twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರ-ರವಿಚಂದ್ರನ್ ಸಿನಿಮಾಕ್ಕೆ ತೆಲುಗು ಸಿನಿಮಾ ಫೆಡರೇಷನ್‌ನಿಂದ ಸಮಸ್ಯೆ

    |

    ರವಿಚಂದ್ರನ್ ಮತ್ತು ಉಪೇಂದ್ರ ಒಟ್ಟಿಗೆ 'ತ್ರಿಶೂಲಂ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿತ್ತು. ಆದರೆ ಸಿನಿಮಾಕ್ಕೆ ಅಲ್ಲಿನ ಸ್ಥಳೀಯ ಸಿನಿ ಫೆಡರೇಷನ್‌ನಿಂದ ಸಮಸ್ಯೆ ಎದುರಾಗಿದೆ.

    ಹೈದರಾಬಾದ್‌ನ ಸಾಂಗಿ ದೇವಸ್ಥಾನದಲ್ಲಿ ಸಿನಿಮಾದ ಶೂಟಿಂಗ್‌ಗೆ ಸೆಟ್ ಹಾಕಿ ಚಿತ್ರೀಕರಣಕ್ಕೆ ತಯಾರಿ ನಡೆಸಲಾಗಿತ್ತು. ಆದರೆ ಸ್ಥಳೀಯ ಸಿನಿ ಫೆಡರೇಷನ್ ಸಿನಿಮಾ ಯುನಿಟ್ ಕಳಿಸದೆ ತಗಾದೆ ತೆಗೆದಿದೆ.

    ರವಿಚಂದ್ರನ್, ಉಪೇಂದ್ರ ಸೇರಿದಂತೆ ಹಲವು ನಟರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಜೂನಿಯರ್ ಆರ್ಟಿಸ್ಟ್‌ ಇತರೆ ತಂತ್ರಜ್ಞರು ಸೇರಿ ಸುಮಾರು 300 ಮಂದಿ ಸೆಟ್‌ನಲ್ಲಿ ತಯಾರಾಗಿದ್ದರು, ದೇವಸ್ಥಾನದ ಆವರಣದಲ್ಲಿ ಫೈಟ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಕ್ಯಾಮೆರಾ ಯುನಿಟ್‌ ಹಾಗೂ ಇತರೆ ಯಂತ್ರೋಪಕರಣಗಳು ಒಳಗೊಂಡ ಯುನಿಟ್ ಅನ್ನು ನೀಡಲು ಫೆಡರೇಷನ್ ತಗಾದೆ ತೆಗೆದಿದೆ.

    ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್, ''ನಿನ್ನೆ ಚಿತ್ರೀಕರಣ ಸುಗಮವಾಗಿಯೇ ಸಾಗಿತು. ಆದರೆ ನಿನ್ನೆ ರಾತ್ರಿಯಿಂದ ಹೊಸ ತಗಾದೆ ತೆಗೆದಿದ್ದಾರೆ. ಬೇರೆ ಯಾವುದೋ ಸೆಟ್ ಹಾಕಿದ್ದ ಹಳೆಯ ಬಾಕಿ ನೀಡಬೇಕು. ಹಣ ನೀಡದೆ ಯುನಿಟ್ ನೀಡುವುದಿಲ್ಲ ಎನ್ನುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ.

    20 ಲಕ್ಷ ರುಪಾಯಿ ನಷ್ಟವಾಗಿದೆ: ನಿರ್ಮಾಪಕ ಆರೋಪ

    20 ಲಕ್ಷ ರುಪಾಯಿ ನಷ್ಟವಾಗಿದೆ: ನಿರ್ಮಾಪಕ ಆರೋಪ

    ''ಇಲ್ಲಿನ ಫೆಡರೇಷನ್ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇಲ್ಲಿನ ನಿರ್ವಾಹಕರು ನಮ್ಮ ಬಳಿ ಹೆಚ್ಚುವರಿ ಹಣ ಕೀಳಬೇಕೆಂದು ನಾಟಕ ಮಾಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಬೇಕಾದ ಸಿಬ್ಬಂದಿಯನ್ನು ಕೆಲಸಕ್ಕೆ ಕಳಿಸದೆ ತೊಂದರೆ ಕೊಟ್ಟಿದ್ದಾರೆ. ಇವರು ಕೊಟ್ಟಿರುವ ತೊಂದರೆಯಿಂದ ಇವತ್ತು ಒಂದೇ ದಿನಕ್ಕೆ ನನಗೆ ಸುಮಾರು 20 ಲಕ್ಷ ಹಣ ನಷ್ಟವಾಗಿದೆ'' ಎಂದಿದ್ದಾರೆ ನಿರ್ಮಾಪಕ ಕನಕಪುರ ಶ್ರೀನಿವಾಸ್.

