ಸುದೀಪ್ ಪ್ರೋಮೋ ಕಾಪಿ ಮಾಡಿದ್ರಾ ತೆಲುಗು ಬಿಗ್ ಬಾಸ್?
Recommended Video
ಕನ್ನಡದಲ್ಲಿ ಬಿಗ್ ಬಾಸ್ ಶೋ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ತಮಿಳಿನಲ್ಲಿ ಬಿಗ್ ಬಾಸ್ ಸೀಸನ್ 3 ಆರಂಭವಾಗಿದೆ. ಹಿಂದಿಯಲ್ಲಿ ಸೀಸನ್ 13 ಕೂಡ ಸದ್ಯದಲ್ಲೇ ಆರಂಭವಾಗುತ್ತಿದೆ. ಇದೀಗ, ತೆಲುಗಿನಲ್ಲೂ ಮೂರನೇ ಆವೃತ್ತಿಗೆ ಸಿದ್ಧತೆ ನಡೆದಿದೆ.
ಮೊದಲ ಆವೃತ್ತಿ ಜೂನಿಯರ್ ಎನ್.ಟಿ.ಆರ್ ನಿರೂಪಣೆ ಮಾಡಿದ್ರು. ಎರಡನೇ ಆವೃತ್ತಿಯಲ್ಲಿ ನಟ ನಾನಿ ಆಂಕರಿಂಗ್ ಮಾಡಿದ್ದರು. ಇದೀಗ, ಮೂರನೇ ಆವೃತ್ತಿಯಲ್ಲಿ ಹೊಸ ನಟನ ಆಗಮನವಾಗಲಿದೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಖಚಿತ ಮಾಹಿತಿ ಹೊರಬಿದ್ದಿರಲಿಲ್ಲ.
ಬಟ್, ಈಗ ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿಯ ಪ್ರೋಮೋ ಬಿಡುಗಡೆಯಾಗಿದ್ದು ಯಾರು ಹೋಸ್ಟ್ ಎಂದು ಬಹಿರಂಗವಾಗಿದೆ. ನಾನಿ ಬದಲಾಗಿ ಅಕ್ಕಿನೇನಿ ನಾಗಾರ್ಜುನ ಎಂಟ್ರಿಯಾಗಿದ್ದಾರೆ. ಈ ಮಧ್ಯೆ ತೆಲುಗು ಬಿಗ್ ಬಾಸ್ ಪ್ರೋಮೋಗೆ ಕನ್ನಡದ ಬಿಗ್ ಬಾಸ್ ಪ್ರೋಮೋ ಸ್ಫೂರ್ತಿ ಆಯ್ತಾ ಎಂಬ ಚರ್ಚೆ ಆರಂಭವಾಗಿದೆ. ಮುಂದೆ ಓದಿ....

ತರಕಾರಿ ಮಾರುಕಟ್ಟೆಯಲ್ಲಿ ಶೂಟಿಂಗ್
ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿಯ ಮೊದಲ ಪ್ರೋಮೋ ಬಿಡುಗಡೆಯಾಗಿದೆ. ಇದರಲ್ಲಿ ನಾಗಾರ್ಜುನ ನಿರೂಪಕರಾಗಿ ಕಾಣಿಸಿಕೊಳ್ಳುವುದನ್ನ ಅಧಿಕೃತಗೊಳಿಸಲಾಗಿದೆ. ಇಲ್ಲಿ ವಿಷ್ಯ ಏನಪ್ಪಾ ಅಂದ್ರೆ ಈ ಪ್ರೋಮೋ ನೋಡುತ್ತಿದ್ದರೇ, ಈ ಹಿಂದೆ ಕನ್ನಡದಲ್ಲೂ ಇಂತಹದೊಂದು ಪ್ರೋಮೋ ನೋಡಿದ್ವಿ ಅಲ್ವಾ ಎಂಬ ಯೋಚನೆ ಮೂಡುವುದು ಸಹಜ. ಅದನ್ನ ಕ್ರಾಸ್ ಚೆಕ್ ಮಾಡಿದಾಗ ನಿಜಾನ ಆಗಿತ್ತು.

