Don't Miss!
- News
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ಗೆ ಕೊರೊನಾ ಸೋಂಕು
- Sports
ಹೀಗೆ ಆದ್ರೆ ಧೋನಿ ಒಂದು ಪಂದ್ಯದ ನಿಷೇಧ ಎದುರಿಸುವುದು ಗ್ಯಾರಂಟಿ!
- Lifestyle
ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು
- Finance
ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: 10 ಗ್ರಾಂ ಎಷ್ಟು ರೂಪಾಯಿ ಹೆಚ್ಚಾಗಿದೆ?
- Automobiles
ಏಪ್ರಿಲ್ ಅವಧಿಗಾಗಿ ವಿವಿಧ ಆಫರ್ಗಳನ್ನು ಘೋಷಣೆ ಮಾಡಿದ ದಟ್ಸನ್
- Education
States That Cancelled And Postponed Board Exams: ಯಾವೆಲ್ಲಾ ರಾಜ್ಯಗಳಲ್ಲಿ ಬೋರ್ಡ್ ಪರೀಕ್ಷೆ ರದ್ದು ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾಂಪ್ರಮೈಸ್ ಆದ್ರೆ ಮಾತ್ರ ಸಿನಿಮಾ: ನೋವನ್ನ ತೊಡಿಕೊಂಡ ನಟಿ ಶ್ರೇರೆಡ್ಡಿ

ಭಾರತ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಸಂಸ್ಕೃತಿ ಅಟ್ಟಹಾಸ ಮೆರೆಯುತ್ತಿದೆ. ಈ ಕೆಟ್ಟ ಆಚಾರಕ್ಕೆ ಸಿಲುಕಿ ನಲುಗಿರುವ ನಟಿಯರು ಬಹಿರಂಗವಾಗಿ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಈ ಕಾಸ್ಟಿಂಗ್ ಕೌಚ್ ಎನ್ನುವುದು ಬಲವಾಗಿದೆ. ಇದಕ್ಕೆ ಒಪ್ಪದೇ ಇದ್ರೆ ಅವರಿಗೆ ಅವಕಾಶ ಸಿಗಲ್ಲ ಎಂಬ ಬೆಚ್ಚಿಬೀಳಿಸುವ ಸಂಗತಿಯನ್ನ ಹಲವರು ಹೊರಹಾಕಿದ್ದಾರೆ.
ಸಿನಿಮಾದಲ್ಲಿ ನಟಿಸಬೇಕು ಅಂದ್ರೆ ನಿರ್ಮಾಪಕ, ನಿರ್ದೇಶಕರ ಜೊತೆ ಕಾಂಪ್ರಮೈಸ್ ಆಗ್ಬೇಕು ಎಂಬ ಸ್ಪೋಟಕ ಮಾಹಿತಿಯನ್ನ ತೆಲುಗು ನಟಿಯೊಬ್ಬರು ಹೊರಹಾಕುತ್ತಿದ್ದಾರೆ. ಟಿವಿ ಸಂದರ್ಶನದಲ್ಲಿ ತಮ್ಮದೇ ಇಂಡಸ್ಟ್ರಿಯ ಕಾಮಪುರಾಣವನ್ನ ಮೂರುಕಾಸಿಗೆ ಹರಾಜಾಕಿದ್ದಾರೆ.
ಪೂಜಿಸುವ ನಟರ ಕರಾಳ ಮುಖದ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ನಟಿ
ಕಾಸ್ಟಿಂಗ್ ಕೌಚ್ ಗೆ ಒಪ್ಪದ ನಟಿಯರಿಗೆ ಅವಕಾಶ ಸಿಗಲ್ಲ. ಕನ್ನಡ, ತಮಿಳು, ಹಿಂದಿ ನಟಿಯರನ್ನ ಕರೆದುಕೊಂಡು ಬಂದು ಸಿನಿಮಾ ಮಾಡ್ತಾರೆ. ಇದು ಕಾಂಪ್ರಮೈಸ್ ದುನಿಯಾ. ಇಲ್ಲಿ ಅವರ ಜೊತೆ ಮಲಗಿದರೆ ಮಾತ್ರ ಅವಕಾಶ ಎಂದು ಯಾವುದೇ ಅಂಜಿಕೆಯಿಲ್ಲದ ಬಹಿರಂಗಪಡಿಸಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪರಭಾಷೆಯಲ್ಲಿ ನಟಿಸುವ ನಮ್ಮ ಕನ್ನಡ ನಟಿಯರ ಮೇಲೆ ಇದು ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಅಷ್ಟಕ್ಕೂ ಈ ಸತ್ಯ ಬಿಚ್ಚಿಟ್ಟ ನಟಿ ಯಾರು.? ಏನಂದ್ರು.? ಮುಂದೆ ಓದಿ.....

