»   » ಪುನೀತ್ ’ನಿನ್ನಿಂದಲೇ’ ಚಿತ್ರದಲ್ಲಿ ಗಿನ್ನಿಸ್ ದಾಖಲೆಯ ಹಾಸ್ಯನಟ

ಪುನೀತ್ ’ನಿನ್ನಿಂದಲೇ’ ಚಿತ್ರದಲ್ಲಿ ಗಿನ್ನಿಸ್ ದಾಖಲೆಯ ಹಾಸ್ಯನಟ

Posted By:
Subscribe to Filmibeat Kannada

ಸಖತ್ ಸುದ್ದಿ ಮಾಡುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ 'ನಿನ್ನಿಂದಲೇ' ಚಿತ್ರ ತಂಡದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಗಿನ್ನಿಸ್ ದಾಖಲೆಯ ಹಾಸ್ಯ ನಟರೊಬ್ಬರು ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ.

ನಿನ್ನಿಂದಲೇ ಚಿತ್ರವನ್ನು ತೆಲುಗಿಗೂ ವಾಯ್ಸ್ ಡಬ್ ಮಾಡುವ ದೂರಾಲೋಚನೆಯನ್ನು ನಿರ್ಮಾಪಕರು ಹೊಂದಿರುವುದರಿಂದ ಈ ಚಿತ್ರಕ್ಕೆ ತೆಲುಗಿನ ಪ್ರಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರನ್ನು ಕರೆತರಲಾಗಿದೆ ಎನ್ನಲಾಗುತ್ತಿದೆ.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆಯ ಪಟ್ಟಿಯಲ್ಲಿರುವ ಬ್ರಹ್ಮಾನಂದಂ ನಿನ್ನಿಂದಲೇ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲು ಶುಕ್ರವಾರ (ಡಿ 6) ಚಿತ್ರತಂಡದ ಜೊತೆ ಸೇರಲಿದ್ದಾರೆ.

ಉಪನ್ಯಾಸಕ ವೃತ್ತಿಯಿಂದ ಸಿನಿಮಾ ಲೋಕಕ್ಕೆ ಬಂದ ಬ್ರಹ್ಮಾನಂದ ತೆಲುಗು ಚಿತ್ರರಂಗದ ಅನಭಿಷಕ್ತ ಹಾಸ್ಯ ನಟ. ಇತ್ತೀಚಿನ ದಿನಗಳಲ್ಲಿ ಅವರಿಲ್ಲದ ಚಿತ್ರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ತೆಲುಗು ಚಿತ್ರರಂಗವನ್ನು ಆವರಿಸಿರುವ ಬ್ರಹ್ಮಾನಂದ ಕೆಲವು ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ.

ನಿನ್ನಿಂದಲೇ ಚಿತ್ರದಲ್ಲಿ ತನ್ನ ಭಾಗದ ಶೂಟಿಂಗ್ ಅನ್ನು ಪುನೀತ್ ಬಹುತೇಕ ಮುಗಿಸಿದ್ದಾರೆ. ಬ್ಯಾಂಕಾಕ್ ನಲ್ಲಿ ಚಿತ್ರದ ಶೂಟಿಂಗ್ ಅಲ್ಲಿನ ರಾಜಕೀಯ ಕಾರಣಗಳಿಂದ ಕೆಲವು ದಿನ ಸ್ಥಗಿತಗೊಂಡಿತ್ತು. ನಂತರ ಶೂಟಿಂಗ್ ಪುನರಾರಂಭಗೊಂಡು ಚಿತ್ರತಂಡ ಅಲ್ಲಿಂದ ವಾಪಾಸಾಗಿದೆ. (ಬ್ಯಾಂಕಾಕ್ ನಲ್ಲಿ ಎಮರ್ಜೆನ್ಸಿ: ಪುನೀತ್ ಮತ್ತು ಟೀಂ ಸೇಫ್)

ತೆಲುಗುನಟ ಹಾಸ್ಯ ನಟ ಬ್ರಹ್ಮಾನಂದಂ ಬಗ್ಗೆ

ಬ್ರಹ್ಮಾನಂದಂ

ಬ್ರಹ್ಮಾನಂದಂ ಕನ್ನೆಗಂಟಿ ಅವರು ಆಂಧ್ರದ ಸಟ್ಟೇನ್ಪಲ್ಲಿಯಲ್ಲಿ 1956ರಲ್ಲಿ ಜನಿಸಿದರು. ಸಿನಿಮಾರಂಗಕ್ಕೆ ಬರುವ ಮೊದಲು ಇವರು ಪಶ್ಚಿಮ ಗೋದಾವರಿ ಜಿಲ್ಲೆಯ ಅತ್ತಿಲಿ ಎನ್ನುವಲಲ್ಲಿ ಉಪನ್ಯಾಸಕರಾಗಿದ್ದರು. 1987ರಲ್ಲಿ ಆಹಾ ನಾ ಪೆಲ್ಲಂಟ ಚಿತ್ರದ ಮೂಲಕ ಚಿತ್ರರಾಂಗಕ್ಕೆ ಪಾದಾರ್ಪಣೆ ಮಾಡಿದರು.

ಪದ್ಮಶ್ರೀ

2009ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿತ್ತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬ್ರಹ್ಮಾನಂದಂ ಅವರಿಗೆ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಧಾನ ಮಾಡಿತ್ತು.

ಗಿನ್ನಿಸ್

ಇಪ್ಪತ್ತು ವರ್ಷಗಳಲ್ಲಿ 754 ತೆಲುಗು ಚಿತ್ರದಲ್ಲಿ ನಟಿಸಿ ಬ್ರಹ್ಮಾನಂದಂ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ 2007ರಲ್ಲಿ ಸ್ಥಾನ ಪಡೆದರು.

ಪ್ರಶಸ್ತಿಗಳು

2005ರಲ್ಲಿ ಅಲ್ಲು ಅವಾರ್ಡ್, 2007ರಲ್ಲಿ ಫಿಲಂಫೇರ್ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ. 2008ರಲ್ಲಿ ನಂದಿ ಪ್ರಶಸ್ತಿ. 2011ರಲ್ಲಿ ಹೈದರಾಬಾದ್ ಟೈಮ್ಸ್ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ. 2012ರಲ್ಲಿ ಸಿಮಾ ಪ್ರಶಸ್ತಿ ಇತ್ಯಾದಿ.

ಬ್ರಹ್ಮಾನಂದಂ

ತೆಲುಗಿನ ಎಲ್ಲಾ ಪ್ರಮುಖ ನಟರ ಜೊತೆ ನಟಿಸಿರುವ ಬ್ರಹ್ಮಾನಂದಂ ನಟಿಸಿರುವ ಇತ್ತೀಚಿನ ಹಿಟ್ ಚಿತ್ರಗಳೆಂದರೆ ಬಾದಶಾ, ಅತ್ತಿರಂಟೀಕಿ ದಾರೇದಿ, ಮಿರ್ಚಿ, ಬಲಪು, ಕ್ಯಾಮರಾಮ್ಯಾನ್ ರಾಮಬಾಬು, ಗಬ್ಬರ್ ಸಿಂಗ್ ಇತ್ಯಾದಿ.

English summary
Ace Telugu comedian Brahmanandam entering into Sandalwood. Legend actor debuting to Kannada film industry with Powerstar Puneet Rajkumar's movie Ninnindale.
Please Wait while comments are loading...