For Quick Alerts
ALLOW NOTIFICATIONS  
For Daily Alerts

  ಶ್ರೀರೆಡ್ಡಿ ಸಂಚಲನ: ಮತ್ತೊಬ್ಬ ದೊಡ್ಡ ವ್ಯಕ್ತಿಯ ಹೆಸರು ಬಯಲುಗೆಳೆದ ನಟಿ

  By Bharath Kumar
  |

  ತೆಲುಗಿನ ಖ್ಯಾತ ನಿರ್ಮಾಪಕ ಸುರೇಶ್ ಬಾಬು ಅವರ ಮಗ ಅಭಿರಾಮ್ ಅವರ ಜೊತೆಗಿನ ಖಾಸಗಿ ಫೋಟೋಗಳನ್ನ ಬಹಿರಂಗಪಡಿಸಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ನಟಿ ಶ್ರೀರೆಡ್ಡಿ ಈಗ ಮತ್ತೊಬ್ಬ ವ್ಯಕ್ತಿಯ ಹೆಸರನ್ನ ಬಯಲು ಮಾಡಿದ್ದಾರೆ.

  ಅವಕಾಶದ ಹೆಸರಲ್ಲಿ ನಟಿಯರನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಶ್ರೀರೆಡ್ಡಿ ಹೋರಾಟಕ್ಕೆ ಧುಮುಕಿದ್ದು, ಟಾಲಿವುಡ್ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ತಾಂಡವಾಡುತ್ತಿದೆ ಎಂದು ಆರೋಪಿಸಿದ್ದಾರೆ.

  ರಕುಲ್ ಪ್ರೀತ್ ಗೆ ಶೂಟಿಂಗ್ ಸ್ಥಳಕ್ಕೆ ಹೋಗಿ ಹೊಡಿತೀನಿ ಎಂದು ಧಮ್ಕಿ ಹಾಕಿದ ನಟಿ

  ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ನಂತರ ಈಗ ತೆಲುಗಿನ ಹಿರಿಯ ಬರಹಗಾರನ ಹೆಸರು ಬಹಿರಂಗಪಡಿಸಿದ್ದು, ಆ ವ್ಯಕ್ತಿ ಶ್ರೀರೆಡ್ಡಿಗೆ ಯಾವ ರೀತಿ ಕಿರುಕುಳ ನೀಡಿದ್ದ ಎಂಬದನ್ನ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಶ್ರೀರೆಡ್ಡಿ ಬಿಚ್ಚಿಟ್ಟ ಎರಡನೇ ವ್ಯಕ್ತಿ ಯಾರು.? ನಟಿಯ ಬಳಿ ಇರುವ ಸಾಕ್ಷಿ ಏನು.? ಮುಂದೆ ಓದಿ.....

  ಕೋನ ವೆಂಕಟ್ ಹೆಸರು ಬಯಲು

  ಸಿನಿ ಲೋಕದ ದೊಡ್ಡ ದೊಡ್ಡವರು ಕರಾಳಮುಖ ಬಿಚ್ಚಿಡುತ್ತೇನೆ ಎಂದು ಸವಾಲು ಹಾಕಿರುವ ಶ್ರೀರೆಡ್ಡಿ ಈಗ ತೆಲುಗಿನ ಖ್ಯಾತ ಬರಹಗಾರ ಕೋನ ವೆಂಕಟ್ ಅವರ ಹೆಸರು ಬಯಲು ಮಾಡಿದ್ದಾರೆ. ಕೋನ ವೆಂಕಟ್ ಅವರು ನನ್ನನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.

  ಗೆಸ್ಟ್ ಹೌಸ್ ಗೆ ಆಹ್ವಾನ ನೀಡಿದ್ದ ಕೋನ ವೆಂಕಟ್

  ಹೈದ್ರಾಬಾದ್ ನಲ್ಲಿರುವ ಸ್ಮಶಾನದ ಹಿಂದೆ ಇರುವ ಗೆಸ್ಟ್ ಹೌಸ್ ಗೆ ಶ್ರೀರೆಡ್ಡಿಯನ್ನ ಆಹ್ವಾನಿಸಿದ್ದ ಕೋನ ವೆಂಕಟ್ ನಟಿಯ ಬಳಿ ಅಸಭ್ಯವಾಗಿ ವರ್ತಿಸಿದ್ದರಂತೆ. ''ನಿರ್ದೇಶಕ ವಿವಿ ವಿನಾಯಕ್ ಬರ್ತಾರೆ, ಪರಿಚಯ ಮಾಡ್ತೀನಿ ಬಾ ಎಂದು ನನ್ನನ್ನು ಗೆಸ್ಟ್ ಹೌಸ್ ಗೆ ಕರೆದಿದ್ದರು, ನಾನು ಕೂಡ ನಂಬಿ ಹೋಗಿದ್ದೇ. ಹೋದ ನಂತರ ಮದ್ಯ ಸೇವನೆ ಮಾಡು ಎಂದರು. ಆದ್ರೆ, ನಾನು ನನಗೆ ಅಭ್ಯಾಸವಿಲ್ಲ ಎಂದು ಹೇಳಿದೆ''

  ಅರೆನಗ್ನ ಪ್ರತಿಭಟನೆ ಮಾಡಿದ ಶ್ರೀರೆಡ್ಡಿ ಬಗ್ಗೆ ಕಂಗನಾ ಬೇಸರ.!

