'ಡಿ-ಬಾಸ್' ಭಕ್ತರಿಗೆ ಭರ್ಜರಿ ಸುದ್ದಿ: ದರ್ಶನ್ ಭೇಟಿ ಮಾಡಿದ 'ರಂಗಸ್ಥಳಂ' ನಿರ್ದೇಶಕ ಸುಕುಮಾರ್
Recommended Video

ತೆಲುಗು ನಿರ್ದೇಶಕ ಸುಕುಮಾರ್ ಇತ್ತೀಚಿಗಷ್ಟೆ ಬೆಂಗಳೂರಿಗೆ ಬಂದಿದ್ದರು. ಸೂರಜ್ ಗೌಡ ಅಭಿನಯದ 'ಲಕ್ಷ್ಮಿತನಯ' ಚಿತ್ರದ ಮುಹೂರ್ತಕ್ಕೆ ಅತಿಥಿಯಾಗಿ ಆಗಮಿಸಿದ್ದ ಸ್ಟಾರ್ ಡೈರೆಕ್ಟರ್, ಡಾ ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು.
ಅಣ್ಣಾವ್ರ ಬಗ್ಗೆ ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಹೊಗಳಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ, ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಸ್ಯಾಂಡಲ್ ವುಡ್ ಡಿ-ಬಾಸ್ ದರ್ಶನ್ ಅವರನ್ನ ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ.
'ಯಜಮಾನ' ಚಿತ್ರದ ಚಿತ್ರೀಕರಣದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಖ್ಯಾತ ನಿರ್ದೇಶಕ ಸುಕುಮಾರ್ ಚರ್ಚೆ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದೆ. ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸದೇ ಇರೋ ದರ್ಶನ್ ಅವರನ್ನ ತೆಲುಗಿನ ಸೂಪರ್ ಸ್ಟಾರ್ ಡೈರೆಕ್ಟರ್ ಒಬ್ಬರು ಹುಡುಕಿಕೊಡು ಬಂದು ಮಾತನಾಡಿಸಿದ್ದಾರೆ ಅಂದ್ರೆ ಅಲ್ಲೊಂದು ವಿಶೇಷ ಇರಬೇಕು ಅಲ್ವಾ.? ಮುಂದೆ ಓದಿ......

'ಯಜಮಾನ'ನನ್ನ ಭೇಟಿ ಮಾಡಿದ ಸುಕುಮಾರ್
ತೆಲುಗು ಚಿತ್ರರಂಗದಲ್ಲಿ ಬ್ಲ್ಯಾಕ್ ಬಸ್ಟರ್ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಸುಕುಮಾರ್ ಕನ್ನಡದ ಚಾಲೆಂಜಿಂಗ್ ಸ್ಟಾರ್ ನ ಭೇಟಿ ಮಾಡಿರುವುದು ಈಗ ಹಾಟ್ ಟಾಪಿಕ್. ಇದು ಸಹಜವಾದ ಭೇಟಿನಾ ಅಥವಾ ಯಾವುದಾದರೂ ಉದ್ದೇಶದಿಂದ ಮಾಡಿರುವ ಭೇಟಿನಾ ಎಂಬುದು ಸದ್ಯಕ್ಕೆ ಮಾಹಿತಿ ಇಲ್ಲ. ಬಟ್, ಈ ಭೇಟಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಸಿನಿಮಾ ಮಾಡೋ ಪ್ಲಾನ್ ಇರಬಹುದು.?
'ಲಕ್ಷ್ಮಿತನಯ' ಚಿತ್ರದ ಮುಹೂರ್ತದ ವೇಳೆ ಮಾತನಾಡಿದ್ದ ನಿರ್ದೇಶಕ ಸುಕುಮಾರ್ ''ಅವಕಾಶ ಸಿಕ್ಕರೇ ಖಂಡಿತವಾಗಿ ಕನ್ನಡದಲ್ಲಿ ಸಿನಿಮಾ ಮಾಡ್ತೀನಿ. ನನ್ನ ಜೀವನದ ಒಂದು ಕನ್ನಡ ಸಿನಿಮಾ ಮಾಡೇ ಮಾಡ್ತೀನಿ. ಅದು ನನಗೂ ಆಸೆ ಇದೆ'' ಎಂದು ಹೇಳಿಕೊಂಡಿದ್ದಾರೆ. ಇದಾದ ಬಳಿಕ 'ಡಿ-ಬಾಸ್' ಭೇಟಿ ಕುತೂಹಲ ಮೂಡಿಸಿದೆ. ಬಹುಶಃ ಸುಕುಮಾರ್ ಅವರಿಗೆ ದರ್ಶನ್ ಜೊತೆ ಸಿನಿಮಾ ಮಾಡುವ ಪ್ಲಾನ್ ಇರಬಹುದಾ.? ಗೊತ್ತಿಲ್ಲ.

