For Quick Alerts
ALLOW NOTIFICATIONS  
For Daily Alerts

ಕನ್ನಡಕ್ಕೆ 'ಹರ'ನಾಗಿ ಒಲಿದ ತೆಲುಗಿನ 'ಚಿನ್ನೋಡು'

By Rajendra
|

ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡದಿದ್ದರೂ ಒಂದು ಮಟ್ಟಕ್ಕೆ ಬಾಕ್ಸ್ ಆಫೀಸಲ್ಲಿ ಗೆದ್ದ ಚಿತ್ರ ಚಿನ್ನೋಡು. ಸುಮಂತ್, ಚಾರ್ಮಿ ಕೌರ್ ಹಾಗೂ ರಾಹುಲ್ ದೇವ್ ಅಭಿನಯ ಈ ಚಿತ್ರ ಹಿಂದಿಯಲ್ಲಿ 'ಏಕ್ ಔರ್ ಇಲ್ಜಾಮ್' ಎಂಬ ಹೆಸರಲ್ಲಿ ರಿಮೇಕ್ ಆಗಿದೆ. ಈಗ ಕನ್ನಡಕ್ಕೆ 'ಹರ'ನಾಗಿ ಬರುತ್ತಿದೆ.

ಶಿವನೋಲಿದರೆ ಭಯವಿಲ್ಲ ಅಂದಹಾಗೆ 'ಹರ' ಒಲಿದರೆ ಅಶಾಂತಿಯೇ ಇಲ್ಲ! ಹೌದು ದುಷ್ಟ ಸಂಹಾರದ ಜೊತೆಗೆ 'ಹರ' ಕೌಟುಂಬಿಕ ಶಾಂತಿ ನೆಲೆಸಲು ಬರುತ್ತಿದ್ದಾನೆ. ಧನಲಕ್ಷ್ಮಿ ನಾರಾಯಣ್ ಅವರ ಬ್ಯಾನರ್ ಅಲ್ಲಿ ಜಾನಕಿ ತುಲಸಿರಾಮ್ ಅವರ ನಿರ್ಮಾಣದಲ್ಲಿ ಕನ್ನಡಲ್ಲಿ 'ಹರ' ನಿರ್ಮಾಣವಾಗುತ್ತಿದೆ.

ಹರನಿಗೆ ಹೊಸದಾಗಿ ಚಿತ್ರಕಥೆ ಬರೆದು ನಿರ್ದೇಶನಕ್ಕೆ ಅಣುವು ಮಾಡುತಿದ್ದಾರೆ ದೇವರಾಜ್ ಪಾಲನ್. 2006ರ ಅಕ್ಟೋಬರ್ ನಲ್ಲಿ ಆಂಧ್ರದಾದ್ಯಂತ ಬಿಡುಗಡೆ ಆಗಿ ಸುಮಂತ್ ಹಾಗೂ ಚಾರ್ಮಿ ಕೌರ್ ಅವರ ಅಭಿನಯದಲ್ಲಿ ಕಣ್ಮಣಿ ಅವರು ಕಥೆ ಬರೆದು ನಿರ್ದೇಶನ ಮಾಡಿದ ಚಿತ್ರ ಕನ್ನಡಲ್ಲಿ ಈಗ 'ಹರ' ಚಿತ್ರೀಕರಣ ಸಾಗಿಸಿದೆ.

ರಾಜ್ಯ ಪ್ರಶಸ್ತಿ ಛಾಯಾಗ್ರಹಕ ಕೆ ಎಂ ವಿಷ್ಣುವರ್ಧನ್, ಸುಮಧುರ ಸಂಗೀತಕ್ಕೆ ಪ್ರಸಿದ್ಧಿ ಆಗಿರುವ ಜೆಸ್ಸಿ ಗಿಫ್ಟ್ ಅವರ ರಾಗ ಸಂಯೋಜನೆ ಇರುವ ಈ ಕೌಟುಂಬಿಕ, ಸಾಹಸ ಪ್ರಧಾನ ಹೃದಯಸ್ಪರ್ಶಿ ಚಿತ್ರದಲ್ಲಿ ವಸಂತ್ ಹಾಗೂ ಪ್ರಜ್ಞಾ ಅವರು ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ.

ಚಿತ್ರದ ಉಳಿದ ಪಾತ್ರವರ್ಗದಲ್ಲಿ ಶರಣ್, ವಿನಯಾ ಪ್ರಸಾದ್, ಸಾಧು ಕೋಕಿಲ, ಅವಿನಾಷ್, ಧರ್ಮ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಚಿತ್ರದ ನಾಯಕ ಭೂಮಿಗೆ ಅಡಿಯಿಡುತ್ತಲೇ ತಾಯಿ ಇಹಲೋಕ ತ್ಯಜಿಸುತ್ತಾರೆ. ಅವನನ್ನು ಜೈಲರ್ ಒಬ್ಬರು ಸಾಕುತ್ತಾರೆ. ಜೈಲಿನಲ್ಲೇ ಬೆಳೆಯುತ್ತಾನೆ.

ಜೈಲರ್ ಗೂ ಒಬ್ಬ ಮಗನಿರುತ್ತಾನೆ. ಮುಂದೆ ಜೈಲರ್ ಮಗನನ್ನು ಚಿನ್ನ ಸಾಯಿಸಿ ಜೈಲಿಗೆ ಹೋಗುವಂತಾಗುತ್ತದೆ. ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ಕಥೆ ಸಾಗುತ್ತದೆ. ಕಣ್ಮಣಿ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರ ಈಗ ಕನ್ನಡಕ್ಕೆ ರೀಮೇಕ್ ಆಗುತ್ತಿರುವುದು ವಿಶೇಷ. (ಒನ್ಇಂಡಿಯಾ ಕನ್ನಡ)

English summary
Tollywood film 'Chinnodu' that stars Sumanth, Charmme Kaur, and Rahul Dev has remade in Kannada has 'Hara'. The original movie directed by Kanmani. It was a moderate success at the box office. It was later dubbed into Hindi under the title Ek aur Ilzaam. 

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more