ನಿರ್ದೇಶಕ ಗೀತ ಕೃಷ್ಣ ಹೇಳಿಕೆಗೆ ಮಾತಿನಲ್ಲೇ ಬಿಸಿ ಮುಟ್ಟಿಸಿದ ಶಿವಣ್ಣ

ಕಳೆದ ವಾರವಷ್ಟೇ ತೆಲುಗು ನಿರ್ದೇಶಕ ಗೀತಾ ಕೃಷ್ಣ ಕನ್ನಡ ಚಿತ್ರರಂಗದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗ ಹಾಗೂ ನಟಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದು ಕನ್ನಡದ ನಟರು, ಹಾಗೂ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ನಿರ್ದೇಶಕ ಗೀತಾಕೃಷ್ಣ ಕೇವಲ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಲ್ಲದೆ, ತಮಿಳು ಚಿತ್ರರಂಗದ ಬಗ್ಗೆಯೂ ಅವಾಚ್ಯ ಪದಗಳನ್ನು ಬಳಕೆ ಮಾತನಾಡಿದ್ದರು. ಇದು ಎರಡು ಚಿತ್ರರಂಗದ ಕೋಪಕ್ಕೆ ಕಾರಣವಾಗಿತ್ತು.

ಯ್ಯೂಟೂಬ್ ಚಾನಲ್‌ವೊಂದರ ಸಂದರ್ಶನವೊಂದರಲ್ಲಿ ಗೀತಾ ಕೃಷ್ಣ ಕನ್ನಡ ಹಾಗೂ ತಮಿಳು ಚಿತ್ರರಂಗ ಜೊತೆಗೆ ನಟಿಯರ ಬಗ್ಗೆ ಬಹಳ ತುಚ್ಚವಾಗಿ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿತ್ತು. ಸದ್ಯ ಇದೇ ವಿಚಾರದ ಬಗ್ಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿ ಮಾತಿನಲ್ಲೇ ಗೀತಾಕೃಷ್ಣಗೆ ಬಿಸಿ ಮುಟ್ಟಿಸಿದ್ದಾರೆ.

 ಗೀತ ಕೃಷ್ಣಗೆ ಮಾತಿನಲ್ಲಿ ಬಿಸಿ ಮುಟ್ಟಿಸಿದ ಶಿವಣ್ಣ

ಗೀತ ಕೃಷ್ಣಗೆ ಮಾತಿನಲ್ಲಿ ಬಿಸಿ ಮುಟ್ಟಿಸಿದ ಶಿವಣ್ಣ

ಕಳೆದ ವಾರ ತೆಲುಗಿನ ನಿರ್ದೇಶಕ ಗೀತ ಕೃಷ್ಣ ಕನ್ನಡ ಚಿತ್ರರಂಗ ಹಾಗೂ ನಟಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದು ಭಾರೀ ವಿವಾದವನ್ನೇ ಸೃಷ್ಟಿ ಮಾಡಿತ್ತು. ಸದ್ಯ ಇದೇ ಹೇಳಿಕೆ ಬಗ್ಗೆ ನಟ ಶಿವರಾಜ್‌ ಕುಮಾರ್ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಯಾರದೋ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ಕನ್ನಡ ಸಿನಿಮಾ ರಂಗ ಏನು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಯಾರೋ ಏನೋ ಅಂದರು ಅಂತ ಪ್ರತಿಕ್ರಿಯೆ ಮಾಡಿದರೆ. ಅದರಿಂದ ಅವರಿಗೆ ಲಾಭ, ಹಾಗಾಗಿ ಅಂತಹವರನ್ನು ದೂರದಲ್ಲೇ ಇಡಬೇಕು," ಎಂದಿದ್ದಾರೆ.