ಅಂದು ಸುದೀಪ್, ಈಗ ನಾಗಾರ್ಜುನ
ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಕಿಚ್ಚ ಸುದೀಪ್ ಅವರ ಪ್ರೋಮೋ ಒಂದು ತರಕಾರಿ ಮಾರುಕಟ್ಟೆ ಸೆಟ್ ಹಾಕಿ ಚಿತ್ರೀಕರಿಸಲಾಗಿತ್ತು. ''ಹೊಸದಾಗಿ ಹದಿನೈದು ಮಂದಿ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ, ಅವರಿಗಾಗಿ ಸ್ವತಃ ನಾನೇ ಮಾರುಕಟ್ಟೆಗೆ ಬಂದಿದ್ದೇನು'' ಎಂದು ಡೈಲಾಗ್ ಹೇಳಿಸಿದ್ದರು. ಇದೀಗ, ನಾಗಾರ್ಜುನ ಅವರ ಪ್ರೋಮೋದಲ್ಲೂ ಸೇಮ್ ಟು ಸೇಮ್ ಕಾನ್ಸೆಪ್ಟ್ ಬಳಸಲಾಗಿದೆ.

ಎಂಟ್ರಿನೂ ಸೇಮ್ ಇದೆ
ಕನ್ನಡದ ಪ್ರೋಮೋದಲ್ಲಿ ಸುದೀಪ್ ಅವರ ಎಂಟ್ರಿ ಇದ್ದಂತೆ ಇಲ್ಲಿಯೂ ನಾಗಾರ್ಜುನ ಅವರ ಎಂಟ್ರಿ ಮಾಡಲಾಗಿದೆ. ನಾಗಾರ್ಜುನ ಅವರು ಕೂಡ ಹೊಸದಾಗಿ ಮನೆಗೆ ಬರುವ ಸ್ಪರ್ಧಿಗಳಿಗಾಗಿ ತರಕಾರಿ ಖರೀದಿ ಮಾಡಲು ಮಾರುಕಟ್ಟೆಗೆ ಬಂದಿದ್ದಾರೆ. ಬಹುಶಃ ಕನ್ನಡದ ಪ್ರೋಮೋ ನೋಡಿ ಸ್ಪೂರ್ತಿಯಾಗಿ ಈ ಪ್ರೋಮೋ ಮಾಡಿದ್ರಾ ಅಥವಾ ಕನ್ನಡಕ್ಕೆ ಪ್ರೋಮೋ ಮಾಡಿದವರೇ ಅಲ್ಲಿಯೂ ಕೆಲಸ ಮಾಡಿದ್ರಾ ಎಂಬುದು ಗೊತ್ತಿಲ್ಲ. ಆದರೆ, ಪ್ರೋಮೋ ಮಾತ್ರ ಹೋಲಿಕೆಯಾಗುತ್ತಿದೆ.

ಶೋನೇ ಕಾಪಿ, ಪ್ರೋಮೋ ಏನ್ ಬಿಡಿ
ಅಂದ್ಹಾಗೆ ಬಿಗ್ ಬಾಸ್ ಶೋ ಎಂಬುದೇ ಕಾಪಿ. ಹಾಲಿವುಡ್ ಟಿವಿ ಶೋನಿಂದ ಹಿಂದಿಗೆ ಬಂತು. ಹಿಂದಿಯಿಂದ ಕನ್ನಡಕ್ಕೆ ಬಂತು. ನಂತರ ತಮಿಳು, ತೆಲುಗು, ಬೆಂಗಾಳಿ, ಮಲಯಾಳಂ ಹೀಗೆ ಎಲ್ಲ ಭಾಷೆಯಲ್ಲೂ ಬಂತು. ಅಲ್ಲಿ ಮಾಡಿದ್ದನ್ನೆ ಎಲ್ಲ ಭಾಷೆಯ ಶೋಗಳಲ್ಲೂ ಮಾಡಲಾಗುತ್ತೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ಇನ್ನು ಪ್ರೋಮೋ ಹೋಲಿಕೆಯಾಗೋದ್ರಲ್ಲಿ ಯಾವುದೇ ಅಚ್ಚರಿ ಇಲ್ಲ.


Click it and Unblock the Notifications