    ವಾಸು ಎಂಬಾತ ನನಗೆ ಬೆದರಿಕೆ ಹಾಕಿದ್ದಾನೆ: ಕನಕಪುರ ಶ್ರೀನಿವಾಸ್

    ವಾಸು ಎಂಬಾತ ನನಗೆ ಬೆದರಿಕೆ ಹಾಕಿದ್ದಾನೆ: ಕನಕಪುರ ಶ್ರೀನಿವಾಸ್

    ''ಕಲಾವಿದರು, ತಂತ್ರಜ್ಞರಿಗೆಲ್ಲ ತಿಂಡಿ, ಊಟ ವ್ಯವಸ್ಥೆ ಮಾಡಿದ್ದೇನೆ. ಸೆಟ್ ನಿರ್ಮಾಣ ಮಾಡಿದ್ದೇನೆ. ಫೈಟರ್‌ಗಳು, ಫೈಟ್ ಮಾಸ್ಟರ್ ಎಲ್ಲ ಬಂದಿದ್ದಾರೆ. ಫೆಡರೇಷನ್‌ನವರು ತೊಂದರೆ ಕೊಡುತ್ತಿದ್ದಾರೆ. ವ್ಯವಸ್ಥಾಪಕನ ಅಸಿಸ್ಟೆಂಟ್ ವಾಸು ಎಂಬಾತ ಸೆಟ್‌ ಬಳಿಯೇ ಇದ್ದು, ಹಣ ಕೊಡದೆ ಸೆಟ್‌ ಬಿಟ್ಟು ಹೇಗೆ ಹೋಗುತ್ತೀರಿ ನೋಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ'' ಎಂದಿದ್ದಾರೆ ಕನಕಪುರ ಶ್ರೀನಿವಾಸ್.

    ಪೊಲೀಸ್ ಕಮೀಷನರ್‌ಗೆ ದೂರು ನೀಡುತ್ತೇನೆ: ನಿರ್ಮಾಪಕ

    ಪೊಲೀಸ್ ಕಮೀಷನರ್‌ಗೆ ದೂರು ನೀಡುತ್ತೇನೆ: ನಿರ್ಮಾಪಕ

    ''ನಾನು ಈವರೆಗೆ 110 ಸಿನಿಮಾ ನಿರ್ಮಾಣ ಮಾಡಿದ್ದೀನಿ. 150 ಕ್ಕೂ ಹೆಚ್ಚು ಸಿನಿಮಾ ವಿತರಣೆ ಮಾಡಿದ್ದೇನೆ. ಹೀಗಿದ್ದಾಗ ಈ ವ್ಯಕ್ತಿ ನನಗೇ ಬೆದರಿಕೆ ಹಾಕಿದ್ದಾನೆ. ನಾನು ಪೊಲೀಸ್ ಕಮೀಷನರ್ ಬಳಿ ಹೋಗುತ್ತೇನೆ. ಇವರ ಈ ದಬ್ಬಾಳಿಕೆ ವಿರುದ್ಧ ಸೂಕ್ತವಾಗಿ ಕ್ರಮ ಕೈಗೊಳ್ಳುತ್ತೇನೆ. ಕರ್ನಾಟಕದ ನಿರ್ಮಾಪಕರ ಅಸೋಸಿಯೇಷನ್‌ಗೆ ಮಾಹಿತಿ ತಲುಪಿಸಿದ್ದೇನೆ. ಅವರೂ ಇಲ್ಲಿಗೆ ಬರುತ್ತಿದ್ದಾರೆ'' ಎಂದಿದ್ದಾರೆ ನಿರ್ಮಾಪಕ.

    ಹಲವು ನಟರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು

    ಹಲವು ನಟರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು

    'ತ್ರಿಶೂಲಂ' ಸಿನಿಮಾದಲ್ಲಿ ರವಿಚಂದ್ರನ್, ಉಪೇಂದ್ರ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. ಸಾನ್ವಿ ಶ್ರೀವಾಸ್ತವ್, ಸಾಧು ಕೋಕಿಲ, ನಿಮಿಕಾ ರತ್ನಾಕರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಸೇರಿ ಅನೇಕರು ನಟಿಸುತ್ತಿದ್ದಾರೆ. ಚಿತ್ರೀಕರಣಕ್ಕೆ ಸಮಸ್ಯೆ ಆಗುತ್ತಿದ್ದಂತೆ ರವಿಚಂದ್ರನ್, ಉಪೇಂದ್ರ ಹಾಗೂ ಇತರ ಕೆಲವು ನಟರು ವಾಪಸ್ ಮರಳಿದ್ದಾರೆ. ಉಪೇಂದ್ರ ಹಾಗೂ ರವಿಚಂದ್ರನ್ ಇಬ್ಬರೂ ಬೇರೆ-ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿಯೂ ತೊಡಗಿಕೊಂಡಿದ್ದಾರೆ. ಉಪೇಂದ್ರ 'ಕಬ್ಜ' ಸಿನಿಮಾದ ಚಿತ್ರೀಕರಣದಲ್ಲಿ ನಿತರಾಗಿದ್ದರೆ, ರವಿಚಂದ್ರನ್ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರವಿಚಂದ್ರನ್ ನಟನೆಯ 'ದೃಶ್ಯ 2', 'ಕನ್ನಡಿಗ', 'ರವಿ ಬೋಪಣ್ಣ' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

    English summary
    Telugu Cine Federaton giving trouble to Upendra and Ravichandran's Thrishoolam movie.
    Thursday, October 28, 2021, 9:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X