ವಾಟರ್ ಬೇಬಿಯಾದ 'ಮಹರ್ಷಿ' ನಟಿ ಪೂಜಾ ಹೆಗ್ಡೆ
ನಟಿ ಪೂಜಾ ಹೆಗ್ಡೆ ಟಾಲಿವುಡ್ ನಲ್ಲಿ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ರಿಲೀಸ್ ಆಗಿದ್ದ 'ಮಹರ್ಷಿ' ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.
ಪೂಜಾ ಹೆಗ್ಡೆ ಅವರ ಒಂದು ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಾಟರ್ ಬೇಬಿಯಾಗಿರುವ ಪೂಜಾ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ.
ಈಜು ಕೊಳದಲ್ಲಿ ಹಳದಿ ಬಣ್ಣದ ಬಟ್ಟೆ ತೊಟ್ಟು ಪೂಜಾ ಹೆಗ್ಡೆ ಒಂದು ಫೋಟೋ ತೆಗೆದುಕೊಂಡಿದೆ. ನೀರಿಗಿಳಿದು ಪೂಜಾ ಏನೋ ತಂಪಾಗಿದ್ದಾರೆ. ಆದರೆ, ಈ ಹಾಟ್ ಫೋಟೋ ಯುವಕರ ಎದೆಯಲ್ಲಿ ಕಿಚ್ಚು ಹತ್ತಿಸಿದೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೂಜಾ ಹೆಗ್ಡೆ ಈ ಫೋಟೋ ಹಂಚಿಕೊಂಡಿದ್ದು, ವಾಟರ್ ಬೇಬಿ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋವನ್ನು 6 ಲಕ್ಷದ 80 ಸಾವಿರಕ್ಕೂ ಅಧಿಕ ಜನರು ಮೆಚ್ಚಿಕೊಂಡಿದ್ದಾರೆ.
ಪೂಜಾ ಹೆಗ್ಡೆ ಸದ್ಯ ಟಾಲಿವುಡ್ ಜೊತೆಗೆ ಬಾಲಿವುಡ್ ಸಿನಿಮಾ ಕೂಡ ಮಾಡುತ್ತಿದ್ದಾರೆ. 'ಹೌಸ್ ಫುಲ್ 4' ಚಿತ್ರದ ನಾಯಕಿಯರ ಪೈಕಿ ಇವರು ಕೂಡ ಒಬ್ಬರಾಗಿದ್ದಾರೆ.
ಪೂಜಾ ಹೆಗ್ಡೆ ತಾಯಿ ಮಂಗಳೂರಿನವರಾಗಿದ್ದು, ಅವರ ಮಾತೃ ಭಾಷೆ ತುಳುವಾಗಿದೆ.


Click it and Unblock the Notifications











