»   » ತೆಲುಗು ನಟಿ ಆರತಿ ಅಗರ್‌ವಾಲ್ ಇನ್ನಿಲ್ಲ

ತೆಲುಗು ನಟಿ ಆರತಿ ಅಗರ್‌ವಾಲ್ ಇನ್ನಿಲ್ಲ

Posted By:
Subscribe to Filmibeat Kannada

ಖ್ಯಾತ ತೆಲುಗು ನಟಿ ಆರತಿ ಅಗರ್‌ವಾಲ್ ವಿಧಿವಶರಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಮೆರಿಕದಲ್ಲಿ ಜೂನ್ 6ರ ಶನಿವಾರ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ ಆರತಿ ಅಗರ್‌ವಾಲ್ (31) ಅವರು ಶನಿವಾರ ನ್ಯೂಜೆರ್ಸಿಯಲ್ಲಿ ಮೃತಪಟ್ಟಿದ್ದಾರೆ. 2001ರಲ್ಲಿ 'ಪಾಗಲ್ ಪನ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಆರತಿ ಅಗರ್‌ವಾಲ್ ಮೆಗಾಸ್ಟಾರ್ ಚಿರಂಜೀವಿ, ವಿಕ್ಟರಿ ವೆಂಕಟೇಶ್ ಸೇರಿದಂತೆ ಹಲವು ನಾಯಕರ ಜೊತೆ ಅಭಿನಯಿಸಿದ್ದರು.

Aarti Agarwal

ಆರತಿ ಅಗರ್‌ವಾಲ್ ಅವರ ಕುಟುಂಬದವರು ಅಲ್ಲಿಯೇ ಇದ್ದು ಅಮೆರಿಕಾದಲ್ಲಿಯೇ ಅಂತ್ಯ ಸಂಸ್ಕಾರ ನಡೆಸುವ ಸಾಧ್ಯತೆ ಇದೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ನ್ಯೂಜೆರ್ಸಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. [ಆರತಿ ಆಗರ್ ವಾಲ್ ಚಿತ್ರಪಟಗಳು]

ನೂವು ನಾಕು ನಚ್ಚಾವ್ ಚಿತ್ರದ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 2001ರಿಂದ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಆರತಿ ಅವರು 2005ರಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು.

English summary
Telugu actress Aarti Agarwal (31) is No More. The famous leading actress Aarti dies due to heart attack.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada