ಗೋಲ್ಡನ್ ಸ್ಟಾರ್‌ ಗಣೇಶ್ ಕುಣಿಸಲು ಬಂದ ಜಾನಿ ಮಾಸ್ಟರ್

ತೆಲುಗಿನ ಡ್ಯಾನ್ಸ್ ಮಾಸ್ಟರ್ ಜಾನಿ ಕನ್ನಡ ಸಿನಿಮಾಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ. 'ರಾಜಕುಮಾರ' ಚಿತ್ರದ 'ಅಪ್ಪು ಡ್ಯಾನ್ಸ್ ಡ್ಯಾನ್ಸ್', 'ನಟಸಾರ್ವಭೌಮ' ಚಿತ್ರದ 'ಓಪನ್ ದ ಬಾಟಲ್', 'ವಿಕ್ರಾಂತ್ ರೋಣ' ಚಿತ್ರದ 'ರಾರಾ ರಕ್ಕಮ್ಮ' ರೀತಿಯ ಸೂಪರ್ ಹಿಟ್ ಹಾಡುಗಳಿಗೆ ಜಾನಿ ಕೊರಿಯೋಗ್ರಫಿ ಮಾಡಿದ್ದರು. ಇದೀಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

ಕಳೆದ ವರ್ಷ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾನಿ ಮಾಸ್ಟರ್ ಜೈಲು ಸೇರುವಂತಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಇತ್ತೀಚೆಗೆ ಕನ್ನಡದ 'Your's Sincerely ರಾಮ್' ಚಿತ್ರದ ಹಾಡೊಂದಕ್ಕೆ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಿನಿಮಾ ಇದು. ವಿಖ್ಯಾತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Telugu Choreographer Jani Master comes on board for Ganesh s yours sincerely raam

ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ಸೆಟ್ಟೇರಿದ್ದ ಈ ಸಿನಿಮಾ ಚಿತ್ರೀಕರಣ ಬೆಂಗಳೂರಲ್ಲಿ ಭರದಿಂದ ಸಾಗಿದೆ. 90ರ ದಶಕದ ರೆಟ್ರೋ ಸ್ಟೈಲ್‌ನಲ್ಲಿ ಚಿತ್ರದ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಅದಕ್ಕಾಗಿ ನಗರದಲ್ಲಿ 4 ದೊಡ್ಡ ಸೆಟ್ ಹಾಕಲಾಗಿತ್ತು. ಬಿಂದಾಸ್ ಹಾಡಿಗೆ ಗಣೇಶ್‌ ಹೆಜ್ಜೆ ಹಾಕಲಿದ್ದು, ಜಾನಿ ಮಾಸ್ಟರ್ ಕುಣಿಸುತ್ತಿದ್ದಾರೆ. ಅಂದಹಾಗೆ ಅನೂಪ್ ಸಿಳೀನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

ಸತ್ಯರಾಯಲ ನಿರ್ಮಾಣದ 'Your's Sincerely ರಾಮ್' ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಯದುನಂದನ್ ಸಂಭಾಷಣೆ, ಗುಣ ಕಲಾ ನಿರ್ದೇಶನವಿದೆ. ಈ ವರ್ಷವೇ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಮೂಲಕ ಗಣೇಶ್ ಕಂಬ್ಯಾಕ್ ಮಾಡಿದ್ದಾರೆ. ಈ ಬಾರಿ ರಮೇಶ್ ಅರವಿಂದ್ ಜೊತೆ ಸೇರಿ ಮತ್ತೆ ಕಮಾಲ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ಎರಡು ವಾರಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಜಾನಿ ಮಾಸ್ಟರ್ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿದ್ದರು. ಈ ವೇಳೆ ಕೆಲವೊತ್ತು ಅಲ್ಲಿ ಕೂತು ಕಣ್ಣೀರು ಹಾಕಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿದ್ದ ಮಾಸ್ಟರ್ ಅಪ್ಪು ಸಮಾಧಿಗೆ ನಮನ ಸಲ್ಲಿಸಿದ್ದು ಕೆಲವರಿಗೆ ಇಷ್ಟವಾಗಿರಲಿಲ್ಲ.

ತನ್ನ ತಂಡದಲ್ಲಿದ್ದ ಯುವತಿಗೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿತ್ತು. ಸ್ವತಃ ಆ ಯುವತಿ ಹೈದರಾಬಾದ್ನ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2024ರ ಸೆಪ್ಟೆಂಬರ್ 19 ರಂದು ಬಂಧನವಾಗಿದ್ದ ಜಾನಿ ಮಾಸ್ಟರ್ ಅಕ್ಟೋಬರ್ 24ರಂದು ಜಾಮೀನು ಪಡೆದು ಹೊರ ಬಂದಿದ್ದರು. ಈ ಪ್ರಕರಣದ ಬಳಿಕ ಅವರಿಗೆ ಅವಕಾಶಗಳು ಕಮ್ಮಿ ಆಗಿದೆ.

ಎರಡು ವರ್ಷಗಳ ಹಿಂದೆ ಬಂದಿದ್ದ ತಮಿಳಿನ ತಿರುಚಿತ್ರಾಂಬಲಂ ಚಿತ್ರದ ಕೊರಿಯೋಗ್ರಫಿಗಾಗಿ ಜಾನಿ ಮಾಸ್ಟರ್‌ಗೆ ರಾಷ್ಟ್ರಪ್ರಶಸ್ತಿ ಘೋಷಣೆ ಆಗಿತ್ತು. ಆದರೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿರುವುದರಿಂದ ಅವರಿಗೆ ಪ್ರಶಸ್ತಿ ನೀಡಿರಲಿಲ್ಲ. ಶೇಕ್ ಜಾನಿ ಬಾಷಾ ಎನ್ನುವುದು ಅವರ ಪೂರ್ಣ ಹೆಸರು. ಜಾನಿ ಮಾಸ್ಟರ್ ಅಂತ್ಲೇ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ.

More from Filmibeat

English summary
Telugu choreographer Jani master works on a special song for yours sincerely raam;
Read more about: ganesh song sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X