಳು, ಮಲಯಾಳಂ ಭಾಷೆಯಲ್ಲೂ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ನಾಲ್ಕು ಭಾಷೆಯಲ್ಲೂ ಚಿತ್ರ ರಿಲೀಸ್ ಆಗುವ ಬಗ್ಗೆ ಪೋಸ್ಟರ್ ನಲ್ಲಿಯೇ ಬಿಟ್ಟುಕೊಟ್ಟಿದೆ ಚಿತ್ರತಂಡ. ಈ ಮೂಲಕ ವಿಜಯ್ ತಮ್ಮ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತಾರ ಮಾಡಿಕೊಳ್ಳುತ್ತಿದ್ದಾರೆ.

  'ರಶ್ಮಿಕಾರನ್ನ ಮದುವೆ ಆಗಿ' ಎಂದು ವಿಜಯ್ ದೇವರಕೊಂಡಗೆ ಹೇಳಿದ ಅಭಿಮಾನಿ.!

  ಮಾರ್ಚ್ 17ಕ್ಕೆ ಬರ್ತಿದೆ ಟ್ರೈಲರ್

  ಮಾರ್ಚ್ 17ಕ್ಕೆ ಬರ್ತಿದೆ ಟ್ರೈಲರ್

  ಸದ್ಯ ಫಸ್ಟ್ ಲುಕ್ ಮೂಲಕವೇ ಅಭಿಮಾನಿಗಳನ್ನು ಕ್ಲೀನ್ ಬೋಲ್ಡ್ ಮಾಡಿರುವ ಡಿಯರ್ ಕಾಮ್ರೇಡ್ ಸಿನಿಮಾದ ಟ್ರೈಲರ್ ಇದೇ ತಿಂಗಳು ಮಾರ್ಚ್ 17ಕ್ಕೆ ರಿಲೀಸ್ ಆಗಲಿದೆ. ಮೊದಲ ಝಲಕ್ ಹೀಗಿರುವಾಗ ಇನ್ನು ಟ್ರೈಲರ್ ನೋಡಿ ಪ್ರೇಕ್ಷಕರು ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲ

  English summary
  Tollywood famous actor vijay devarakonda enters to kannada film industry. he is coming with kannada actress rashmika mandanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X