ಇಂಡಸ್ಟ್ರಿಗೆ ಮಾರಕವಾಗಿದೆ
''ಕಾಸ್ಟಿಂಗ್ ಕೌಚ್ ನಿಂದ ತೆಲುಗು ಇಂಡಸ್ಟ್ರಿಯ ಗೌರವ ಹಾಳಾಗಿ ಹೋಗ್ತಿದೆ. ವರ್ಷಕ್ಕೆ ನೂರು ಸಿನಿಮಾ ಬಂದ್ರೆ, ಅದರಲ್ಲಿ ಎರಡು ಸಿನಿಮಾ ಹಿಟ್ ಆಗಲ್ಲ. ಅದಕ್ಕೆ ಕಾರಣ, ಅದರಲ್ಲಿ ನೆಟಿವಿಟಿ ಇರಲ್ಲ, ತೆಲುಗು ನಾಯಕಿಯರು ಇರಲ್ಲ. ಕನ್ನಡ-ತಮಿಳು-ಮುಂಬೈ ಹುಡುಗಿಯರು ಇರ್ತಾರೆ. ಅವರ ಲಿಪ್ ಸಿಂಕ್ ಆಗಲ್ಲ. ತೆಲುಗು ನಟಿಯರನ್ನ ಕಡೆಗಣಿಸಲಾಗುತ್ತಿದೆ'' ಎಂದು ನಟಿ ಶ್ರೀರೆಡ್ಡಿ ಹೇಳಿದ್ದಾರೆ.

ಅವರಿಗಿಂತ ನಾವೇನು ಕಮ್ಮಿಯಿಲ್ಲ
''ಕನ್ನಡ-ತಮಿಳು-ಹಿಂದಿ ಹುಡುಗಿಯರಿಗಿಂತ ನಾವು ಯಾವುದರಲ್ಲಿ ಕಮ್ಮಿ ಇದ್ದೀವಿ. ನಾವು ಎಕ್ಸ್ ಪೋಸ್ ಮಾಡಲ್ವಾ...ನಾವು ಆಕ್ಟ್ ಮಾಡಲ್ವಾ...ನಾವು ಹಾಟ್ ಆಗಿಲ್ವಾ...ನಾವು ಡೈಲಾಗ್ ಹೇಳಲ್ವಾ....ಯಾಕೆ ತೆಲುಗು ಹುಡುಗಿಯರಿಗೆ ಅವಕಾಶಗಳು ಕೊಡಲ್ಲ,? ಎಂದು ಬೇಸರ ಹೊರಹಾಕಿದ್ದಾರೆ.
ಕಾಮುಕ ನಿರ್ಮಾಪಕರ ಹುಟ್ಟಡಗಿಸಲು ಒಂದಾದ ಕನ್ನಡ ಸಿನಿಮಾರಂಗ