 ತಮಿಳು, ಕನ್ನಡ ಚಿತ್ರರಂಗದ ಬಗ್ಗೆ ತುಚ್ಚ ಹೇಳಿಕೆ

ತಮಿಳು, ಕನ್ನಡ ಚಿತ್ರರಂಗದ ಬಗ್ಗೆ ತುಚ್ಚ ಹೇಳಿಕೆ

ಯ್ಯೂಟೂಬ್ ಚಾನಲ್‌ ಸಂದರ್ಶನದಲ್ಲಿ ಸಂದರ್ಶಕರೊಬ್ಬರು ಚಿತ್ರರಂಗದ ಕುರಿತು ಕೇಳಿದ ಪ್ರಶ್ನೆಗೆ ಗೀತ ಕೃಷ್ಣ ಬೇಕಾಬಿಟ್ಟಿ ಹೇಳಿಕೆ ನೀಡಿದ್ದರು. ಅಸಲಿಗೆ 'ಕಾಸ್ಟಿಂಗ್ ಕೌಚ್' ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ ಅವರಂತಹ ಅಸಹ್ಯದ ಜನ ಇನ್ನೆಲ್ಲೂ ಇಲ್ಲ. ಕನ್ನಡದವರಂತೂ ಇನ್ನು ಅಸಹ್ಯದವರು, ಕೊಳಕು ಜನ. ಕನ್ನಡದಲ್ಲಿ ಸಿನಿಮಾ ಮಾಡಲು ಹೋಗಿದ್ದೆ. ಅಲ್ಲಿನ ಖ್ಯಾತ ಮಹಿಳೆಯೊಬ್ಬಳು ನನನ್ನೇ ಮಂಚಕ್ಕೆ ಕರೆದು ಬಿಟ್ಟಳು. ಹೀಗಾಗಿ ಕನ್ನಡದಲ್ಲಿ ಸಿನಿಮಾ ಮಾಡುವುದೇ ಬೇಡ ಅಂತ ಅಲ್ಲಿಂದ ಓಡಿ ಬಂದೆ. ಕನ್ನಡದವರು ಅಸಹ್ಯ ಜನ. ಅಲ್ಲಿ ತುಂಬಾ 'ಕಾಸ್ಟಿಂಗ್ ಕೌಚ್' ಇದೆ ಎಂದು ಬಾಯಿಗೆ ಬಂದಂತೆ ಗೀತ ಕೃಷ್ಣ ನಾಲಿಗೆ ಹರಿಬಿಟ್ಟಿದ್ದರು.

 ನಾನು ಹಾಗೆ ಹೇಳೇ ಇಲ್ಲ ಎಂದ ಗೀತಕೃಷ್ಣ

ನಾನು ಹಾಗೆ ಹೇಳೇ ಇಲ್ಲ ಎಂದ ಗೀತಕೃಷ್ಣ

ಕನ್ನಡ ಹಾಗೂ ತಮಿಳು ಚಿತ್ರರಂಗದ ಬಗ್ಗೆ ಗೀತಕೃಷ್ಣ ನೀಡಿದ್ದ ಹೇಳಿಕೆ ಭಾರೀ ವಿವಾದವನ್ನೇ ಸೃಷ್ಟಿ ಮಾಡಿತ್ತು. ಈ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೂ ಗುರಿಯಾಗಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ತಮ್ಮ ಹೇಳಿಕೆ ಬಗ್ಗೆ ಗೀತ ಕೃಷ್ಣ ಉಲ್ಟಾ ಹೊಡೆದಿದ್ದಾರೆ. ತಾನು ಆ ರೀತಿಯಲ್ಲಿ ಮಾತನಾಡಿಲ್ಲ. ತಮ್ಮ ಮಾತನ್ನು ತಪ್ಪಾಗಿ ತಿರುಚಿ ತೋರಿಸಲಾಗಿದೆ. ನಾನು ಕೇವಲ ಕನ್ನಡ ಚಿತ್ರರಂಗದ ಬಗ್ಗೆ ಮಾತ್ರ ಮಾತನಾಡಿಲ್ಲ. ಎಲ್ಲಾ ಚಿತ್ರರಂಗದಲ್ಲೂ 'ಕಾಸ್ಟಿಂಗ್ ಕೌಚ್' ಇದೆ ಎಂದಿದ್ದೆ. ಆದರೆ, ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಯೂಟರ್ನ್ ಹೊಡೆದಿದ್ದಾರೆ.

 ವಿಷ್ಣುವರ್ಧನ್ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಹೇಳಿದ್ದೇನು?

ವಿಷ್ಣುವರ್ಧನ್ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಹೇಳಿದ್ದೇನು?

ತೆಲುಗಿನ ಪೋಷಕ ನಟ ವಿಜಯ್ ರಂಗರಾಜು ದಶಕಗಳ ಹಿಂದೆ ವಿಷ್ಣುವರ್ಧನ್ ಜೊತೆ ನಟಿಸಿದ್ದರ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಸಂದರ್ಭದಲ್ಲಿ ದಿ. ವಿಷ್ಣುವರ್ಧನ್ ಬಗ್ಗೆ ಅಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ ತಾವು ಸಿನಿಮಾ ಶೂಟಿಂಗ್‌ನಲ್ಲಿ ವಿಷ್ಣು ಕಾಲರ್ ಹಿಡಿದು ಜಗಳ ಮಾಡಿದ್ದೇ ಎಂದಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ವಿಜಯ್ ರಂಗರಾಜು ತಾನು ತಪ್ಪಾಗಿ ದಿ. ವಿಷ್ಣುವರ್ಧನ್‌ ಬಗ್ಗೆ ಹೇಳಿಕೆ ಕೊಟ್ಟೆ ಎಂದು ಕನ್ನಡಿಗರ ಬಳಿ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದರು.

More from Filmibeat

English summary
Telugu Director Geetha Krishna controversy Statement Shivanna Reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X