For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬಂದ ತೆಲುಗು ನಟಿ: ಧನಂಜಯ್ ಹೊಸ ಚಿತ್ರಕ್ಕೆ ನಾಯಕಿ

  |

  ಕನ್ನಡ ಚಿತ್ರಗಳಿಗೆ ಪರಭಾಷೆ ನಟಿಯರು ಬರುವುದು ಸಹಜ ಎನ್ನುವಂತಾಗಿದೆ. ಸ್ಟಾರ್ ನಟರ ಚಿತ್ರಗಳು ಇದರಿಂದ ಹೊರತಾಗಿಲ್ಲ. ತೆಲುಗು, ತಮಿಳಿನಲ್ಲಿ ಗುರುತಿಸಿಕೊಂಡ ಕಲಾವಿದೆಯರನ್ನು ಸ್ಯಾಂಡಲ್‌ವುಡ್‌ಗೆ ಕರೆತರುವುದು ಸಾಮಾನ್ಯವಾಗಿದೆ. ಇದೀಗ, ಈ ಸಾಲಿಗೆ ನಟ ಧನಂಜಯ್ ಸೇರ್ಪಡೆಯಾಗಿದ್ದಾರೆ.

  ಕನ್ನಡಕ್ಕೆ ಬಂದ ತೆಲುಗು ಮಾದಕ ನಟಿ ಪಾಯಲ್ ರಜಪೂತ್

  'ಡಾಲಿ' ಧನಂಜಯ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ತೆಲುಗು ನಟಿ ಪಾಯಲ್ ರಜಪೂತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಖುದ್ದು ಧನಂಜಯ್ ಅವರೇ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ''ಡಾಲಿ ಪಿಕ್ಚರ್ಸ್ ಅಡಿ ನಿರ್ಮಾಣವಾಗುತ್ತಿರುವ ಹೆಡ್‌ಬುಷ್ ಚಿತ್ರಕ್ಕೆ ಸ್ವಾಗತ ಪಾಯಲ್ ರಜಪೂತ್'' ಎಂದು ಧನಂಜಯ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾಗೆ ಸ್ವತಃ ಧನಂಜಯ್ ಬಂಡವಾಳ ಹಾಕುತ್ತಿದ್ದಾರೆ.

  'ಡಾಲಿ' ಧನಂಜಯ್ ನಟಿಸುತ್ತಿರುವ 9 ಹೊಸ ಸಿನಿಮಾಗಳು'ಡಾಲಿ' ಧನಂಜಯ್ ನಟಿಸುತ್ತಿರುವ 9 ಹೊಸ ಸಿನಿಮಾಗಳು

  ಇತ್ತೀಚಿನ ವರ್ಷಗಳಲ್ಲಿ ಪಾಯಲ್ ರಜಪೂತ್ ಹೆಸರು ಟಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡಿದೆ. ಬೋಲ್ಡ್ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹಾಗ್ನೋಡಿದ್ರೆ ಕನ್ನಡ ಪ್ರೇಕ್ಷಕರಿಗೂ ಈ ಹೆಸರು ಚಿರಪರಿಚತ. ಮುಂದೆ ಓದಿ...

  'ಆರ್‌ಎಕ್ಸ್ 100' ಸಕ್ಸಸ್

  'ಆರ್‌ಎಕ್ಸ್ 100' ಸಕ್ಸಸ್

  ಮೂಲತಃ ಪಂಜಾಬಿ ಕುಟುಂಬದ ಪಾಯಲ್ ರಜಪೂತ್ ಆರಂಭದಲ್ಲಿ ಪಂಜಾಬಿ ಸಿನಿಮಾಗಳು ಹಾಗೂ ಹಿಂದಿ ಟವಿ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡಿದ್ದರು. 2018ರಲ್ಲಿ ತೆಲುಗಿನಲ್ಲಿ ಬಂದ 'ಆರ್‌ಎಕ್ಸ್‌100' ಚಿತ್ರದಲ್ಲಿ ದೊಡ್ಡ ಬ್ರೇಕ್ ಸಿಕ್ತು. ಕಾರ್ತಿಕೇಯ ಜೊತೆ ಸಖತ್ ಹಾಟ್ ಆಗಿ ನಟಿಸಿದ್ದ ಪಾಯಲ್ ಟಾಲಿವುಡ್‌ನಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆದುಕೊಂಡರು. ಇದಾದ ಮೇಲೆ ಎನ್‌ಟಿಆರ್ ಕಥಾನಾಯಕಡು, ಸಿತಾ, ಆರ್‌ಡಿಎಕ್ಸ್ ಲವ್, ವೆಂಕಿಮಾಮ, ಡಿಸ್ಕೋ ರಾಜ ಅಂತಹ ಸಿನಿಮಾಗಳಲ್ಲಿ ಪಾಯಲ್ ನಟಿಸಿದ್ದಾರೆ. ಪ್ರಸ್ತುತ, ತಮಿಳಿನಲ್ಲಿ 'ಏಂಜಲ್' ಹಾಗೂ ತೆಲುಗಿನಲ್ಲಿ 'ಕಿರಾತಕ' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

