ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಮೀಟೂ ಖ್ಯಾತಿಯ ತೆಲುಗು ನಟಿ ಶ್ರೀ ರೆಡ್ಡಿ?
ಮೀಟೂ ವಿರುದ್ಧ ವಿಚಿತ್ರ ಪ್ರತಿಭಟನೆ ಮಾಡಿದ್ದ ತೆಲುಗು ನಟಿ ಶ್ರೀ ರೆಡ್ಡಿ ಹೆಸರನ್ನು ಅನೇಕರು ಕೇಳಿರುತ್ತೀರಾ. ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ವಿರುದ್ಧ ಸಂಚಲನ ಸೃಷ್ಟಿಸಿದ ನಟಿ. ಮೀಟೂ ಆರೋಪ ಎದುರಿಸಿ ಹೈದರಾಬಾದ್ ಫಿಲಂ ಚೇಂಬರ್ ಮುಂದೆ ಬಟ್ಟೆ ಬಿಚ್ಚಿ ಅರೆನಗ್ನ ಪ್ರತಿಭಟನೆ ನಡೆಸಿ ಖ್ಯಾತಿ ಗಳಿಸಿದ ನಟಿ. ಶ್ರೀ ರೆಡ್ಡಿ ಆರೋಪ ಮಾಡಿದ ನಂತರ ಸಾಕಷ್ಟು ಮೀಟೂ ಆರೋಪಗಳು ಕೇಳಿ ಬಂದವು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕನ್ನಡ ಸೇರಿದಂತೆ ಸಾಕಷ್ಟು ನಟಿಮಣಿಯರು ಮೀಟೂ ಅಭಿಯಾನದಲ್ಲಿ ಧ್ವನಿ ಎತ್ತಿದ್ದರು.
ತೆಲುಗು ಚಿತ್ರರಂಗದ ಖ್ಯಾತ ನಟರ ಮೇಲೆ ಮೀಟೂ ಆರೋಪ ಹೊರೆಸಿ ಸ್ಟಾರ್ ನಟರಹೆಸರನ್ನೆಲ್ಲ ಬಯಲಿಗೆಳೆದಿದ್ದರು ಶ್ರೀರೆಡ್ಡಿ. ಆನಂತರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಖ್ಯಾತಿಗಳಿಸಿದ್ರು. ಹಾಟ್ ಫೋಟೋಗಳನ್ನು ಅಪ್ ಲೋಡ್ ಮಾಡುತ್ತ ಪಡ್ಡೆಯುವಕರ ನಿದ್ದೆ ಗೆಡಿಸುತ್ತಿದ್ದ ಶ್ರೀರೆಡ್ಡಿ ಬಗ್ಗೆ ಈಗ ಬ್ರೆಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ.
ಹೌದು, ನಟಿ ಶ್ರೀರೆಡ್ಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಶ್ರೀರೆಡ್ಡಿಯ ಕನ್ನಡ ಚಿತ್ರದ ಪೋಸ್ಟರ್ ಒಂದು ಹರಿದಾಡುತ್ತಿದೆ. ಮೀಟೂ ಎಳೆಯನ್ನೆ ಇಟ್ಟುಕೊಂಡು ಚಿತ್ರಕ್ಕೂ ಸಹ ಮೀ 2 ಫೈ 2 ಎಂದು ಟೈಟಲ್ ಇಡಲಾಗಿದೆ. ಶ್ರೀರೆಡ್ಡಿ ಜೊತೆ ಹಿಬಾ ಪಾಟಿಲ್, ಪೂನಂ ಪಾಂಡೆ, ರಿಚಾ ಪಣೈ ಮತ್ತು ಸುಪ್ರಿತಾ ಶೆಟ್ಟಿ ಕೂಡ ಪೋಸ್ಟರ್ ನಲ್ಲಿ ಇದ್ದಾರೆ.

ವಿಶೇಷ ಅಂದ್ರೆ ಪೋಸ್ಟರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಶೀರ್ವಾದದೊಂದಿಗೆ, ಕುಮಾರಸ್ವಾಮಿ ಸಹಕಾರದೊಂದಿಗೆ ಸೂರ್ಯ ಪಿಕ್ಟರ್ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗುತ್ತಿದೆ ಎನ್ನುವ ಮಾಹಿತಿ ಇದೆ. ಆದ್ರೆ ಇದು ಅಧಿಕೃತನಾ ಎನ್ನುವುದು ಮಾತ್ರ ಪಕ್ಕಾ ಆಗಿಲ್ಲ. ಚಿತ್ರಕ್ಕೆ ಕಿರಿಕ್ ಹುಡುಗ ಕೀರ್ತನ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರ ಯಾವಾಗ ಸೆಟ್ಟೇರುತ್ತೆ ಏನು ಎನ್ನುವ ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಿದೆ.


Click it and Unblock the Notifications