ನಾವು ಕಾಂಪ್ರಮೈಸ್ ಆಗಲ್ಲ
''ತೆಲುಗು ಹುಡುಗಿಯರಿಗೆ ಯಾಕೆ ಅವಕಾಶ ಕೊಡಲ್ಲ ಅಂದ್ರೆ, ನಾವು ಕಾಂಪ್ರಮೈಸ್ ಆಗಲ್ಲ ಅದಕ್ಕೆ. ತಮಿಳಿನಲ್ಲಿ ಕಾಂಪ್ರಮೈಸ್ ಅಂತಾರೆ. ತೆಲುಗಿನಲ್ಲಿ ಕಮಿಟ್ ಮೆಂಟ್ ಅಂತಾರೆ. ಸರಿ ಓಕೆ ನಾವು ಕಮಿಟ್ ಮೆಂಟ್ ಗೆ ಒಪ್ಪಿಕೊಂಡ್ರೆ, ನಮಗೆ ಸಿಗೋದು ಪೋಷಕ ಪಾತ್ರ ಅಷ್ಟೇ. ಈ ರೀತಿಯ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ'' ಎಂದು ಒಪನ್ ಆಗಿ ಮಾತನಾಡಿದ್ದಾರೆ.

ಕಾಂಪ್ರಮೈಸ್ ಆಗಿಲ್ಲ ಅಂದ್ರೆ ಇಲ್ಲಿ ಕೆಲಸ ಇಲ್ಲ
''ಕಾಂಪ್ರಮೈಸ್ (ಅವರ ಜೊತೆ ಮಲಗಬೇಕು) ಆಗಿಲ್ಲ ಅಂದ್ರೆ ಇಲ್ಲಿ ಕೆಲಸ ಆಗಲ್ಲ. ನಿರ್ದೇಶಕರು, ನಿರ್ಮಾಪಕರು, ಕ್ಯಾಮೆರಾ ಮ್ಯಾನ್ ಗಳು ಹೀಗೆ ಎಷ್ಟು ಕೊಚ್ಚೆಗಳಿವೆ ಗೊತ್ತಾ.? ಇನ್ನು ಹೆಣ್ಣು ಮಕ್ಕಳನ್ನ ಬಳಸಿಕೊಂಡ ನಂತರ ಸಿನಿಮಾ ನಿಂತು ಹೋಗಿರುವ ಉದಾಹರಣೆಗಳಿವೆ. ಆಮೇಲೆ ನಿರ್ಮಾಪಕರಿಲ್ಲ, ಡೈರೆಕ್ಟರ್ ಇಲ್ಲ ಅಂತ ಹೇಳಿ ಸಿನಿಮಾ ನಿಂತಿರುವ ಘಟನೆಗಳು ಇದೆ'' ಎಂದು ಟಾಲಿವುಡ್ ಇಂಡಸ್ಟ್ರಿಯ ಕ್ರಾಳ ಮುಖವನ್ನ ಬಯಲು ಮಾಡಿದ್ದಾರೆ.
ಸಿನಿಮಾ ಇಂಡಸ್ಟ್ರಿಯಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟ ನಟಿ

ಎಲ್ಲ ನಿರ್ಮಾಪಕರಿಂದಲೇ ಸಮಸ್ಯೆ ಇದೆ
ಈ ಸಮಸ್ಯೆ ಇರೋದು ನಿರ್ಮಾಪಕರ ಬಳಿ. ಇಂಡಸ್ಟ್ರಿಯಲ್ಲಿ ಅಲ್ಲು ಅರವಿಂದ್, ಮೋಹನ್ ಬಾಬು, ರಾಮನಾಯುಡು ಅಂತಹ ದೊಡ್ಡವರ ನಿರ್ಮಾಣ ಸಂಸ್ಥೆಗಳಿವೆ. ಇವರೆಲ್ಲ ಕಷ್ಟಪಟ್ಟು ಬೆಳದು ಬಂದವರು. ಇವರು ಮುಂದೆ ಬಂದು ತೆಲುಗು ಹುಡುಗಿಯರಿಗೆ ಅವಕಾಶ ಕೊಡಿ ಎಂದು ಹೇಳಬೇಕಾಗಿದೆ'' ಎಂದು ನಟಿ ಶ್ರೀರೆಡ್ಡಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.