ಕೊನೆಗೂ ತನ್ನ ಆಸೆ ಈಡೇರಿಸಿಕೊಳ್ಳದೆ ಇಹಲೋಕ ತ್ಯಜಿಸಿದ ಹಾಸ್ಯನಟ
ತೆಲುಗು ಚಿತ್ರರಂಗ ಖ್ಯಾತ ಕಾಮಿಡಿ ನಟ ವೇಣು ಮಾಧವ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚಿಗಷ್ಟೆ ಸಿಕಂದರಬಾದ್ ನಲ್ಲಿರುವ ಯಶೋಧ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿಯಿಂದ ವೇಣು ಮಾಧವ್ ಸ್ಥಿತಿ ತೀರ ಗಂಭೀರವಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು(ಸೆಪ್ಟಂಬರ್ 25) ಕೊನೆಯುಸಿರೆಳೆದಿದ್ದಾರೆ.
ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ವೇಣು ಮಾಧವ್ ಅವರಿಗೆ ಯಕೃತ್ ಕಸಿ ಮಾಡುವ ಅವಶ್ಯಕತೆ ಇತ್ತು. ಆದ್ರೆ ಅಷ್ಟರಲ್ಲೆ ಚಿರನಿದ್ರೆಗೆ ಜಾರಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಬಣ್ಣ ಹಚ್ಚುವ ಮೂಲಕ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು.
ರಾಜಕೀಯದಲ್ಲಿ ಬಳೆಯಬೇಕು ಎನ್ನುವುದು ವೇಣು ಮಾಧವ್ ಅವರ ದೊಡ್ಡ ಆಸೆಯಾಗಿತ್ತಂತೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಅಸೆಂಬ್ಲಿ ಎಲೆಕ್ಷನ್ ಗೆ ಸ್ಪರ್ಧೆ ಮಾಡಲು ವೇಣು ಸ್ವಂತ ಊರಾದ ಕೊಡಾಡ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆದ್ರೆ ನಂತರ ನಾಮಪತ್ರವನ್ನು ವಾಪಾಸ್ ಪಡೆದು ಚುನಾವಣೆಯಿಂದ ದೂರ ಸರಿದಿದ್ದರು. ವೇಣು ಮಾಧವ್ ಅವರ ಈ ನಿರ್ಧಾರ ಅಚ್ಚರಿ ಉಂಟುಮಾಡಿತ್ತು. ಆದ್ರೆ ಯಾಕೆ ಹಿಂದೆ ಸರಿದಿದರು ಎನ್ನುವುದು ಯಾರಿಗೂ ಗೊತ್ತಾಗದ ಸತ್ಯ.

ಆದ್ರೆ ಅವರ ಆಸೆ ಮಾತ್ರ ಹಾಗೆ ಜೀವಂತವಾಗಿತ್ತು. ರಾಜಕೀಯಕ್ಕೆ ಎಂಟ್ರಿ ಕೊಟ್ಟು ಜನರ ಸೇವೆ ಮಾಡಬೇಕು ಎನ್ನುವ ದೊಡ್ಡ ಕನಸನ್ನು ಇಟ್ಟುಕೊಂಡಿದ್ದರು. ಆದ್ರೆ ಆನಾರೋಗ್ಯ ಅವರನ್ನು ಏನು ಸಾಧಿಸಲು ಬಿಟ್ಟಿಲ್ಲ. ಸತತ ಆನಾರೋಗ್ಯದ ಕಾರಣ ಸಿನಿಮಾಗಳಲ್ಲು ಭಿನಯಿಸುತ್ತಿರಲಿಲ್ಲ. ಮಿಮಿಕ್ರಿ ನಟನಾಗಿದ್ದ ವೇಣು ಮಾಧವ್ ನಂತರ ಅನೇಕ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಮಿಂಚಿದ್ದಾರೆ. ಸುಮರು 170ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ವೇಣು ಮಾಧವ್.


Click it and Unblock the Notifications