  'ಹೆಡ್‌ಬುಷ್' ಚಿತ್ರದಲ್ಲಿ ಪಾಯಲ್ ನಟನೆ

  'ಹೆಡ್‌ಬುಷ್' ಚಿತ್ರದಲ್ಲಿ ಪಾಯಲ್ ನಟನೆ

  ಬೆಂಗಳೂರು ಅಂಡರ್‌ವರ್ಲ್ಡ್ ಡಾನ್ ಆಗಿದ್ದ ಎಂಪಿ ಜಯರಾಜ್ ಜೀವನ ಆಧರಿಸಿ ಮೂಡಿ ಬರುತ್ತಿರುವ ಚಿತ್ರ 'ಹೆಡ್‌ಬುಷ್'. ಜಯರಾಜ್ ಪಾತ್ರದಲ್ಲಿ ಧನಂಜಯ್ ಅಭಿನಯಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಈ ಸಿನಿಮಾಗೆ ಕಥೆ ಬರೆದಿದ್ದು, ಚೊಚ್ಚಲ ನಿರ್ದೇಶಕ ಶೂನ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಿಸುತ್ತಿದ್ದು, ಎರಡು ಭಾಗದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಇನ್ನು ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.

  ನಿರ್ಮಾಪಕರಾಗುತ್ತಿದ್ದಾರೆ ಡಾಲಿ ಧನಂಜಯ್: ಸಿನಿಮಾ ಯಾವುದು? ಯಾರು ಹೀರೋ?ನಿರ್ಮಾಪಕರಾಗುತ್ತಿದ್ದಾರೆ ಡಾಲಿ ಧನಂಜಯ್: ಸಿನಿಮಾ ಯಾವುದು? ಯಾರು ಹೀರೋ?

  'ದ್ವಿತ್ವ' ಚಿತ್ರಕ್ಕೆ ತ್ರಿಷಾ ನಾಯಕಿ

  'ದ್ವಿತ್ವ' ಚಿತ್ರಕ್ಕೆ ತ್ರಿಷಾ ನಾಯಕಿ

  ಹೆಡ್‌ಬುಷ್ ಚಿತ್ರಕ್ಕೆ ಪಾಯಲ್ ರಜಪೂತ್ ನಾಯಕಿ ಎನ್ನುವ ವಿಚಾರದಿಂದ ಡಾಲಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಆದರೆ, ಕನ್ನಡ ನಟಿಯರಿಗೆ ಅವಕಾಶ ಕೊಡಬಹುದಿತ್ತು ಅಲ್ವೇ ಎಂದು ಕೆಲವರು ಬೇಸರ ವ್ಯಕ್ತಪಡಿಸಿರುವುದು ಕಂಡು ಬಂದಿದೆ. ಈ ಮುಂಚೆ ಪುನೀತ್ ರಾಜ್ ಕುಮಾರ್-ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ದ್ವಿತ್ವ ಚಿತ್ರಕ್ಕೆ ತಮಿಳು ನಟಿ ತ್ರಿಷಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗ ತೆಲುಗು ನಟಿ ಪಾಯಲ್ ಎಂಟ್ರಿ. ಸಹಜವಾಗಿ ಇಂತಹದೊಂದು ಚರ್ಚೆ ಸಾಮಾನ್ಯವಾಗಿದೆ.

  ಧನಂಜಯ್ ಮುಂದಿನ ಸಿನಿಮಾಗಳು

  ಧನಂಜಯ್ ಮುಂದಿನ ಸಿನಿಮಾಗಳು

  ಹೆಡ್‌ಬುಷ್ ಸಿನಿಮಾ ಹೊರತುಪಡಿಸಿ ಹಲವು ಪ್ರಾಜೆಕ್ಟ್‌ಗಳಲ್ಲಿ ಧನಂಜಯ್ ನಟಿಸುತ್ತಿದ್ದಾರೆ. 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಸಿನಿಮಾದಲ್ಲಿ ಧನಂಜಯ್ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಸುಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ ತಿಂಗಳಲ್ಲಿ 'ಪುಷ್ಪ ಭಾಗ-1' ರಿಲೀಸ್ ಆಗುತ್ತಿದೆ. ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿರುವ 'ಸಲಗ' ಚಿತ್ರದಲ್ಲಿ ಧನಂಜಯ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 20 ರಂದು ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆ. ರೋಹಿತ್ ಪದಕಿಯ ರತ್ನನ್ ಪ್ರಪಂಚ, ಶಿವಣ್ಣನ 'ಬೈರಾಗಿ,' ಬಡವ ರಾಸ್ಕಲ್, ಜಗ್ಗೇಶ್ ಜೊತೆ ತೋತಾಪುರಿ, ಡಾಲಿ ಸಿನಿಮಾ, ಆರ್ಕೆಸ್ಟ್ರಾ ಮೈಸೂರು ಅಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Tollywood actress Payal Rajput to make her Kannada debut with Dhananjay’s Head Bush movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X