  ಲೈಂಗಿಕವಾಗಿ ಬಲವಂತ ಮಾಡಿದ್ದರು

  ಇನ್ನು ಸಿನಿಮಾ ವಿಚಾರವಾಗಿ ಮಾತನಾಡಲು ಹೋಗಿದ್ದ ನಟಿಯ ಬಳಿ ಕೋನ ವೆಂಕಟ್ ಅವರು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದರು ಎಂಬ ಸ್ಫೋಟಕ ಮಾಹಿತಿಯನ್ನ ಹೊರಹಾಕಿದ್ದಾರೆ.

  ಸಾಕ್ಷಿ ಬಿಡುಗಡೆ ಮಾಡುತ್ತೇನೆ

  ಕೋನ ವೆಂಕಟ್ ಅವರ ಬಗ್ಗೆ ಸುಮ್ಮನೆ ಹೇಳಿಕೆ ನೀಡಿ ಸುಮ್ಮನಾಗದ ಶ್ರೀರೆಡ್ಡಿ ''ನನ್ನ ಬಳಿ ಸಾಕ್ಷಿ ಇದೆ. ಅದನ್ನ ನಾನು ಬಿಡುಗಡೆ ಮಾಡುತ್ತೇನೆ ಎಂದು'' ಕೋನ ವೆಂಕಟ್ ವಿರುದ್ಧ ಸಮರ ಸಾರಿದ್ದಾರೆ. ಇನ್ನು ಪೊಲೀಸರು ತನಿಖೆ ಮಾಡಿದ್ರೆ, ಅವರು ಬೆದರಿಕೆ ಹಾಕಿರುವ ಕರೆಯ ಬಗ್ಗೆ ದಾಖಲೆಗಳು ಕೂಡ ಸಿಗುತ್ತೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

  ಇನ್ನು ಇಬ್ಬರ ಹೆಸರು ತಿಳಿಸುತ್ತೇನೆ

  ಸದ್ಯ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ಮತ್ತು ಕೋನ ವೆಂಕಟ್ ಅವರ ಹೆಸರು ಬಿಡುಗಡೆ ಮಾಡಿರುವ ಶ್ರೀರೆಡ್ಡಿ ಸದ್ಯದಲ್ಲೇ ಮತ್ತಿಬ್ಬರು ವ್ಯಕ್ತಿಗಳ ಹೆಸರು ಬಹಿರಂಗಪಡಿಸುತ್ತೇನೆ ಎಂದು ಕುತೂಹಲ ಮೂಡಿಸಿದ್ದಾರೆ. ಹೀಗಾಗಿ, ಯಾರು ಆ ಇಬ್ಬರು ಎಂದು ಈಗ ಟಾಲಿವುಡ್ ನಲ್ಲಿ ದೊಡ್ಡ ಚರ್ಚೆಯಾಗಿದೆ.

  ಕೋನ ವೆಂಕಟ್ ಬಗ್ಗೆ...

  ಕೋನ ವೆಂಕಟ್ ಅವರು ತೆಲುಗು ಇಂಡಸ್ಟ್ರಿಯ ಖ್ಯಾತ ಬರಹಗಾರರು. ದೊಡ್ಡ ದೊಡ್ಡ ನಟರ ಚಿತ್ರಗಳಿಗೆ ಸಂಬಾಷಣೆ ಮತ್ತು ಡೈಲಾಗ್ ಬರೆಯುವುದು ಇವರೇ. ಜೈ ಲವಕುಶ, ಅಖಿಲ್, ಬ್ರೂಸ್ ಲೀ, ಪವರ್, ಲೌಕ್ಯಂ. ಗೀತಾಂಜಲಿ, ಅಲ್ಲಡು ಸೀನು, ಬಲುಪು, ಶಾಡೋ, ಬಾದ್ ಶಾ, ರೆಡಿ, ದೂಕುಡು, ಡಾನ್ ಶೀನು, ಅದುರ್ಸ್, ಕಿಂಗ್ ಹೀಗೆ ಬಹುತೇಕ ಸ್ಟಾರ್ ಗಳಿಗೆ ಡೈಲಾಗ್ ಬರೆದಿದ್ದಾರೆ.

  English summary
  Sri Reddy now targets Kona Venkat after accusing Suresh Babu's son Abhiram and others of sexual harassment. She apparently also leaked a screenshot of her alleged Whatsapp conversation with Kona Venkat, on social media.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more