'ಕೆಜಿಎಫ್' ರೈಟರ್ ಸಿನಿಮಾಗಾಗಿ ಓಡೋಡಿ ಬಂದ ಟಾಲಿವುಡ್ ಬೋಲ್ಡ್ ನಟಿ: 'ದಿಲ್‌ಮಾರ್' ಎಂದ ಡಿಂಪಲ್
ಸ್ಯಾಂಡಲ್‌ವುಡ್‌ನ ದಿಕ್ಕನ್ನು ಬದಲಿಸಿದ ಸಿನಿಮಾ 'ಕೆಜಿಎಫ್'. ಈ ಸಿನಿಮಾದ ಡೈಲಾಗ್ ರೈಟರ್ ಈಗ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆಯೋದಕ್ಕೆ ಸಜ್ಜಾಗಿದ್ದಾರೆ.
'ಕೆಜಿಎಫ್' ಸಿನಿಮಾದಲ್ಲಿ ಡೈಲಾಗ್‌ಗಳಿಂದಲೇ ಜಾದು ಮಾಡಿದ್ದ ರೈಟರ್ ಚಂದ್ರಮೌಳಿ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರೇಕ್ಷಕರ ಮನಗೆದ್ದ ಚಂದ್ರಮೌಳಿ ಚೊಚ್ಚಲ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅದುವೇ 'ದಿಲ್ ಮಾರ್'. ಈ ಸಿನಿಮಾಗಾಗಿ ಟಾಲಿವುಡ್‌ನ ಗ್ಲಾಮರ್ ನಟಿ ಡಿಂಪಲ್ ಹಯಾತಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಡಿಂಪಲ್ ಹಯಾತಿ
ಐದು ವರ್ಷಗಳ ಹಿಂದಷ್ಟೇ ಡಿಂಪಲ್ ಹಯಾತಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ತೆಲುಗಿನ 'ಗಾಲ್ಫ್' ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದರು. ಆದರೆ, ಉತ್ತಮ ಅವಕಾಶಗಳು ಸಿಕ್ಕಿರಲಿಲ್ಲ. ಎರಡು ವರ್ಷಗಳ ಬಳಿಕ ಪ್ರಭುದೇವ ಹಾಗೂ ತಮನ್ನಾ ಅಭಿನಯದ 'ದೇವಿ 2' ಸಿನಿಮಾದಲ್ಲಿ ಮತ್ತೆ ಗಮನ ಸೆಳೆದರು.

'ದೇವಿ 2' ಬಳಿಕ 'ಯುರೇಖಾ' ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಬಳಿಕ ಅಕ್ಷಯ್ ಕುಮಾರ್, ಧನುಷ್ ಹಾಗೂ ಸಾರಾ ಅಲಿಖಾನ್ ಅಭಿನಯದ 'ಅತ್ರಂಗಿ ರೇ'ಯಲ್ಲೂ ನಟಿಸಿದ್ದರು. ಇದು ಬಾಲಿವುಡ್‌ನ ಮೊದಲ ಸಿನಿಮಾ. ಇತ್ತೀಚೆಗೆ ರವಿತೇಜಾ ಜೊತೆ ನಟಿಸಿದ 'ಖಿಲಾಡಿ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಗಮನ ಸೆಳೆದರು.
ಸ್ಯಾಂಡಲ್‌ವುಡ್‌ನ ಮೊದಲ ಸಿನಿಮಾ
'ಕೆಜಿಎಫ್' ರೈಟರ್ ಚಂದ್ರಮೌಳಿ ಆಕ್ಷನ್ ಕಟ್ ಹೇಳ್ತಿರೋ 'ದಿಲ್ ಮಾರ್' ಸಿನಿಮಾಗೆ ಟೀಸರ್ ಈಗಾಗಲೇ ಕುತೂಹಲವನ್ನು ಕೆರಳಿಸಿದೆ. ಇದೇ ಸಿನಿಮಾದಲ್ಲಿ ಟಾಲಿವುಡ್‌ನ ಬೋಲ್ಡ್ ನಟಿ ಡಿಂಪಲ್ ಹಯಾತಿಯನ್ನೂ ಕರೆದುಕೊಂಡಿ ಬಂದಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ದುಪ್ಪಟ್ಟಾಗಿದೆ.
ಹೀರೋಯಿನ್ ಆಗಿ ಡಿಂಪಲ್ ಹಯಾತಿಗೆ ಇದು ಮೊದಲ ಸಿನಿಮಾ ಕೂಡ ಹೌದು. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಲೀಡ್ ರೋಲ್ ಸಿಕ್ಕಿರಲಿಲ್ಲ. ಕನ್ನಡ ಸಿನಿಮಾ ಮೂಲಕ ಒಂದೊಳ್ಳೆ ಪಾತ್ರ ಇವರಿಗೆ ಧಕ್ಕಿದೆ. ಈ ಮೂಲಕ ಪ್ರೇಕ್ಷಕರನ್ನು ರಂಜಿಸಲು ತುದಿಗಾಲಲ್ಲಿ ನಿಂತಿದ್ದಾರೆ.

'ದಿಲ್‌ಮಾರ್' ಸಿನಿಮಾ ನಾಯಕನಾಗಿಗ ಹೊಸ ಪ್ರತಿಭೆ ರಾಮ್ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಖಳನಾಯಕನಾಗಿ ಡೈಲಾಗ್ ಕಿಂಗ್ ಸಾಯಿ ಕುಮಾರ್ ಟಕ್ಕರ್ ಕೊಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಸದ್ಯ 'ದಿಲ್‌ಮಾರ್' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲಿಯೇ ಹಾಡುಗಳು ರಿಲೀಸ್ ಆಗುತ್ತಿವೆ. ಅರ್ಜುನ್ ರೆಡ್ಡಿ ಖ್ಯಾತಿಯ ರಾದನ್ ಸಿನಿಮಾಕ್ಕೆ ಸಂಗೀತ ನೀಡಿದ್ದು, ಕೆ ಮಹೇಶ್ ಮತ್ತು ನಾಗರಾಜ್ ಭದ್ರಾವತಿ ನಿರ್ಮಾಣ ಮಾಡಿದ್ದಾರೆ. ಅಂದ್ಹಾಗೆ, 'ದಿಲ್ ಮಾರ್' ಮೇ ತಿಂಗಳ ಕೊನೆಯ ವಾರ ತೆರೆಗೆ ಬರಲಿದೆ.


Click it and Unblock the Notifications











