For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಪವರ್ ಸ್ಟಾರ್ ಗೆ ತೆಲುಗಿನ ಯುವನಟಿ ಕ್ಲೀನ್ ಬೌಲ್ಡ್.!

  By Bharath Kumar
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ, ಪರಭಾಷೆಯ ನಟ-ನಟಿಯರ ಬೆಂಗಳೂರಿಗೆ ಬಂದ್ರೆ ಪುನೀತ್ ಅವರ ಬಗ್ಗೆ ಮಾತನಾಡದೇ ಹೋಗುವುದಿಲ್ಲ.

  ಇದೀಗ, ತೆಲುಗಿನ ಯುವ ನಟಿ ಸುರಭಿ, ಕನ್ನಡದ ರಾಜರತ್ನ ಪುನೀತ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಪುನೀತ್ ಅವರನ್ನ ಭೇಟಿ ಮಾಡಿದ್ದ ಸುರಭಿ, ತಮ್ಮ ಟ್ವಿಟ್ಟರ್ ನಲ್ಲಿ ಅಪ್ಪು ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.

  ಕುತೂಹಲ ಮೂಡಿಸಿದೆ ಪುನೀತ್-ಅಲ್ಲು ಸಿರೀಶ್ ಎರಡನೇ ಭೇಟಿ.!

  ''ಒಕ ಕ್ಷಣಂ' ಚಿತ್ರದ ಸೆಟ್ ನಲ್ಲಿ ಪುನೀತ್ ಸರ್ ಅವರನ್ನ ಭೇಟಿ ಮಾಡಿದ್ದು ಅದ್ಭುತವಾದ ಕ್ಷಣವಾಗಿತ್ತು. ನಾನು ಭೇಟಿಯಾದವರಲ್ಲಿ ಅತ್ಯಂತ ಸರಳ ವ್ಯಕ್ತಿತ್ವದ ಸ್ವಭಾವ ಇವರದ್ದು'' ಎಂದು ಮೆಚ್ಚಿಕೊಂಡಿದ್ದಾರೆ.

  ಅಪ್ಪು ಡ್ಯಾನ್ಸ್ ನೋಡಿ ಬೌಲ್ಡ್ ಆದ ವಿದೇಶಿ ನಟಿ ಎಲ್ಲಿ ಅವರಾಮ್.!

  ಅಂದ್ಹಾಗೆ, ಅಲ್ಲು ಸಿರೀಶ್ ಅಭಿನಯದ 'ಒಕ ಕ್ಷಣಂ' ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಈ ಚಿತ್ರದ ನಾಯಕಿ ಸುರಭಿ. ಈ ವೇಳೆ ಪುನೀತ್ ಸಿರೀಶ್ ಚಿತ್ರದ ಸೆಟ್ ಗೆ ಭೇಟಿ ನೀಡಿದ್ದರು. ಆಗ ಸುರಭಿ ಅವರು ಪುನೀತ್ ಅವರನ್ನ ಭೇಟಿ ಮಾಡಿದ್ದರು.

  ಇದಕ್ಕು ಮುಂಚೆ ಸುರಭಿ, 'ಇವನ್ ವೇರೆಮಾದ್ರಿ', 'ವಿಐಪಿ', 'ಎಕ್ಸ್ ಪ್ರೆಸ್ ರಾಜಾ', 'ಜಂಟಲ್ ಮ್ಯಾನ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

  'ಟಗರು' ಕಾರ್ಯಕ್ರಮಕ್ಕೆ ಬಂದಿದ್ದ ಅಲ್ಲು ಅರ್ಜುನ್ ಸಹೋದರನ ಆಸೆ ಏನು?

  English summary
  Telugu Actress surabhi Happy About Power star Puneeth Rajkumar. ತೆಲುಗು ನಟಿ ಸುರಭಿ, ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X