'ದಾಸ'ನ ಗತ್ತು ಪರಭಾಷಿಗರಿಗೂ ಗೊತ್ತು
ಅಂದ್ಹಾಗೆ, ದರ್ಶನ್ ಇದುವರೆಗೂ ಬರಿ ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡ್ತಿದ್ದಾರೆ. ದರ್ಶನ್ ಸಿನಿಮಾಗಳು ತಮಿಳು, ಹಿಂದಿ ಹಾಗೂ ತೆಲುಗಿಗೆ ಡಬ್ ಆಗಿರುವುದು ಬಿಟ್ಟರೇ ಆ ಭಾಷೆಗಳಲ್ಲಿ ಅಭಿನಯಿಸಿಲ್ಲ. ಆದ್ರೂ, ಚಾಲೆಂಜಿಂಗ್ ಸ್ಟಾರ್ ಕ್ರೇಜ್ ಎನ್ನುವುದು ಪರಭಾಷೆಯ ನಿರ್ದೇಶಕರಿಗೂ ಗೊತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆ.

ಸಿನಿಮಾ ಬರಲಿ ಎನ್ನುತ್ತಿದ್ದಾರೆ ಅಭಿಮಾನಿಗಳು
ಸುಕುಮಾರ್ ಮತ್ತು ದರ್ಶನ್ ಭೇಟಿಯಾಗಿರುವ ಫೋಟೋಗಳು ವೈರಲ್ ಆಗಿರುವುದನ್ನ ನೋಡಿದ ಅಭಿಮಾನಿಗಳು, ''ಇವರಿಬ್ಬರ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಬರಲಿ. ಅದು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸುತ್ತೆ'' ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ.

ಸೂಪರ್ ಹಿಟ್ ಚಿತ್ರಗಳ ಸರದಾರ
ಅಂದ್ಹಾಗೆ, ಸುಕುಮಾರ್ ಟಾಲಿವುಡ್ ಸೂಪರ್ ಸ್ಟಾರ್ ಹಾಗೂ ಸಕ್ಸಸ್ ಫುಲ್ ನಿರ್ದೇಶಕ. ಅಲ್ಲು ಅರ್ಜುನ್ ಅಭಿನಯಿಸಿದ್ದ 'ಆರ್ಯ' ಚಿತ್ರದ ಮೂಲಕ ಡೈರೆಕ್ಷನ್ ಆರಂಭಿಸಿದ್ದ ಸುಕುಮಾರ್, 'ಆರ್ಯ 2', '100% ಲವ್', 'ನೇನೊಕ್ಕಡೆ', 'ಕುಮಾರಿ 21 ಎಫ್', 'ನಾನ್ನಕೂ ಪ್ರೇಮತೋ' ಹಾಗೂ 'ರಂಗಸ್ಥಳಂ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ.

'ವೀರಂ' ರೀಮೇಕ್ ನಲ್ಲಿ ದರ್ಶನ್
ಕುರುಕ್ಷೇತ್ರ, ಯಜಮಾನ ನಂತರ ದರ್ಶನ್ ತಮಿಳಿನ ಸೂಪರ್ ಹಿಟ್ ಸಿನಿಮಾ ವೀರಂ ಚಿತ್ರದ ರೀಮೇಕ್ ನಲ್ಲಿ ನಟಿಸುತ್ತಿದ್ದಾರೆ. ಎಂ.ಡಿ ಶ್ರೀಧರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 'ಒಡೆಯ' ಎಂದು ಟೈಟಲ್ ಇಡಲಾಗಿದೆ.

ದರ್ಶನ್ ಗೆ ಸುಕುಮಾರ್ ಆಕ್ಷನ್ ಕಟ್.!
ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಸ್ಟಾರ್ ನಿರ್ದೇಶಕ ಸುಕುಮಾರ್ ಅವರು, ಚಾಲೆಂಜಿಂಗ್ ಸ್ಟಾರ್ ಗೆ ಆಕ್ಷನ್ ಕಟ್ ಹೇಳಲು ಮನಸಗ್ಸು ಮಾಡಿದ್ರು ಅಚ್ಚರಿಯಿಲ್ಲ. ಬಹುಶಃ ಈ ನಿರೀಕ್ಷೆ ನಿಜಾ ಆಗುತ್ತಾ ಮುಂದಿನ ದಿನದಲ್ಲಿ ಕಾದುನೋಡೋಣ.


Click it and Unblock the Notifications











