For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಕೋಮಲ್ ಜೊತೆ ತೆಲುಗು ಹಾಸ್ಯನಟ ಆಲಿ

  By Rajendra
  |

  ಪುಂಗಿದಾಸ ಚಿತ್ರದ ಬಳಿಕ ಕೋಮಲ್ ಮತ್ತೊಂದು ಭರ್ಜರಿ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನೃತ್ಯ ನಿರ್ದೇಶಕ ಮುರಳಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ನಮೋ ಭೂತಾನ್ಮ ಎಂದು ಹೆಸರಿಡಲಾಗಿದೆ. ಇದು ತಮಿಳಿನ ಯಶಸ್ವಿ ಚಿತ್ರ 'ಯಾಮಿರುಕ್ಕು ಭಯಮೇ' ರೀಮೇಕ್ ಎಂಬುದು ವಿಶೇಷ.

  ಪ್ರೇಮ್ ಅವರ 'ದಾಸ್ವಾಳ' ಚಿತ್ರದ ಅಭಿನಯಿಸಿದ್ದ ಐಶ್ವರ್ಯಾ ಮೆನನ್ ಈ ಚಿತ್ರದ ನಾಯಕಿ. ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಜಂಪಿಂಗ್ ಸ್ಟಾರ್ ಹರೀಶ್ ರಾಜ್ ಅವರು ಚಿತ್ರದಲ್ಲಿ ಗಮನಾರ್ಹ ಪಾತ್ರ ಪೋಷಿಸುತ್ತಿದ್ದಾರೆ.

  ನಮೋ ಭೂತಾತ್ಮ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ಮೊದಲ ಬಾರಿಗೆ ತೆಲುಗು ಹಾಸ್ಯ ನಟ ಆಲಿ ಅವರು ಈ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಬನ್ನಿ ಒಂದು ಲುಕ್ ಹಾಕೋಣ 'ನಮೋ ಭೂತಾತ್ಮ' ಚಿತ್ರದ ಮೇಲೆ.

  ನೃತ್ಯ ನಿರ್ದೇಶಕ ಮುರಳಿ ಆಕ್ಷನ್ ಕಟ್

  ನೃತ್ಯ ನಿರ್ದೇಶಕ ಮುರಳಿ ಆಕ್ಷನ್ ಕಟ್

  ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿರುವ ಮುರಳಿ ಅವರು ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಅವರು ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದು 600ಕ್ಕೂ ಅಧಿಕ ಹಾಡುಗಳಿಗೆ ಡಾನ್ಸ್ ಮಾಸ್ಟರ್ ಆಗಿ ನೃತ್ಯ ಸಂಯೋಜನೆ ಮಾಡಿದ್ದಾರೆ.

  ಕೋಮಲ್ ಗೂ ಸ್ಟೆಪ್ ಹೇಳಿಕೊಟ್ಟಿದ್ದ ಮುರಳಿ

  ಕೋಮಲ್ ಗೂ ಸ್ಟೆಪ್ ಹೇಳಿಕೊಟ್ಟಿದ್ದ ಮುರಳಿ

  ಕೋಮಲ್ ಅವರಿಗೂ ನೃತ್ಯ ನಿರ್ದೇಶಕರಾಗಿ ಅವರು ಕೆಲಸ ಮಾಡಿ ಸೈ ಎನ್ನಿಸಿಕೊಂಡಿದ್ದರು. ಇದೀಗ ಅವರ ಕೈಗೆ ನಿರ್ದೇಶಕನ ಜವಾಬ್ದಾರಿ ಕೊಟ್ಟಿದ್ದಾರೆ.

  ಆಲಿ ಅವರದು ಚಿತ್ರದಲ್ಲಿ ಅತಿಥಿ ಪಾತ್ರ

  ಆಲಿ ಅವರದು ಚಿತ್ರದಲ್ಲಿ ಅತಿಥಿ ಪಾತ್ರ

  ನಮೋ ಭೂತಾತ್ಮ ಚಿತ್ರಕ್ಕೆ ರಾಜೇಂದ್ರ ಕಾರಂತ್‌ ಅವರ ಸಂಭಾಷಣೆ ಇದ್ದು, ಫ‌ರ್ಹಾನ್‌ ರೋಷನ್‌ (ಎಮಿಲ್‌) ಸಂಗೀತವಿದೆ. ಅರುಳ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇಷ್ಟಕ್ಕೂ ಆಲಿ ಅವರದು ಚಿತ್ರದಲ್ಲಿ ಅತಿಥಿ ಪಾತ್ರ.

  ನಿಖಿತಾ ತುಕ್ರಲ್ ಸಹ ಚಿತ್ರದಲ್ಲಿ ಇದ್ದಾರೆ

  ನಿಖಿತಾ ತುಕ್ರಲ್ ಸಹ ಚಿತ್ರದಲ್ಲಿ ಇದ್ದಾರೆ

  ಈ ಚಿತ್ರದಲ್ಲಿ ಇನ್ನೊಂದು ವಿಶೇಷ ಎಂದರೆ ನಿಖಿತಾ ತುಕ್ರಲ್ ಅವರೂ ಚಿತ್ರದಲ್ಲಿ ಅತಿಥಿ ಪಾತ್ರ ಪೋಷಿಸುತ್ತಿರುವುದು. ಚಿತ್ರದಲ್ಲಿ ಅವರದು ಚಿಕ್ಕ ಮತ್ತು ಚೊಕ್ಕದಾದಂತಹ ಪಾತ್ರ.

  ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಹೇಳಿ ನಿಖಿತಾ

  ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಹೇಳಿ ನಿಖಿತಾ

  ನಿಖಿತಾ ಅವರು ತಮ್ಮ ಪಾತ್ರಕ್ಕ್ಕೆ ತಾವೇ ಡಬ್ಬಿಂಗ್ ಹೇಳಿರುವುದು ಇನ್ನೊಂದು ವಿಶೇಷ. ಬಿಗ್ ಬಾಸ್ ಸೀಸನ್ ಒಂದರ ಸ್ಪರ್ಧಿಯಾಗಿದ್ದಾಗ ಅವರಿಗೆ ಕನ್ನಡ ಬರುತ್ತಿರಲಿಲ್ಲ. ಇದೀಗ ಅವರ ಪಾತ್ರಕ್ಕೆ ಅವರೇ ಡಬ್ಬಿಂಗ್ ಹೇಳಿ ಎಲ್ಲರ ಹುಬ್ಬೇರಿಸಿದ್ದಾರೆ.

  ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ

  ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ

  ಈ ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ. ಎರಡು ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ ನಿರ್ದೇಶಕ ಮುರಳಿ.

  English summary
  Telugu comedy actor makes his Kannada debut. Komal lead film being directed by choreographer turned Murali. The film has been titled as 'Namo Bhootatma' and is a remake of Tamil hit 'Yaamirukka Bayamey'. The film has Aishwarya Menon playing the female lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X